ಬಜಪೆ: ಫೈನಾನ್ಸ್‌ಗೆ ನುಗ್ಗಿ ಅ್ಯಸಿಡ್ ಹಾಕಿ ಚಿನ್ನಾಭರಣ ಕಳುವಿಗೆ ಯತ್ನ – ಮೂವರ ಬಂಧನ

ಬಜಪೆ: ಬಜಪೆ ಮಾರುಕಟ್ಟೆ ಸಮೀಪದ ಫೈನಾನ್ಸ್‌ಗೆ ನುಗ್ಗಿ ಅಲ್ಲಿದ್ದ ಮಹಿಳೆಯರ ಮೇಲೆ ಆಸಿಡ್ ಹಾಕಿ ಚಿನ್ನಾಭರಣಗಳನ್ನು ಸುಲಿಗೆ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಬಜಪೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಬಜಪೆ ಶಾಂತಿಗುಡ್ಡೆ ನಿವಾಸಿ ಪ್ರಿತೇಶ್ (31), ಸುರತ್ಕಲ್ ಕೋಡಿಕೆರೆ ನಿವಾಸಿ ಧನರಾಜ್ (30) ಹಾಗೂ ಬಾಳ ಗ್ರಾಮದ ಕುಂಬಳಕೆರೆ ನಿವಾಸಿ ಕುಸುಮಾಕರ (37) ಎಂದು ಗುರುತಿಸಲಾಗಿದೆ. ಬಜಪೆ ಗ್ರಾಮದ ನಿವಾಸಿ ಲೆಸ್ಲಿ ಡಿ…

Read More

ಮಂಗಳೂರು: ಅಪ್ರಾಪ್ತ ಬಾಲಕಿಗೆ ಬಸ್ಸಿನಲ್ಲಿ ಲೈಂಗಿಕ ಕಿರುಕುಳ ನೀಡಿದ ಉಸ್ತಾದ್‌- ಸಾರ್ವಜನಿಕರಿಂದ ಗೂಸಾ

ಮಂಗಳೂರು :  ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ KSRTC ಬಸ್ಸಿನಲ್ಲಿ ಅಪ್ರಾಪ್ತ ಹೆಣ್ಣು ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದ್ದು ದುರುಳ ಉಸ್ತಾದ್‌ ಗೆ  ಮಹಿಳೆಯರು ಗೂಸಾ ನೀಡಿ  ತದಕಿದ್ದಾರೆ. ಕೆಎಸ್​ಆರ್​ಟಿಸಿ ಬಸ್​ನಲ್ಲಿ ಆರೋಪಿ ಉಸ್ತಾದ್  ಪ್ರಯಾಣ ಮಾಡುತ್ತಿದ್ದ. ಈ ವೇಳೆ  ಅಪ್ರಾಪ್ತ ಬಾಲಕಿಯನ್ನು ಪಕ್ಕದಲ್ಲಿ ಕೂರಲು ಹೇಳಿದ್ದಾನೆ . ಮೈ ಕೈಗೆಲ್ಲ ಕೈ ಹಾಕಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾರಂಭಿದ್ದಾನೆ. ಇದನ್ನು ಪಕ್ದಲ್ಲಿದ್ದ ಸಹ ಪ್ರಯಾಣಿಕರು ಗಮನಿಸಿ ಬಾಲಕಿಯ ತಾಯಿಗೆ ಹೇಳಿದ್ದಾರೆ. ಇದರಿಂದ  ರೊಚ್ಚಿಗೆದ್ದ…

Read More

ಮಂಗಳೂರು: ನಾಲ್ಕು ದರೋಡೆ ಪ್ರಕರಣ ಬೇಧಿಸಿದ ಪೊಲೀಸರು – ಆರು ಮಂದಿ ಅರೆಸ್ಟ್

ಮಂಗಳೂರು: ನಗರದ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೂರು ಮನೆಗಳವು ಹಾಗೂ ಪಂಪ್‌ವೆಲ್‌ ಕಪಿತಾನಿಯೋ ಬಳಿಯ ಅಂಗಡಿಗಳವು ಪ್ರಕರಣವನ್ನು ಬೇಧಿಸಿದ ಮಂಗಳೂರು ಪೊಲೀಸರು ನಾಲ್ವರನ್ನು ಬಂಧಿಸಿ 10ಲಕ್ಷ ನಗದು ಸೇರಿದಂತೆ 12.50ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಜೇಶ್ವರದ ಮಹಮ್ಮದ್ ಸಿಯಾಬ್, ಬಜ್ಪೆಯ ಮಹಮ್ಮದ್ ಅರ್ಫಾಝ್, ಸಫ್ವಾನ್ ಹಾಗೂ ಉತ್ತರಪ್ರದೇಶ ಮೂಲದ ಮಹಮ್ಮದ್ ನಜೀರ್ ಹೌಸಿಲ್ ಖಾನ್ ಮತ್ತು ಇಲಿಯಾಸ್ ಖಾನ್ ಬಂಧಿತ ಆರೋಪಿಗಳು. ಕಳೆದ 2-3 ತಿಂಗಳಿನಿಂದ ಕೊಣಾಜೆ ಠಾಣಾ ವ್ಯಾಪ್ತಿಯಲ್ಲ 3ಮನೆಗಳಲ್ಲಿ ಕಳವು ನಡೆದಿತ್ತು. ಪ್ರಕರಣದಲ್ಲಿ…

Read More

ಮಂಗಳೂರು: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಕಚೇರಿ ಉದ್ಘಾಟನೆ

ಮಂಗಳೂರು: ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಕಚೇರಿಯನ್ನು ಜುಲೈ 12 ರಂದು ಶುಕ್ರವಾರ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ನ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್, ತುಳುನಾಡು ಹಿಂದುತ್ವದ ನಾಡು, ಈ ಸ್ಥಳದಲ್ಲಿ ನಾವು ದೈವವನ್ನು ಆರಾಧಿಸುತ್ತೇವೆ, ದೇವರ ದಯೆ ಮತ್ತು ಜನರ ಬೆಂಬಲದಿಂದ ನಮ್ಮ ಕ್ಷೇತ್ರಕ್ಕೆ ಕ್ಯಾಪ್ಟನ್ ಸಂಸದ ಕ್ಯಾಪ್ಟನ್ ಬ್ರಿಜೇಶ್ ಸಿಕ್ಕಿದ್ದಾರೆ ಎಂದರು. ಗಡಿಯಲ್ಲಿ ಸೈನಿಕರು ಹೇಗೆ ಕೆಲಸ ಮಾಡುತ್ತಾರೆಯೋ ಅದೇ ರೀತಿ ಜನರ ಹಕ್ಕುಗಳಿಗಾಗಿ ಚೌಟ ಕೆಲಸ ಮಾಡುತ್ತಾರೆ…

Read More

ಮಂಗಳೂರು: ಲವ್‌ ಜಿಹಾದ್ ಗೆ ಬಲಿಯಾದ ಪುತ್ರಿಯನ್ನು ರಕ್ಷಿಸುವಂತೆ ಯುವತಿಯ ತಂದೆ ಕಣ್ಣೀರು..!

ಮಂಗಳೂರು: ಜಿಲ್ಲೆಯಲ್ಲಿ ಮತ್ತೆ ಲವ್‌ ಜಿಹಾದ್ ಕರಿನೆರಳು ಕಾಣಿಸಿಕೊಂಡಿದೆ. ನಟೋರಿಯಸ್ ಕ್ರಿಮಿನಲ್‌ನೊಂದಿಗೆ ಕಾಸರಗೋಡಿನ ಹಿಂದೂ ಯುವತಿ ಪರಾರಿಯಾಗಿದ್ದಾಳೆ. ಇದೀಗ ಆಕೆಯ ತಂದೆ ತಮ್ಮ ಪುತ್ರಿಯನ್ನು ರಕ್ಷಿಸಿಕೊಡುವಂತೆ ವಿಎಚ್‌ಪಿ ಕಚೇರಿ ಮುಂದೆ ಕಣ್ಣೀರು ಹಾಕಿದ್ದಾರೆ. ಈ ದೃಶ್ಯ ಎಂಥವರ ಕರಳು ಕಿವುಚುವಂತಿತ್ತು. ಇನ್ನೂ 20ರ ಪ್ರಾಯದ ಈಕೆ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿನಿಯಾಗಿದ್ದಾಳೆ. ಉಳ್ಳಾಲದ ಬಂದಿಕೊಟ್ಯದಲ್ಲಿ ಸಹೋದರಿ ಮನೆಯಲ್ಲಿದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದಳು. ಈಕೆಗೆ ಕಾಸರಗೋಡಿನ ಮಹಮ್ಮದ್ ಅಶ್ಫಕ್‌ನೊಂದಿಗೆ ಪ್ರೇಮಾಂಕುರವಾಗಿದೆ. ಜೂನ್ 30ರಂದು ಆತನೊಂದಿಗೆ ಉಳ್ಳಾಲದ ಮನೆಯಿಂದ ಪರಾರಿಯಾಗಿದ್ದಾಳೆ….

Read More

ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧದ ವಿಚಾರಣೆಗೆ ಹೈಕೋರ್ಟ್‌ ಮಧ್ಯಂತರ ತಡೆ..!

ಮೈಸೂರು: ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖಂಡ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ವಿರುದ್ಧ ಶ್ರೀರಂಗಪಟ್ಟಣ ಜೆಎಂಎಫ್‌ಸಿ ನ್ಯಾಯಾಲಯದಲ್ಲಿರುವ ಪ್ರಕರಣದ ನ್ಯಾಯಿಕ ವಿಚಾರಣಾ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಪ್ರಭಾಕರ ಭಟ್ ಪರ ಹಿರಿಯ…

Read More

ಮಂಗಳೂರು: ಕಾನ್‌ಸ್ಟೇಬಲ್‌ನಿಂದಲೇ ಲಂಚ ಪಡೆಯುತ್ತಿದ್ದಾಗ ಕೆಎಸ್ಆರ್‌ಪಿ ಇನ್‌ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ

ಮಂಗಳೂರು: ನಗರದ ಕೊಣಾಜೆಯ ಕೆಎಸ್ಆರ್‌ಪಿ 7ನೇ ಬೆಟಾಲಿಯನ್‌ ಇನ್‌ಸ್ಪೆಕ್ಟರ್ ಮಹಮ್ಮದ್ ಹ್ಯಾರೀಸ್ ಎಂಬಾತ 18ಸಾವಿರ ರೂ. ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಕೆಎಸ್ಆರ್‌ಪಿ 7ನೇ ಬೆಟಾಲಿಯನ್‌‌ನ ಪೊಲೀಸ್ ಅತಿಥಿಗೃಹದಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಲು ಮೀಸಲು ಪೊಲೀಸ್ ಕಾನ್ಸ್‌ಸ್ಟೇಬಲ್‌ರಿಂದ ಮಹಮ್ಮದ್ ಹ್ಯಾರೀಸ್ 20,000 ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಜೊತೆಗೆ ಪ್ರತೀ ತಿಂಗಳು 6,000 ರೂ.ನಂತೆ ಹಣ ನೀಡಬೇಕೆಂದು ಲಂಚ ಕೇಳಿದ್ದ. ಅದರಂತೆ ಮೊದಲಿಗೆ 20000 ಹಣನೀಡಿ, ಬಳಿಕ ಪ್ರತಿ ತಿಂಗಳು 6,000ದಂತೆ ಲಂಚ ನೀಡುತ್ತಾ ಬಂದಿದ್ದಾರೆ. ಈ…

Read More

ಮಂಗಳೂರು: ಲವ್ ಜಿಹಾದ್, ನಾಪತ್ತೆಯಾಗಿದ್ದ ಹಿಂದೂ ಯುವತಿ ಮುಸ್ಲಿಂ ಯುವಕನ ಜತೆ ಪತ್ತೆ..!

ಮಂಗಳೂರು: ನಾಪತ್ತೆಯಾಗಿದ್ದ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದೂ ಯುವತಿ   ಮುಸ್ಲಿಂ ಯುವಕನ ಜತೆ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದೂ ಯುವತಿ  ಕಾಣೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಾಪತ್ತೆಯಾಗಿದ್ದ ಯುವತಿನ್ನು ಪತ್ತೆ ಹಚ್ಚುವಲ್ಲಿ ಪಾಂಡೇಶ್ವರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಮ್ಮದ್ ಅಶ್ಪಕ್ ಎಂಬಾತನ ಜೊತೆ ಈ ಹಿಂದೂ ಯುವತಿ ಪತ್ತೆಯಾಗಿದ್ದು, ಮುಸ್ಲಿಂ ಯುವಕ ನನ್ನ ಮಗಳನ್ನು ಅಪಹರಣ ಮಾಡಿ ಇಸ್ಲಾಂಗೆ ಮತಾಂತರ ಮಾಡಿರುವ ಯುವತಿಯ…

Read More

ಬೆಳ್ತಂಗಡಿ: ಷೇರು ಮಾರುಕಟ್ಟೆ ಹೂಡಿಕೆ ಹೆಸರಲ್ಲಿ 3.30 ಲಕ್ಷ ರೂ. ವಂಚನೆ..!

ಬೆಳ್ತಂಗಡಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ ಬೆಳ್ತಂಗಡಿಯ ವ್ಯಕ್ತಿಯೊಬ್ಬರಿಂದ ವಂಚಕರು 3,30,000 ರೂ. ವಂಚಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್‌ಸ್ಟಗ್ರಾಮ್‌ನಲ್ಲಿ ಬಂದ ಲಿಂಕ್ ಮೂಲಕ ವಾಟ್ಸ್ ಆ್ಯಪ್ ಗ್ರೂಪಿಗೆ ಸೇರಿದ ವ್ಯಕ್ತಿಗೆ ಅಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಅವರು ಕಳುಹಿಸಿದ ಲಿಂಕ್ ಮುಖಾಂತರ ಎ.ಸಿ.ಮಾಕ್ಸ್ JOHCM ಎಂಬ ಎರಡು ಆಪ್ ಗಳನ್ನು ಡೌನ್‌ಲೋಡ್ ಮಾಡಿದ್ದಾರೆ. ಬಳಿಕ ಈ ಆಪ್‌ಗಳ ಮೂಲಕ ದೂರುದಾರರ ಖಾತೆಯಿಂದ…

Read More

ಇಂದಿನಿಂದ 6 ದಿನಗಳ ಕಾಲ ಉಳ್ಳಾಲ ರೈಲು ನಿಲ್ದಾಣ ಬಳಿಯ ಸೋಮೇಶ್ವರ ರೈಲ್ವೇಗೆಟ್ ಬಂದ್

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರಿಂದ ಕೋಟೆಕಾರು ಮಾರ್ಗವಾಗಿ ಸೋಮೇಶ್ವರ ದೇವಸ್ಥಾನ ಸಹಿತ ಉಳ್ಳಾಲ ನಗರ ಪಂಚಾಯತ್‌ ಅನ್ನು ಸಂಪರ್ಕಿಸುವ ಉಳ್ಳಾಲ ರೈಲು ನಿಲ್ದಾಣ ಬಳಿಯ ಸೋಮೇಶ್ವರ ರೈಲ್ವೇಗೇಟನ್ನು ಜುಲೈ 10ರ ಬುಧವಾರ ಬೆಳಗ್ಗೆ 10 ಗಂಟೆಯಿಂದ ಜುಲೈ 16ರ ಮಂಗಳವಾರದವರೆಗೆ ತುರ್ತು ಹಳಿ ನಿರ್ವಹಣೆಗಾಗಿ ಮುಚ್ಚಲಾಗುತ್ತದೆ ಎಂದು ದಕ್ಷಿಣ ರೈಲ್ವೇಯ ಸೆಕ್ಷನ್‌ ಎಂಜಿನಿಯರಿಂಗ್‌ ವಿಭಾಗದ ಪ್ರಕಟನೆ ತಿಳಿಸಿದೆ.

Read More