ಹೃದಯಾಘಾತಕ್ಕೂ ಮುನ್ನ ದೇಹ ನೀಡುವ ಈ ನಾಲ್ಕು ಲಕ್ಷಣಗಳನ್ನು ಕಡೆಗಣಿಸದಿರಿ
ಹೃದಯಾಘಾತ ಎಂಬ ಅಪಾಯಕಾರಿ ಪ್ರಕ್ರಿಯೆಯು ಇಂದು ವಿಶ್ವಾದ್ಯಂತ ಹಲವರನ್ನು ಬಲಿ ತೆಗೆದುಕೊಳ್ಳುತ್ತಿದೆ. ರಕ್ತವನ್ನು ದೇಹದ ಪೂರ್ತಿ ಪಂಪ್ ಮಾಡುವ ಹೃದಯದ ರಕ್ತನಾಳಗಳು ಬ್ಲಾಕ್ ಆಗಿ, ಹೃದಯದ ಬಡಿತಕ್ಕೆ ಉಂಟಾಗುವ ಸಣ್ಣ ಕಷ್ಟದಿಂದ ಪ್ರಾಣಪಕ್ಷಿಯೇ ಹಾರಿಹೋಗುತ್ತಿದೆ. ಈಗೀಗ ಹೃದಯಾಘಾತ ಆಗಿದ್ದು ಗೊತ್ತಾಗುವುದೇ ವಾರ ಅಥವಾ ತಿಂಗಳುಗಳಾದ ಮೇಲೆ! ಹೌದು, ಸೈಲೆಂಟ್ ಮಯೊಕಾರ್ಡಿಯಲ್ ಇನ್‌ಫಾಕ್ಷರ್ನಸ್ (ಎಸ್‌ಎಂಐ ) ಹೆಚ್ಚಿನ ಜನರಲ್ಲಿ ಆಗುತ್ತಿದೆ. ಯುವಕರನ್ನು ಕೂಡ ಸದ್ದಿಲ್ಲದೆ ಸಾವು ಕಾಡುತ್ತಿದೆ. ಹಾಗಾಗಿ, ಎಚ್ಚರ ತಪ್ಪಬೇಡಿರಿ.. ಇದಕ್ಕೆ ಪ್ರಮುಖ ಕಾರಣ ಒತ್ತಡ, ಅನಾರೋಗ್ಯಕ್ಕೆ…

