ಮಂಗಳೂರು: ಕಡಿದು ಬಿದ್ದ ವಿದ್ಯುತ್ ತಗುಲಿ ಇಬ್ಬರು ರಿಕ್ಷಾ ಚಾಲಕರು ಸಾವು..!

ಮಂಗಳೂರು: ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ರಿಕ್ಷಾ ಚಾಲಕರು ಮೃತಪಟ್ಟ ಘಟನೆ ಮಂಗಳೂರು ರೊಸಾರಿಯೋ ಬಳಿ ನಡೆದಿದೆ. ಮೃತಪಟ್ಟ ರಿಕ್ಷಾ ಚಾಲಕರನ್ನು ರಾಜು ಮತ್ತು ದೇವರಾಜು ಎಂದು ಗುರುತಿಸಲಾಗಿದೆ. ಒಬ್ಬರು ಪುತ್ತೂರು ಹಾಗೂ ಇನ್ನೊಬ್ಬರು ಸಕಲೇಶಪುರದವರು. ಇಬ್ಬರೂ ಪಾಂಡೇಶ್ವರದ ರೊಸಾರಿಯೋ ಚರ್ಚ್ ಹಿಂಬದಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದರು. ಬೆಳಗ್ಗೆ 4.30 ರ ಸುಮಾರಿಗೆ ಒಬ್ಬರು ರಿಕ್ಷಾ ಸ್ವಚ್ಚ ಗೊಳಿಸಲು ಹೊರಬಂದಿದ್ದು, ರಿಕ್ಷಾ ತೊಳೆಯುವ ವೇಳೆ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ…

Read More

ಮಂಗಳೂರು: ರಸ್ತೆ ಗುಂಡಿಗೆ ಬಿದ್ದ ಸವಾರ – ಗುಂಡಿಯಲ್ಲೇ ಸ್ಕೂಟರ್ ಇಟ್ಟು ಪ್ರತಿಭಟನೆ..!

ಮಂಗಳೂರು : ಹೆದ್ದಾರಿ ಕಾಮಗಾರಿಗಳ ಅವ್ಯವಸ್ಥೆಗೆ ವಾಹನ ಸವಾರರು ಹೈರಾಣಾಗಿ ಹೋಗಿದ್ದು, ಸುರತ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅರೆಬರೆ ಕಾಂಕ್ರೀಟ್ ಹಾಗೂ ಡಾಂಬರು ಹಾಕಿದ್ದು ಇದೀಗ ಭಾರಿ ಮಳೆಗೆ ಹೆದ್ದಾರಿ ಹೊಂಡಮಯವಾಗಿದೆ ಈ ಹೊಂಡಕ್ಕೆ ಸ್ಕೂಟರ್ ಸವಾರರೊಬ್ಬರು ಬಿದ್ದು ಗಾಯಗೊಂಡಿದ್ದಾರೆ. ಇದರಿಂದ ಬೇಸತ್ತ ಅವರು, ತಾವು ಬಿದ್ದ ಹೊಂಡದಲ್ಲೇ ತಮ್ಮ ಸ್ಕೂಟರ್ ನಿಲ್ಲಿಸಿ, ತಾವೂ ಅದರ ಪಕ್ಕದಲ್ಲೇ ನಿಂತು ಈ ದುರವಸ್ಥೆಯ ಬಗ್ಗೆ ಪ್ರತಿಭಟನೆ ನಡೆಸಿದರು. ಅಲ್ಲದೇ, ಹೆದ್ದಾರಿಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರಿಗೂ…

Read More

ಭಾರೀ ಮಳೆ : ನಾಳೆ ದ.ಕ. ಜಿಲ್ಲಾದ್ಯಂತ ಶಾಲೆಗಳಿಗೆ ರಜೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 27ರಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಿನಾಂಕ: 27-06-2024 ರಂದು ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ…

Read More

ಮಂಗಳೂರು: ರಸ್ತೆಯನ್ನು ಅಗೆದು ಹಾಕಿರುವ ವಿಚಾರದಲ್ಲಿ ವಕೀಲ ದಂಪತಿ ಮೇಲೆ ಹಲ್ಲೆ..!

ಮಂಗಳೂರು: ನಗರದ ಜೆಪ್ಪಿನಮೊಗರು ಎಂಬಲ್ಲಿ ರಸ್ತೆಯನ್ನು ಅಗೆದು ಹಾಕಿರುವ ವಿಚಾರದಲ್ಲಿ ಗಲಾಟೆ ನಡೆದು ವಕೀಲ ದಂಪತಿಗೆ ಹಲ್ಲೆ ನಡೆಸಿ, ಮಾನಭಂಗಕ್ಕೆ ಯತ್ನಿಸಿದ್ದಾರೆಂದು ಸ್ಥಳೀಯ ವ್ಯಕ್ತಿ ರಾಬರ್ಟ್ ವೆಲೆರಿಯನ್ ಮೆಂಡೋನ್ಸಾ ಅವರ ಮೇಲೆ ದೂರು ದಾಖಲಾಗಿದೆ.  ನ್ಯಾಯವಾದಿ ಜಯಪ್ರಕಾಶ್‌ ಅವರ ಮನೆಗೆ ಹೋಗುವ ದಾರಿಯ ವಿಚಾರದಲ್ಲಿ ಸ್ಥಳೀಯ ರಾಬರ್ಟ್ ವೆಲೆರಿಯನ್ ಮೆಂಡೋನ್ಸಾ ಅವರ ನಡುವೆ ತಕಾರಾರು ಎದ್ದಿತ್ತು. ಈ ಬಗ್ಗೆ ಎರಡೂ ಕಡೆಯವರ ನಡುವೆ ಈ ಹಿಂದೆಯೇ ಜಗಳ ನಡೆದಿತ್ತು. ಈ ನಡುವೆ ಜಾಗದ ಮಾಲಕ ರಾಬರ್ಟ್ ವೆಲೆರಿಯನ್…

Read More

ಮಂಗಳೂರು: ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತ್ಯು..!

ಮಂಗಳೂರು: ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಇಬ್ಬರು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರ ಎಂಬಲ್ಲಿ ನಡೆದಿದೆ. ಮೃತರನ್ನು ಯಾಸಿರ್(45),ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಎಂದು ಗುರುತಿಸಲಾಗಿದೆ. ಜೋರಾಗಿ ಸುರಿದ ಮಳೆಗೆ ಮನೆಯ ಗೋಡೆ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ. ಮನೆಯ ಅವಶೇಷಗಳ ಅಡಿಯಿಂದ ಮೂವರ ಮೃತದೇಹಗಳನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಬಾಲಕಿಯೊಬ್ಬಳ ಮೃತದೇಹಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು…

Read More

ಬಂಟ್ವಾಳ: ಮೂರು ಧಾರ್ಮಿಕ ಕೇಂದ್ರ ಹಾಗೂ ಶಿಶುಮಂದಿರಕ್ಕೆ ನುಗ್ಗಿದ ಕಳ್ಳರು..!

ಬಂಟ್ವಾಳದ ಎರಡು ಗ್ರಾಮಗಳಲ್ಲಿರುವ ಮೂರು ಧಾರ್ಮಿಕ ಕೇಂದ್ರ ಹಾಗೂ ಶಿಶುಮಂದಿರವೊಂದಕ್ಕೆ ನುಗ್ಗಿರುವ ಕಳ್ಳರು ನಗದು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ನರಿಕೊಂಬು ಗ್ರಾಮದಲ್ಲಿರುವ ಪೊಯಿತಾಜೆ ಏರಮಲೆ ಶ್ರೀ ಕೋದಂಡ ರಾಮ ಭಜನಾ ಮಂದಿರದ ಮುಂಬಾಗಿಲು ಮುರಿದ ಒಳನುಗ್ಗಿರುವ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ 3000 ಸಾವಿರ ನಗದು ಕಳವುಗೈದಿದ್ದಾರೆ. ಹಾಗೆಯೇ ಒಳಗಿದ್ದ ಗೊದ್ರೇಜ್ ಬಾಗಿಲು ಮುರಿದು ಅದರೊಳಗಡೆ ಜಾಲಾಡಿ ಅಗತ್ಯ ಪತ್ರಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿದ್ದಾರೆ. ನರಿಕೊಂಬು ಗ್ರಾಮದ ಅಂತರ ಎಂಬಲ್ಲಿ ಸಾಲ್ಯಾನ್ ಕುಟುಂಬದ ತರವಾಡು ದೈವಸ್ಥಾನವಿದೆ. ಈ…

Read More

ತುಳುನಾಡಿನ ದೈವ-ದೇವರ ಹೆಸರಿನಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ದ.ಕ.ಜಿಲ್ಲಾ ನೂತನ ಸಂಸದ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದ ಬ್ರಿಜೇಶ್ ಚೌಟ ಅವರು ಜೂ.24ರ ಸಂಜೆ 4ಗಂಟೆಗೆ ಸಂಸತ್ತಿನಲ್ಲಿ ತುಳುನಾಡಿನ ದೈವ-ದೇವರ ಹೆಸರಿನಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನದ ಕೊನೆಗೆ “ಮಾತೆರೆಗ್ಲಾ ಸೊಲ್ಮೆಲು” ಎಂದು ತುಳುಭಾಷೆಯಲ್ಲಿ ಧನ್ಯವಾದ ಹೇಳಿದ್ದಾರೆ. ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಸೋಮವಾರ ಸಂಸತ್ತಿನ ಅಧಿವೇಶನದಲ್ಲಿ ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಪ್ರಮಾಣ ವಚನದ ವೇಳೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದ ಬ್ರಿಜೇಶ್ ಚೌಟ ಬಿಳಿ ಅಂಗಿ…

Read More

ಬಂಟ್ವಾಳ ಕುಲಾಲ ಸೇವಾದಳದ ಚೈತನ್ಯ 3.0 ಕಾರ್ಯಾಗಾರ ಪುನರಾರಂಭ

ಬಂಟ್ವಾಳ : ಲಕ್ಷ್ಮೀ ಚಂಚಲೆ, ಯಾವಗಲೂ ಒಬ್ಬರ ಬಳಿ ಇರುವುದಿಲ್ಲ ಆದರೆ ಶಾರದೆ ಹಾಗಲ್ಲ. ಅವಳನ್ನು ಒಲಿಸಲು ತುಂಬಾ ಪ್ರಯತ್ನ ಮಾಡಬೇಕು. ಆದರೆ ಒಮ್ಮೆ ಒಲಿದರೆ ಮತ್ತೆ ಶಾಶ್ವತವಾಗಿ ನಮ್ಮ ಬಳಿಯೇ ಇರುತ್ತಾಳೆ. ಯಾವುದೇ ಕಲೆಯನ್ನು ಒಮ್ಮೆ ಪ್ರಯತ್ನ ಪಟ್ಟು ಅಭ್ಯಾಸ ಮಾಡಿದರೆ ಮತ್ತೆ ಅವರನ್ನು ಬಿಟ್ಡು ಹೋಗುವುದಿಲ್ಲ ಎಂದು ನೃತ್ಯ ನಿರ್ದೇಶಕ ಮಹೇಶ್ ಕುಲಾಲ್ ಕಡೇಶಿವಾಲಯ ತಿಳಿಸಿದ್ದಾರೆ.ಅವರು ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಭವನದಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ…

Read More

ಕುಟುಂಬ ವೈದ್ಯ ಪದ್ಧತಿ ಅಂದು ಇಂದು ಮುಂದೂ.. ಈ ಬಾರಿಯ ಕುಟುಂಬ ವೈದ್ಯರ ರಾಜ್ಯ ಸಮ್ಮೇಳನ ಮಂಗಳೂರಲ್ಲಿ- ಡಾ.ಕುಲಾಲ್.

ಹತ್ತು ವರ್ಷಗಳ ಬಳಿಕ ಮತ್ತೊಮ್ಮೆ ಕುಟುಂಬ ವೈದ್ಯರ ರಾಜ್ಯ ಸಮ್ಮೇಳನವನ್ನ ಮಾಡುವ ಅವಕಾಶ ಮಂಗಳೂರಿಗೆ ದೊರೆತಿದೆ. ಭಾರತೀಯ ವೈದ್ಯಕೀಯ ಸಂಘದ ಕುಟುಂಬ ವೈದ್ಯರ ವಿಭಾಗ ಮತ್ತು ಇಪ್ಪತ್ತನೇ ವರ್ಷದ ಸಂಭ್ರಮದಲ್ಲಿ ಇರುವ ಮಂಗಳೂರಿನ ಕುಟುಂಬ ವೈದ್ಯರಸಂಘ ಆಶ್ರಯದಲ್ಲಿ ಈ ಬಾರಿ ರಾಜ್ಯಕುಟುಂಬವೈದ್ಯರ ಸಮ್ಮೇಳನ ಜರುಗಲಿದೆ ಎಂದು ಅಧ್ಯಕ್ಷರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಲ್ತೂರು ತಿಳಿಸಿದರು. ನಗರದಲ್ಲಿ ಕುಟುಂಬ ವೈದ್ಯರ ಸಂಘಟನೆಯಲ್ಲಿ ನ್ಯೂಮೋನಿಯಾ ಬಗ್ಗೆ ಜರುಗಿದ ವೈದ್ಯಕೀಯ ಕಾರ್ಯಾಗಾರದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತಾಡುತ್ತಿದ್ದರು. 2024 ರ…

Read More

ಮಂಗಳೂರು: ಬೋಳಿಯಾ‌ರ್ ಘಟನೆ ಬಲವಂತದ ಕ್ರಮ ಬೇಡ – ಹೈಕೋರ್ಟ್

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ದಿನದಂದು ಬೋಳಿಯಾರ್‌ನಲ್ಲಿ ಮಸೀದಿ ಎದುರು ಬಿಜೆಪಿ ವಿಜಯೋತ್ಸವ ಮೆರವಣಿಗೆ ವೇಳೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಬಂಧಿತ ಹಿಂದೂ ಸಂಘಟನೆಗೆ ಸೇರಿದ ಆರೋಪಿಗಳ ವಿರುದ್ಧ ಯಾವುದೇ ಬಲವಂತದ ಹಾಗೂ ಒತ್ತಡದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಶುಕ್ರವಾರ ಹೈಕೋರ್ಟ್ ನಿರ್ದೇಶನ ನೀಡಿದೆ. ಕಳೆದ ಜೂ.9ರಂದು ಬೋಳಿಯಾರ್‌ನಲ್ಲಿ ವಿಜಯೋತ್ಸವದಲ್ಲಿ ಘೋಷಣೆ ಕೂಗಿದ ವೇಳೆ ಹಲ್ಲೆ ಘಟನೆ ನಡೆದಿದೆ. ಘಟನೆಯಲ್ಲಿ ಐದು ಮಂದಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದರು. ಘಟನೆ ಬಗ್ಗೆ ಗಾಯಾಳುಗಳು ಕೊಣಾಜೆ…

Read More