ಬಜಪೆ : ದನದ ಮಾಂಸ ಸಾಗಾಟ – ಇಬ್ಬರ ಬಂಧನ

ಬಜಪೆ: ಬಜಪೆ ಪೋಲಿಸ್ ಠಾಣಾ ವ್ಯಾಪ್ತಿಯ ಬಡಗ ಎಡಪದವು ಗ್ರಾಮದ ಬೈತಾರಿ ಎಂಬಲ್ಲಿನ ಗೋಪಾಲಕೃಷ್ಣ ಭಜನಾ ಮಂದಿರದ ಬಳಿ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡುತಿದ್ದ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೂಡುಬಿದ್ರೆಯ ಹಂಡೇಲು ನಿವಾಸಿಗಳಾದ ಮೊಹಮ್ಮದ್ ಆರೀಫ್ (24) ಹಾಗೂ ಮೊಹಮ್ಮದ್ ಸುಲ್ತಾನ್ (19) ಎಂದು ಗುರುತಿಸಲಾಗಿದೆ. ಬಜಪೆ ಪೊಲೀಸ್ ಠಾಣೆಯ ಪಿ.ಎಸ್.ಐ ರೇವಣಸಿದ್ದಪ್ಪ ರವರು ಸಿಬ್ಬಂದಿಯೊಂದಿಗೆ ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮದ ಬೈತಾರಿ ಎಂಬಲ್ಲಿ ಗೋಪಾಲಕೃಷ್ಣ ಭಜನಾ ಮಂದಿರದ ಬಳಿ ತಪಾಸಣೆ…

Read More

ನಿಫಾ ಸೋಂಕಿತನಿಗೆ ಆರೈಕೆ ಮಾಡುತ್ತಿದ್ದ ಕಡಬ ಮೂಲದ ನರ್ಸ್ ಯುವಕ-8 ತಿಂಗಳಿನಿಂದ ಕೋಮಾದಲ್ಲಿ

ಕಡಬ: ಕೇರಳದಲ್ಲಿ ನಿಫಾ ಸೋಂಕಿತನಿಗೆ ಆರೈಕೆ ಮಾಡುತ್ತಿದ್ದ ಕಡಬ ಮೂಲದ ನರ್ಸ್ ಯುವಕನಿಗೆ ನಿಫಾ ಸೋಂಕು ತಗುಲಿ 8 ತಿಂಗಳಿನಿಂದ ಕೋಮಾದಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ದಾಳ ಸಮೀಪದ ತುಂಬ್ಯ ನಿವಾಸಿ ಟಿಟ್ಟೋ ತೋಮಸ್(24) ಕೋಮಾದಲ್ಲಿರುವ ಯುವಕ. ಬಿಎಸ್‌ಸಿ ನರ್ಸಿಂಗ್ ಪದವೀಧರನಾಗಿರುವ ಟಿಟ್ಟೋ ತೋಮಸ್ ಅವರು, ಕೇರಳದ ಕ್ಯಾಲಿಕಟ್‌ನಲ್ಲಿರುವ ಇಕ್ರಾ ಇಂಟರ್ ನ್ಯಾಷನಲ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. 2023ರ ಸೆಪ್ಟೆಂಬರ್‌ನಲ್ಲಿ ಟಿಟ್ಟೋ ತೋಮಸ್ ನಿಫಾ ವೈರಸ್ ಬಾಧಿತನಿಗೆ…

Read More

ಕಾರ್ಕಳ : ಮಿಯ್ಯಾರಿನ ವೃದ್ಧ ಮಹಿಳೆ ನೇಣು‌ ಬಿಗಿದು ಆತ್ಮಹತ್ಯೆ

ಕಾರ್ಕಳ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಿಯ್ಯಾರಿನಲ್ಲಿ ಸಂಭವಿಸಿದೆ. ಗುಲಾಬಿ (63) ನೇಣಿಗೆ ಶರಣಾದವರು. ಕಳೆದ ಒಂದು ವರ್ಷದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಸ್ವಸ್ಥೆಯಿಂದ ಜಿಗುಪ್ಸೆ ಬಂದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಜು.27ರಂದು ರಾತ್ರಿ 11.30 ರಿಂದ ಜು.28ರ ಬೆಳಿಗ್ಗೆ 6 ಗಂಟೆಯ ನಡುವೆ ಕುಂಟಿಬೈಲು ಪೊಸರುಗುಟ್ಟೆಯಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್…

Read More

ಮೂಡುಬಿದಿರೆ: ಗೀಸರ್‌ನಿಂದ ವಿಷಾನಿಲ ಸೋರಿಕೆ; ಉಸಿರುಗಟ್ಟಿ ಯುವಕ ಮೃತ್ಯು..!

ಮೂಡುಬಿದಿರೆ: ಸ್ನಾನಕ್ಕೆಂದು ಬಾತ್ ರೂಮ್ ಒಳಗೆ ತೆರಳಿದ್ದ ಯುವಕನೋರ್ವ ಗ್ಯಾಸ್ ಗೀಸರ್ ವಿಷಾನಿಲ ಸೋರಿಕೆಯಾಗಿದ್ದರಿಂದ ಉಸಿರುಗಟ್ಟಿ ಮೃತಪಟ್ಟ ಘಟನೆ ರವಿವಾರ ರಾತ್ರಿ ಕೋಟೆಬಾಗಿಲಿನಲ್ಲಿನಡೆದಿದೆ. ಮೃತಪಟ್ಟ ಯುವಕ ಕೋಟೆಬಾಗಿಲಿನ ಫ್ಲಾಟ್ ಒಂದರಲ್ಲಿ ವಾಸವಾಗಿರುವ ದಿ.ಅನ್ಸಾರ್ ಎಂಬವರ ಪುತ್ರ ಶಾರಿಕ್ (18) ಎಂದು ಗುರುತಿಸಲಾಗಿದೆ. ಶಾರಿಕ್ ರವಿವಾರ ರಾತ್ರಿ ಸ್ನಾನಕ್ಕೆಂದು ಬಾತ್ ರೂಮ್ ಗೆ ತೆರಳಿದ್ದರು. ತುಂಬಾ ಹೊತ್ತಾದರೂ ಶಾರಿಕ್ ಹೊರಬಾರದ ಕಾರಣ ಅವರ ಬಾತ್ ರೂಮ್ ಬಾಗಿಲು ಒಡೆದು ನೋಡಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ. ಸಂಪೂರ್ಣ ಮುಚ್ಚಿದ್ದ…

Read More

ಪುತ್ತೂರು : ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ, ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ಪುತ್ತೂರು : ಮಾದಕ ವಸ್ತು ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಪುತ್ತೂರು ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಕಬಕ ಗ್ರಾಮದ ನೆಹರುನಗರ ಎಂಬಲ್ಲಿ ಭಾನುವಾರ ಮಧ್ಯಾಹ್ನ ವೇಳೆ ನಡೆದಿದೆ. ಪಡೂರು ಗ್ರಾಮದ ನಿವಾಸಿ ಮಹೇಶ್ (26) ಹಾಗೂ ಕಬಕ ಗ್ರಾಮದ ನಿವಾಸಿ ಪ್ರಕಾಶ (31) ಎಂಬವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಭಾನುವಾರ ಮದ್ಯಾಹ್ನ ಕಬಕ ಗ್ರಾಮದ ನೆಹರೂನಗರ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಅನುಚಿತವಾಗಿ ವರ್ತಿಸುತ್ತಾ ಸಾರ್ವಜನಿಕರಿಗೆ ತೊಂದರೆ…

Read More

ಮಂಗಳೂರು: ಕುಲಾಲ ಸಂಘ(ರಿ ) ಕುಳಾಯಿ, ಕುಲಾಲ ಮಹಿಳಾ ಮಂಡಲ ಕುಳಾಯಿ ಹಾಗೂ ಕುಲಾಲ ರಜತ ಸೇವಾ ಟ್ರಸ್ಟ್ ಇದರ ಸಹಯೋಗದಲ್ಲಿ ಆಟಿದ ಪೊಲಬು ಕಾರ್ಯಕ್ರಮ

ಮಂಗಳೂರು: ಕುಲಾಲ ಸಂಘ(ರಿ ) ಕುಳಾಯಿ, ಕುಲಾಲ ಮಹಿಳಾ ಮಂಡಲ ಕುಳಾಯಿ ಹಾಗೂ ಕುಲಾಲ ರಜತ ಸೇವಾ ಟ್ರಸ್ಟ್ ಇದರ ಸಹಯೋಗದಲ್ಲಿ ಆಟಿದ ಪೊಲಬು ಕಾರ್ಯಕ್ರಮವು ಇಂದು ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ ಕುಲಾಯಿ ಯಲ್ಲಿ ನಡೆಯಿತು.. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶ್ರೀ ಗಂಗಾಧರ್ ಬಂಜನ್ ಕುಲಾಯಿ ( ಅಧ್ಯಕ್ಷರು ಕುಲಾಯಿ ಕುಲಾಲ ಸಂಘ ) ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಯನ್ ಅನಿಲ್ ದಾಸ್, ( ನಿರ್ದೇಶಕರು ದಾಸ್ ಪ್ರಮೋಷನ್ಸ್ ಮಂಗಳೂರು ) ಶ್ರೀ ಕಿರಣ್ ಕುಮಾರ್…

Read More

ಪುತ್ತೂರು : ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ, ಕೊಲೆ ಯತ್ನ : ಆರೋಪಿಯ ಬಂಧನ

ಪುತ್ತೂರು : ಗಲಾಟೆ ವಿಷಯವಾಗಿ ಕರೆ ಬಂದ ಹಿನ್ನಲೆ ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತನನ್ನು ಪೊಲೀಸರು ಬಂಧಿಸಿದ್ದಾರೆ. ಬನ್ನೂರು ಗ್ರಾಮದ ಕಂಜೂರು ನಿವಾಸಿ ತೇಜಸ್ ಬಂಧಿತ. ಜು.26 ರಂದು ಜಿಲ್ಲಾ ಕಂಟ್ರೋಲ್‌ ರೂಮ್‌ ನಿಂದ ಇವೆಂಟ್‌ ಬಂದಿದ್ದು, ಇವೆಂಟ್‌ನಲ್ಲಿ ಬಂದಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಘಟನಾ ಸ್ದಳವನ್ನು ಖಚಿತ ಪಡಿಸಿಕೊಂಡು ಘಟನಾ ಸ್ದಳವಾದ ಪುತ್ತೂರು ಬನ್ನೂರು ಗ್ರಾಮದ ಕಂಜೂರು ಎಂಬಲ್ಲಿ ತೇಜಸ್‌…

Read More

ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಇದರ ಪದಗ್ರಹಣ ಸಮಾರಂಭ

ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಇದರ ಪದಗ್ರಹಣ ಸಮಾರಂಭ ಮಂಗಳೂರು ಲಯನ್ಸ್ ಸೇವಾ ಮಂದಿರದಲ್ಲಿ ವಿವಿಧ ಸೇವಾ ಚಟುವಟಿಕೆಗಳೊಂದಿಗೆ ಜಿಲ್ಲಾ ಮಾಜಿ ಗವರ್ನರ್ ಶ್ರೀ ವಸಂತ್ ಕುಮಾರ್ ಶೆಟ್ಟಿ,ಶ್ರೀಮತಿ ದಿವ್ಯ ವಸಂತ್ ನೆರವೇರಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಲಯನ್ ಪಿ. ಸ್. ಆಳ್ವ ರವರು, ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಲೋಕೇಶ್, ಕೋಶಾಧಿಕಾರಿ ಶ್ರೀಮತಿ ಸರಸ್ವತಿ ಕುಳೂರ್ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷರಾದ ಶ್ರೀ ಭಾರತೀ ವಿನೋದ್ ಕುಮಾರ್ ಶೆಟ್ಟಿ, ಜಿಲ್ಲಾ ಕ್ಯಾಬಿನೆಟ್ ಸೆಕ್ರೆಟರಿ ಸರೋಜ ರಾವ್,…

Read More

ಬೆಳ್ತಂಗಡಿ: ಕುಂಬಾರರ ಸೇವಾ ಸಂಘ ವತಿಯಿಂದ ಸಂಸದ ಕ್ಯಾ| ಬೃಜೇಶ್ ಚೌಟರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ

 ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಮತ್ತು ಕುಲಾಲ, ಕುಂಬಾರರ ಯುವ ವೇದಿಕೆ ಬೆಳ್ತಂಗಡಿ ತಾಲೂಕು ಇದರ ಸಹಯೋಗದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ನೂತನ ಸಂಸದ ಕ್ಯಾ| ಬ್ರಿಜೇಶ್ ಚೌಟರವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಮತ್ತು ಆಟಿದ ಕೂಟ ಕಾರ್ಯಕ್ರಮ ಜು.28 ರಂದು ಕುಲಾಲ ಮಂದಿರ ಗುರುವಾಯನಕೆರೆಯಲ್ಲಿ ಜರುಗಲಿದೆ. ಜು. 21ರಂದು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಮಾಸಿಕ ಸಭೆಯಲ್ಲಿಈ ನಿಧಾ೯ರವನ್ನು ಕೈಗೊಳ್ಳಲಾಯಿತು. ಅಧ್ಯಕ್ಷತೆಯನ್ನುಸಂಘದ…

Read More

ಮಂಗಳೂರು: “ಆರ್ಡರ್‌ ಗ್ಯಾಂಗ್‌” ನಿಂದ ಭಾರೀ ವಂಚನೆ..! ಏನಿದು ಆರ್ಡರ್‌ ಗ್ಯಾಂಗ್ ಇಲ್ಲಿದೆ ಮಾಹಿತಿ

ಮಂಗಳೂರು: ನಗರದ ಬಜಪೆ ಸಮೀಪ ಜನರಿಗೆ ಈಗ ಹೊಸ ಹೊಸ ಗ್ಯಾಂಗ್‌ ಪರಿಚಯವಾಗುತ್ತಿರುವುದು ಅಚ್ಚರಿಯಾಗುತ್ತಿದೆ. ಕಳ್ಳತನ, ಮೋಸ-ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ.ನಗರದಲ್ಲಿ ಈಗ ಹೊಸ ಗ್ಯಾಂಗ್‌ ಒಂದು ಹುಟ್ಟಿಕೊಂಡಿದೆ. ಅದುವೇ “ಆರ್ಡರ್‌ ಗ್ಯಾಂಗ್‌” ಎಂದು ತಿಳಿದು ಬಂದಿದೆ.  ಈ “ಆರ್ಡರ್‌ ಗ್ಯಾಂಗ್‌’’ ಈ ಹಿಂದೆ ಮಂಗಳೂರಿನಲ್ಲಿ ಬೆಳಕಿಗೆ ಬಂದ ಕಳ್ಳತನದ “ಚಡ್ಡಿ ಗ್ಯಾಂಗ್‌’’ ನಂತಹ ಗ್ಯಾಂಗ್‌ ಅಲ್ಲ. ಅವರದ್ದು ಮನೆಗಳಲ್ಲಿ ಕಳ್ಳತನ ನಡೆಸುವುದು. ಆದರೆ ಈ “ಆರ್ಡರ್‌ ಗ್ಯಾಂಗ್‌’’ನ ಕಥೆವೇ ಭಿನ್ನವಾದುದು. ಇವರದ್ದು ಅಂಗಡಿಗಳಲ್ಲಿ ಭಾರೀ ಪ್ರಮಾಣದ…

Read More