ಕಾರ್ಕಳ: ಯುವಕ ಆತ್ಮಹತ್ಯೆ ಪ್ರಕರಣ- ಸ್ನೇಹಿತರ ಮೊಬೈಲ್‌ ಪೊಲೀಸರ ವಶಕ್ಕೆ

ಉಡುಪಿ : ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿಯ ನಿವಾಸಿ ಅಭಿಷೇಕ್ ಆಚಾರ್ಯ (23), ಗುರುವಾರ ಬೆಮ್ಮಣ್‌ನ ಖಾಸಗಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಅಭಿಷೇಕ್ ಪ್ರೇಮ ವೈಫಲ್ಯದಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ ಎಂದು ಉಡುಪಿ ಜಿಲ್ಲೆಯ ಪೊಲೀಸ್‌ ಅಧೀಕ್ಷಕ ಹರಿರಾಮ್ ಶಂಕರ್‌ತಿಳಿಸಿದ್ದಾರೆ. ಕುಟುಂಬದವರ ಪ್ರಕಾರ ಆತ ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಅಭಿಷೇಕ್…

Read More

ಬೀಚ್‌ನಲ್ಲಿ ಅಪ್ರಾಪ್ತ ಬಾಲಕನಿಗೆ ಮುತ್ತು ಕೊಟ್ಟ ವ್ಯಕ್ತಿಯ ವಿರುದ್ಧ ಪೋಕ್ಸೋ ಪ್ರಕರಣ

ತಂದೆ-ತಾಯಿ ಜತೆಗೆ ಮೈಸೂರಿನಿಂದ ಕಾಪು ಬೀಚ್‌ಗೆ ಬಂದಿದ್ದ ಹದಿನೈದರ ಹರೆಯದ ಬಾಲಕನಿಗೆ ಮುತ್ತು ಕೊಟ್ಟ ಆರೋಪದಲ್ಲಿ ಉಳ್ಳಾಲದ ವ್ಯಕ್ತಿಯ ವಿರುದ್ಧ ಕಾಪು ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.  ಸಂತ್ರಸ್ತ ಬಾಲಕ ಮತ್ತು ಆತನ ಮನೆಯವರು  ಬೀಚ್ ನಲ್ಲಿ ಸುತ್ತಾಡುತ್ತಿದ್ದಾಗ ಶೌಚಾಲಯ ಬಳಿ ಬಂದ ಆರೋಪಿ ಶೌಕತ್ ಅಲಿ (47) ಬಾಲಕನಿಗೆ ಮುತ್ತು ಕೊಟ್ಟಿದ್ದನು. ಇದನ್ನು ಗಮನಿಸಿದ ಬಾಲಕನ ತಂದೆ ಬೊಬ್ಬೆ ಹೊಡೆದಿದ್ದು ಆರೋಪಿ ಸ್ಥಳದಿಂದ ಪರಾರಿಯಾಗಲೆತ್ನಿಸಿದ್ದಾನೆ. ಈ ವೇಳೆ ಗಸ್ತು ನಿರತ ಪೊಲೀಸರು ಮತ್ತು ಸಾರ್ವಜನಿಕರು ಜತೆ…

Read More

SDPI ಮುಖಂಡ ರಿಯಾಜ್ ಕಡಂಬುಗೆ ನ್ಯಾಯಾಂಗ ಬಂಧನ

ಉಡುಪಿ: ಉಡುಪಿ ನಗರ ಪೊಲೀಸ್ ಠಾಣೆಯಲ್ಲಿನ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಷರತ್ತು ಉಲ್ಲಂಘಿಸಿದ ಎಸ್ ಡಿ ಪಿ ಐ ಮುಖಂಡ ರಿಯಾಜ್ ಕಡಂಬು ಅವರನ್ನು ಉಡುಪಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಹಿಂದೆ ದ್ವೇಷ ಭಾಷಣಕ್ಕೆ ಸಂಬಂಧಿಸಿ ರಿಯಾಜ್ ಕಡಂಬು ವಿರುದ್ಧ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು ಈ ಬಗ್ಗೆ ಅವರು ಹೈಕೋರ್ಟ್ ನಿಂದ ಜಾಮೀನು ಪಡೆದಿದ್ದ ಅವರು,…

Read More

ಉಡುಪಿ: ರಸ್ತೆ ಬದಿ ನಿಲ್ಲಿದ್ದ ಕಾರನ್ನು ಸುಟ್ಟು ಹಾಕಿದ ದುಷ್ಕರ್ಮಿಗಳು

ಉಡುಪಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಕುಂದಾಪುರದ ಕಾವ್ರಾಡಿಯ ನೂರಾನಿ ಮಸೀದಿ ಎದುರಿನಲ್ಲಿ ನಿಲ್ಲಿಸಿದ್ದ ಮಾರುತಿ ಸ್ವಿಫ್ಟ್ ಕಾರು ದುಷ್ಕರ್ಮಿಗಳ ಬೆಂಕಿಗೆ ಆಹುತಿಯಾಗಿದೆ. ಕಾವ್ರಾಡಿ ಗ್ರಾಮದ ಶೇಖ್ ಮೊಹಮ್ಮದ್ ಗೌಸ್ ಕುಟುಂಬ ಅ.1ರಂದು ಹೈದರಾಬಾದ್ ಪ್ರವಾಸಕ್ಕೆ ಹೋಗಿದ್ದರು. ಪ್ರವಾಸಕ್ಕೆ ಹೋಗುವ 10 ದಿನಗಳ ಮೊದಲು 5 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು ಖರೀದಿಸಿದ್ದರು. ಆದರೆ ಕಾರನ್ನು ಅವರ ಮನೆಗೆ ತೆಗೆದುಕೊಂಡು…

Read More

ಉಡುಪಿ : AKMS ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣ- ಮಹಿಳೆಯ ಬಂಧನ

ಉಡುಪಿ : ಖಾಸಗಿ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣ ಸಂಬಂಧ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇದೀಗ ಕೊಲೆಗೆ ಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾದ ನಾಲ್ಕನೇ ಆರೋಪಿ ಉಡುಪಿ ಮಿಷನ್ ಕಾಂಪೌಂಡ್ ನಿವಾಸಿ ರಿಧಾ ಶಭನಾ (27) ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೈಫುದ್ದೀನ್ ಕೊಲೆ ಪ್ರಕರಣ ಸಂಬಂಧ ಉಡುಪಿ ಮಿಷನ್ ಕಾಂಪೌಂಡ್ ನಿವಾಸಿ ಮಹಮದ್‌ ಫೈಸಲ್ ಖಾನ್ (27), ಕರಂಬಳ್ಳಿ ನಿವಾಸಿ ಮೊಹಮ್ಮದ್ ಶರೀಫ್ (37) ಮತ್ತು ಮಂಗಳೂರು ಕಾಟಿಪಳ್ಳ ನಿವಾಸಿ ಅಬ್ದುಲ್‌ ಶುಕುರ್…

Read More

ಯುವ ಯಕ್ಷಗಾನ ಕಲಾವಿದ ಆತ್ಮಹತ್ಯೆ..!!

ಯಕ್ಷಗಾನ ಕಲಾವಿದ ಕಾಲ್ತೋಡು ಗ್ರಾಮದ ಬಲಗೋಣ ನಿವಾಸಿ, ದಿ.ಕೊಪ್ಪಾಟಿ ಮುತ್ತ ಗೌಡ ಅವರು ಪುತ್ರ  ದಾಮೋದರ ಗೌಡ (33) ಅವರು ಅ. 3ರಂದು ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಊಟ ಮಾಡಿ ಮಲಗಿದ್ದ ಅವರು ಬೆಳಗ್ಗೆ ಮನೆಮಂದಿ ನೋಡಿದಾಗ ಮಲಗಿಕೊಂಡ ಸ್ಥಳದಲ್ಲಿ ಇರಲಿಲ್ಲ, ಹುಡುಕಾಡಿದಾಗ ಮನೆಯಿಂದ 500 ಮೀ. ದೂರದಲ್ಲಿನ ಮರಕ್ಕೆ ತನ್ನದೇ ಬನಿಯನನ್ನು ಹರಿದು ಹಗ್ಗ ಮಾಡಿಕೊಂಡು ನೇಣು ಬಿಗಿದುಕೊಂಡಿರುವುದು ಕಂಡುಬಂದಿತ್ತು. ತತ್‌ಕ್ಷಣ ನೇಣಿನಿಂದ ಇಳಿಸಿದರೂ ಕೊನೆಯುಸಿರೆಳೆದಾಗಿತ್ತು. ಅವರು ದಂಪತಿಯ ನಡುವೆ ಜಗಳ…

Read More

ಉಡುಪಿ: ಮಲ್ಪೆ ಬೀಚ್ ನಲ್ಲಿ ಇಬ್ಬರು ಯುವಕರು ನೀರುಪಾಲು- ಓರ್ವನ ರಕ್ಷಣೆ, ಇನ್ನೋರ್ವ ನಾಪತ್ತೆ

ಉಡುಪಿ: ಮಲ್ಪೆ ಬೀಚ್ ನಲ್ಲಿ ಈಜಾಡುತ್ತಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದು, ಓರ್ವನನ್ನು ರಕ್ಷಿಸಿರುವ ಘಟನೆ ಅ.3 ರಂದು ಶುಕ್ರವಾರ ಸಂಜೆ ಸಂಭವಿಸಿದೆ. ಹಾಸನ ಮೂಲದ ಮಿಥುನ್ ಮತ್ತು ಶಶಾಂಕ್ ನೀರುಪಾಲಾಗಿದ್ದಾರೆ. ಇದನ್ನು ಗಮನಿಸಿದ ಸಹ ಪ್ರವಾಸಿಗರು ಶಶಾಂಕ್ ನನ್ನು ರಕ್ಷಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಿಥುನ್ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಶೋಧಕಾರ್ಯ ಮುಂದುವರಿದಿದೆ. ಮಲ್ಪೆ ಬೀಚ್ ನಲ್ಲಿ ಜಿಲ್ಲಾಡಳಿತದಿಂದ ಭಾರೀ ನಿರ್ಲಕ್ಷ್ಯ ಆರೋಪ ದಸರಾ ರಜೆ ಹಿನ್ನೆಲೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಉಡುಪಿಗೆ ಆಗಮಿಸುತ್ತಿದ್ದಾರೆ….

Read More

ನವರಾತ್ರಿ ಸಂಭ್ರಮದಲ್ಲಿ ಚಿನ್ನದ ಸರ ಕಳ್ಳತನಕ್ಕೆ ಯತ್ನಿಸಿದ ಮಹಿಳೆಯರ ಬಂಧನ

ಅಂಬಲಪಾಡಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮದ ಜನಜಂಗುಳಿಯ ನಡುವೆಯೇ ವೃದ್ಧ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನ ಮಾಡಲು ಯತ್ನಿಸಿದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಮಹಿಳೆಯರ ಬಗ್ಗೆ ವೃದ್ಧ ಸಂತ್ರಸ್ತೆಗೆ ಸಂಶಯ ಬಂದಿದ್ದು, ಪರಿಶೀಲನೆ ನಡೆಸಿದಾಗ ಕಾಣೆಯಾಗಿದ್ದ ಚಿನ್ನದ ಸರ ಪತ್ತೆಯಾಗಿದೆ ಎಂದು ವರದಿಯಾಗಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು, ಅದರಲ್ಲೂ ವಿಶೇಷವಾಗಿ ಮಹಿಳಾ ಭಕ್ತರು ಆರೋಪಿಗಳ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆದರೆ, ಸ್ಥಳೀಯ ಮುಖಂಡರಾದ ವಿಷ್ಣು ಶೆಟ್ಟಿ ಅವರು ಮಧ್ಯಪ್ರವೇಶಿಸಿ, ಜನರಿಂದ ಹಲ್ಲೆಯಾಗದಂತೆ…

Read More

ಉಡುಪಿ: ಸೈಫ್ ಕೊಲೆ, ಮೂವರು ಆರೋಪಿಗಳ ಬಂಧನ..!!

ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಖಾಸಗಿ ಬಸ್ ಮಾಲಕ ಸೈಯಿಪುದ್ದಿನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಾದ ಮಿಷನ್ ಕಂಪೌಂಡ್ ನಿವಾಸಿ  ಮಹಮದ್‌ ಫೈಸಲ್‌ ಖಾನ್ ‌(27), ಕರಂಬಳ್ಳಿ ಜನತಾ ಕಾಲೊನಿಯ ಮೊಹಮದ್‌ ಶರೀಫ್‌ (37) ಮತ್ತು ಮಂಗಳೂರಿನ ಕೃಷ್ಣಾಪುರದ ಅಬ್ದುಲ್‌ ಶುಕುರ್‌ (43) ಎಂಬವರನ್ನು ದಸ್ತಗಿರಿ ಮಾಡಲಾಗಿದೆ.  ಆರೋಪಿಗಳನ್ನು ಉಡುಪಿಯ ಜೆ ಎಂ ಎಫ್ ಸಿ  ನ್ಯಾಯಾಧೀಶರೆದುರು ಹಾಜರುಪಡಿಸಲಾಗಿದ್ದು ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.  ಕೊಲೆ, ಹಲ್ಲೆ ಪ್ರಕಣಗಳಲ್ಲಿ ತೊಡಗಿ ರೌಡಿ ಶೀಟರ್ ಆಗಿದ್ದ ಸೈಫುದ್ದೀನ್ ಅವರನ್ನು ಆರೋಪಿಗಳು…

Read More

ಮಲ್ಪೆ: AKMS ಬಸ್ ಮಾಲಕ ಸೈಫ್ ಯಾನೆ ಸೈಫುದ್ದೀನ್ ಬರ್ಬರ ಹತ್ಯೆ

ಉಡುಪಿ:  ಎಕೆಎಂಎಸ್ ಬಸ್ ಮಾಲಕ ಸೈಪು ಯಾನೇ ಸೈಫುದ್ದೀನ್ ಆತ್ರಾಡಿಯನ್ನು ಗುಂಡಿಟ್ಟು ಕೊಲೆ ಮಾಡಿದ ಘಟನೆ ಶನಿವಾರ ಮಲ್ಪೆ ಸಮೀಪದ ಕೊಡವೂರು ಬಳಿ ನಡೆದಿದೆ. ಮಣಿಪಾಲದಲ್ಲಿ ಸಾರಿಗೆ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದ ಸೈಫುದ್ದೀನ್, ಅಪರಿಚಿತ ದಾಳಿಕೋರರು ಗುಂಡು ಹಾರಿಸಿದಾಗ ದಾಳಿಗೆ ಗುರಿಯಾದರು ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಗುಂಡೇಟಿನ ಬಳಿಕ ಆರೋಪಿಗಳು ಅವರನ್ನು ಮತ್ತಷ್ಟು ಹಲ್ಲೆಗೊಳಪಡಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಭೇಟಿ ನೀಡಿದ್ದು ಮಾಹಿತಿ ಪಡೆದಿದ್ದಾರೆ. ಪ್ರಕರಣದ…

Read More