ಮೋದಿ ನಾಯಕತ್ವ ಕ್ರಿಕೆಟಿಗರ ಆತ್ಮವಿಶ್ವಾಸ ಹೆಚ್ಚಿಸಿತು : ಪ್ರಧಾನಿ ಶ್ಲಾಘಿಸಿದ ಕ್ಯಾಪ್ಟನ್ ಸೂರ್ಯಕುಮಾರ್

ನವದೆಹಲಿ : ಭಾರತೀಯ ಪುರುಷರ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವ್ರನ್ನ ಶ್ಲಾಘಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮುಂಭಾಗದಲ್ಲಿ ಬ್ಯಾಟಿಂಗ್ ಮಾಡಿದ್ದು, ಅವರ ನಾಯಕತ್ವವು ಕ್ರಿಕೆಟಿಗರ ಆತ್ಮವಿಶ್ವಾಸವನ್ನ ಹೆಚ್ಚಿಸಿತು ಮತ್ತು ಅವರನ್ನು ಹೆಚ್ಚು ‘ಮುಕ್ತವಾಗಿ’ ಆಡಲು ಪ್ರೇರೇಪಿಸಿತು ಎಂದು ಹೇಳಿದ್ದಾರೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025ರ ಏಷ್ಯಾ ಕಪ್‌ನ ಫೈನಲ್‌’ನಲ್ಲಿ ತಮ್ಮ ತಂಡವು ಪಾಕಿಸ್ತಾನದ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿದ ಒಂದು ದಿನದ…

Read More

14 ವರ್ಷದ ಟೆಸ್ಟ್ ಕ್ರಿಕೆಟ್ ಜರ್ನಿಗೆ ವಿರಾಟ್ ಕೊಹ್ಲಿ ವಿದಾಯ

ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ 14 ವರ್ಷಗಳ ಟೆಸ್ಟ್ ಕ್ರಿಕೆಟ್ ಜರ್ನಿಗೆ ಕೊಹ್ಲಿ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಭಾವುಕ ಪೋಸ್ಟ್‌ವೊಂದನ್ನ ಹಂಚಿಕೊಂಡಿರುವ ಅವರು, “ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಬ್ಯಾಗಿ ಬ್ಲೂ ಧರಿಸಿ 14 ವರ್ಷಗಳಾಗಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಪ್ರಯಾಣವು ನನ್ನನ್ನು ಇಷ್ಟು ದೊಡ್ಡ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ ಅಂತ…

Read More

‘ಭಾರತೀಯ ಸೇನೆಗೆ ಸೆಲ್ಯೂಟ್, ನಾವು ಒಗ್ಗಟ್ಟಿನಿಂದ ಇರುತ್ತೇವೆ’- ವಿರಾಟ್ ಕೊಹ್ಲಿ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನಿಸಿದ ಬಿಸಿಸಿಐ 2025 ರ ಐಪಿಎಲ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಬೆನ್ನಲ್ಲೇ ಕ್ರಿಕೆಟಿಗ ವಿರಾಟ್ ಕೊಹ್ಲಿ ಭಾರತೀಯ ಸೇನೆ ಪರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ”ಈ ಕಷ್ಟದ ಸಮಯದಲ್ಲಿ ನಮ್ಮ ದೇಶವನ್ನು ರಕ್ಷಿಸುತ್ತಿರುವುದಕ್ಕಾಗಿ ಭಾರತೀಯ ಸೇನೆಗೆ ಸೆಲ್ಯೂಟ್. ನಾವು ನಮ್ಮ ಸಶಸ್ತ್ರ ಪಡೆಗಳೊಂದಿಗೆ ಒಗ್ಗಟ್ಟಿನಿಂದ ಇರುತ್ತೇವೆ. ನಮ್ಮ ವೀರ ಯೋಧರ ಅಚಲ ಧೈರ್ಯ, ಅವರು ಮತ್ತು ಅವರ ಕುಟುಂಬದವರು ನಮ್ಮ ದೇಶಕ್ಕಾಗಿ ಮಾಡುವ ತ್ಯಾಗಗಳಿಗೆ ನಾವು ಸದಾ…

Read More

ICC Champions Trophy 2025: ನಾಳೆ ಭಾರತ- ಪಾಕ್‌ ನಡುವೆ ಹಣಾಹಣಿ

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ಯಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಾಳೆ (ಫೆ.23, ಭಾನುವಾರ) ಮಧ್ಯಾಹ್ನ 2.30ಕ್ಕೆ (ಭಾರತೀಯ ಕಾಲಮಾನ) ಸರಿಯಾಗಿ ಪಂದ್ಯ ಆರಂಭವಾಗಲಿದೆ. ಈ ಹಿಂದೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು ಐದು ಬಾರಿ ಮುಖಾಮುಖಿಯಾಗಿವೆ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡು ಬಾರಿಯ ಚಾಂಪಿಯನ್ (2002, 2013) ಭಾರತದ ವಿರುದ್ಧ ಪಾಕಿಸ್ತಾನ…

Read More

ವಿಜಯನಗರದಲ್ಲಿ ನಡೆದ ಖೇಲೋ ಇಂಡಿಯಾ ವುಮೆನ್ಸ್ ವುಶು ಲೀಗ್ ನಲ್ಲಿ ಮಂಗಳೂರಿನ ಸಮೃದ್ಧಿ ಕುಲಾಲ್ ಗೆ ಕಂಚಿನ ಪದಕ

ಮಂಗಳೂರು : ವಿಜಯನಗರ ಜಿಲ್ಲೆ ಹೊಸಪೇಟೆ ವುಶು ಅಸೋಷಿಯೇಷನ್ ಇದರ ವತಿಯಿಂದ ಇತ್ತೀಚೆಗೆ ನಡೆದ ಖೇಲೋ ಇಂಡಿಯಾ ವುಮೆನ್ಸ್ ವುಶು ಲೀಗ್ ನಲ್ಲಿ ಸುರತ್ಕಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಮಾರ್ಷಲ್ ಆರ್ಟ್ಸ್ ಇದರ ವಿದ್ಯಾರ್ಥಿನಿ ಸಮೃದ್ಧಿ ಎಂ ಕುಲಾಲ್ ಅವರು ಕಂಚಿನ ಪದಕ ಪಡೆದಿದ್ದಾರೆ. ಇವರು ಆರನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಮರೋಳಿ ನಿವಾಸಿ ಮನೋಜ್ ಕುಮಾರ್ ಮತ್ತು ಗೀತಾ ಮನೋಜ್ ದಂಪತಿಯ ಸುಪುತ್ರಿ.

Read More

ಜ.18 ರಂದು `ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ’

ಯಲ್ಲಾಪುರ: ಬೆಡಸಗದ್ದೆಯ ಸಮಾನ ಮನಸ್ಕರೆಲ್ಲರೂ ಸೇರಿ ಜಿಲ್ಲಾ ಮಟ್ಟದ `ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ’ ಆಯೋಜಿಸಿದ್ದಾರೆ. ಜನವರಿ 18ರ ಶನಿವಾರ ಮಧ್ಯಾಹ್ನ 3 ಗಂಟೆಗೆ ವನಶ್ರೀ ಕ್ರೀಡಾಂಗಣದಲ್ಲಿ ಈ ಆಟ ಶುರುವಾಗಲಿದೆ. ಹೀಗಾಗಿ ಜನವರಿ 17ಕ್ಕೆ ಹೆಸರು ನೊಂದಾಯಿಸಲು ಕೊನೆ ದಿನ. ಈ ಆಟದಲ್ಲಿ ಗೆದ್ದ ತಂಡಕ್ಕೆ ಮೊದಲ ಬಹುಮಾನ 10 ಸಾವಿರ ರೂ ಸಿಗಲಿದೆ. ಎರಡನೇ ಬಹುಮಾನ 5 ಸಾವಿರ ರೂ, ಮೂರನೇ ಬಹುಮಾನ 2 ಸಾವಿರ ರೂ ಘೋಷಣೆಯಾಗಿದೆ. ನಾಲ್ಕನೇ ಬಹುಮಾನವಾಗಿ ಆಕರ್ಷಕ ಟ್ರೋಪಿ…

Read More

ಚೆನ್ನೈನಲ್ಲಿ ಭಾರತದ ಬೋನಿಗೆ ಬಿದ್ದ ಬಾಂಗ್ಲಾ ಹುಲಿಗಳು; 6 ಬಲಿ ಪಡೆದ ರವಿಚಂದ್ರನ್ ಅಶ್ವಿನ್

ಚೆನ್ನೈ: ರವಿಚಂದ್ರನ್ ಅಶ್ವಿನ್ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಬಾಂಗ್ಲಾದೇಶ ಎದುರು ಚೆನ್ನೈ ಟೆಸ್ಟ್‌ ಪಂದ್ಯದಲ್ಲಿ 280 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿದ ರವಿಚಂದ್ರನ್ ಅಶ್ವಿನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. 515 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡವು 234 ರನ್‌ಗಳಿಗೆ ಸರ್ವಪತನ ಕಂಡಿದೆ ಇಲ್ಲಿನ ಎಂ ಎ…

Read More

ಅನರ್ಹತೆ ಬಳಿಕ ಕುಸ್ತಿಗೆ ವಿದಾಯ ಘೋಷಿಸಿದ ವಿನೇಶ್​ ಫೋಗಟ್: ಎಕ್ಸ್​​​​​​ ಪೋಸ್ಟ್​ ಮೂಲಕ ಭಾವನಾತ್ಮಕ ಸಂದೇಶ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇನ್ನೇನು ಚಿನ್ನದ ಪದಕದ ಬೇಟೆಗೆ ಸಿದ್ಧರಾಗಿದ್ದ ಭಾರತದ ಗಟ್ಟಿಗಿತ್ತಿ ವಿನೇಶ್ ಫೋಗಾಟ್‌ ರವರನ್ನು ಪಂದ್ಯದಿಂದ ಅನರ್ಹಗೊಳಿಸಿದ್ದರು. ಈ ಬೆನ್ನಲ್ಲೇ ವಿನೇಶ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್‌ ಹಾಕುವುದರ ಮೂಲಕ ಕುಸ್ತಿ ಪಂದ್ಯಕ್ಕೆ ವಿದಾಯ ಹೇಳಿದ್ದಾರೆ.  ಸಾಮಾಜಿಕ ಮಾಧ್ಯಮ ಎಕ್ಸ್‌ ಖಾತೆಯಲ್ಲಿ ಭಾವುಕ ಸಂದೇಶ ಪ್ರಕಟಿಸಿರುವ ಅವರು ‘ಅಮ್ಮಾ ನನ್ನ ವಿರುದ್ದ ಕುಸ್ತಿ ಗೆದ್ದಿದೆ, ನಾನು ಸೋಲನ್ನು ಅನುಭವಿಸಿದ್ದೇನೆ” ಎಂದಿದ್ದಾರೆ.ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ನಲ್ಲಿ ಭಾರತದ ಮಹಿಳೆ ಕುಸ್ತಿ ಪಂದ್ಯದಲ್ಲಿ ಫೈನಲ್‌ಗೆ ತಲುಪಿರುವುದು. ಆದರೆ…

Read More

ಟಿ20 ವಿಶ್ವಕಪ್; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

ಬಾರ್ಬಡೋಸ್: ಅಸಂಖ್ಯ ಭಾರತೀಯ ಅಭಿಮಾನಿಗಳಿಗೆ ಟಿ20 ವಿಶ್ವಕಪ್ ಗೆಲುವಿನ ಔತಣ ಉಣಬಡಿಸಿದ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಕೊನೆಗೊಂದು ಬೇಸರ ಮೂಡಿಸಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಈ ಇಬ್ಬರು ದಿಗ್ಗಜರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಪಂದ್ಯ ಮುಗಿದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ವಿರಾಟ್ ಕೊಹ್ಲಿ ತಮ್ಮ ನಿವೃತ್ತಿಯ ಬಗ್ಗೆ ಖಚಿತಪಡಿಸಿದರು. ನಾಯಕ ರೋಹಿತ್ ಶರ್ಮಾ ಅವರೂ ಬಳಿಕ ತನ್ನ ಟಿ20 ನಿವೃತ್ತಿಯನ್ನು ಘೋಷಿಸಿದರು. ಇದು…

Read More

2024ರ ಟಿ20 ವಿಶ್ವಕಪ್‌ನ ಹೈ-ವೋಲ್ಟೇಜ್ ಪಂದ್ಯಕ್ಕೆ ಭಯೋತ್ಪಾದಕ ಬೆದರಿಕೆ!

ಮುಂಬರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಅಭ್ಯಾಸ ಪಂದ್ಯಗಳು ನಡೆಯುತ್ತಿರುವಂತೆಯೇ, ಅಧಿಕೃತವಾಗಿ ಜೂನ್ 2, 2024ರಂದು ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಸಹ-ಆತಿಥ್ಯ ವಹಿಸಿರುವ ಐಸಿಸಿ ಟೂರ್ನಿ ಪ್ರಾರಂಭವಾಗಲಿದೆ. ಎ ಗುಂಪಿನಲ್ಲಿರುವ ಭಾರತ ತಂಡವು ಜೂನ್ 5ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ತಮ್ಮ ಟಿ20 ವಿಶ್ವಕಪ್ 2024ರ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಅದೇ ಸ್ಥಳದಲ್ಲಿ ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಹೈ-ವೋಲ್ಟೇಜ್ ಪಂದ್ಯದಲ್ಲಿ ಸೆಣಸಾಡಲಿದೆ. ಆ…

Read More