
ಕಾಸರಗೋಡು : ಇಬ್ಬರು ಮಕ್ಕಳಿಗೆ ಅಮೀಬಿಕ್ ಮಿದುಳು ಜ್ವರ ದೃಢ
ಕಾಸರಗೋಡು: ಜಿಲ್ಲೆಗೆ ಅಮೀಬಿಕ್ ಮಿದುಳು ಜ್ವರ ಕಾಲಿರಿಸಿರುವುದು ದೃಢವಾಗಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಾಸರಗೋಡು ಜಿಲ್ಲೆಯ 6 ವರ್ಷದ ಬಾಲಕ ಸಹಿತ ಕಣ್ಣೂರು ಜಿಲ್ಲೆಯ ಮೂರೂವರೆ ವಯಸ್ಸಿನ ಮಗುವಿಗೂ ಮಿದುಳು ಜ್ವರ ದೃಢೀಕರಿಸಲಾಗಿದೆ. ಇಬ್ಬರೂ ಕಲ್ಲಿಕೋಟೆ ಮೆಡಿಕಲ್ ಕಾಲೇಜಿನ ಪ್ರತ್ಯೇಕ ನಿಗಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಆತಂಕಕಾರಿಯೇನಲ್ಲ ಎಂದು ಅಧಿಕೃತರು ತಿಳಿಸಿದ್ದಾರೆ. ಈಗಾಗಲೇ ಈ ವರ್ಷ ಕೇರಳದಲ್ಲಿ 42 ಮಂದಿಗೆ ಅಮೀಬಿಕ್ ಮಿದುಳು ಜ್ವರ ಬಾಧಿಸಿದೆ ಎಂದು ಆರೋಗ್ಯ ಇಲಾಖೆ ದೃಢೀಕರಿಸಿದೆ. ಕಳೆದ 45 ದಿನಗಳಲ್ಲಿ…