ʻರೇವ್‌ ಪಾರ್ಟಿʼ ಕೇಸ್‌ : ತೆಲುಗು ನಟಿ ಹೇಮಾ ಸೇರಿ 8 ಮಂದಿಗೆ ʻCCBʼಯಿಂದ ನೋಟಿಸ್‌

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಜಿ.ಆರ್. ಪಾರ್ಮ್ ಹೌಸ್ ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾ ಸೇರಿ 8 ಮಂದಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಮೇ.27 ರಂದು ಸಿಸಿಬಿ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗುವಂತೆ ತೆಲುಗು ನಟಿ ಹೇಮಾಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್.ಪಾರ್ಮ್ ಹೌಸ್ ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ನಟ-ನಟಿಯರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಬಳಿಕ ಸಿಸಿಬಿ ಪೊಲೀಸರು ಅವರನ್ನು ವಶಕ್ಕೆ…

Read More

ಮೈಸೂರು: ಮಾವು ಹಲಸು ಮೇಳಕ್ಕೆ ಚಾಲನೆ

ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಮಾವು ಬೆಳೆಗಾರರಿಗೆ ಉತ್ತಮ ದರ ದೊರಕುವಂತೆ ಮಾಡಲು ತೋಟಗಾರಿಕೆ ಇಲಾಖೆ ಶುಕ್ರವಾರದಿಂದ ಮೈಸೂರು ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಆಯೋಜಿಸಿರುವ ಮಾವು, ಹಲಸು ಮೇಳಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮೈಸೂರು, ಮಂಡ್ಯ, ರಾಮನಗರ, ಉತ್ತರ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸಿಗುವಂತಹ ಮಾವಿನ ಹಣ್ಣುಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲಾಗುತ್ತಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಬರುತ್ತಿರುವುದರಿಂದ ಹೆಚ್ಚಿನ ವಹಿವಾಟು ನಡೆಯುವ ಸಾಧ್ಯತೆ ಇದೆ ಎಂದು ವಿಶ್ವಾಸ…

Read More

‘ ಶ್ರೀ ಸಿದ್ದರಾಮಯ್ಯ ಅವರೇ…’ ಎಚ್.ಡಿ. ಕುಮಾರಸ್ವಾಮಿ ಹೀಗೆ ಹೇಳಿದ್ದೇಕೆ?

ಸಿಎಂ ಸಿದ್ದರಾಮಯ್ಯ & ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಡುವೆ ಪದೇ, ಪದೇ ರಾಜಕೀಯ ತಿಕ್ಕಾಟ ನಡೆಯುತ್ತಿದೆ. ಅದರಲ್ಲೂ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಇಬ್ಬರೂ ಫೈಟಿಂಗ್ ಜೋರು ಮಾಡಿದ್ದಾರೆ. ಈ ಸಮಯದಲ್ಲೇ ಎಚ್‌ಡಿಕೆ ಇದೀಗ ಸುದೀರ್ಘವಾಗಿರುವ ಟ್ವೀಟ್ ಒಂದನ್ನ ಮಾಡಿ, ಸಿಎಂ ಸಿದ್ದರಾಮಯ್ಯ ಅವರಿಗೆ ಹೊಸ ಸವಾಲು ಎಸೆದಿದ್ದಾರೆ. ‘ನಾನೂ ವಕೀಲಿಕೆ ಮಾಡುತ್ತಿದ್ದೆ ಎಂದು’ ಈ ಬಗ್ಗೆ ಟ್ವೀಟ್ ಮಾಡಿರುವ ಎಚ್.ಡಿ. ಕುಮಾರಸ್ವಾಮಿ ಅವರು, ‘ಶ್ರೀ @siddaramaiah ನವರೇ.. ನಾನು ವಕೀಲನಾಗಿದ್ದೆ, ಹಿಂದೆ ನಾನೂ ವಕೀಲಿಕೆ ಮಾಡುತ್ತಿದ್ದೆ…

Read More

ಜೂನ್‌ 1ರಿಂದ ʻಹೊಸ ಸಾರಿಗೆ ನಿಯಮʼಗಳು ಜಾರಿ : ಅಪ್ರಾಪ್ತರಿಗೆ ವಾಹನ ಕೊಟ್ರೆ 25,000 ರೂ.ದಂಡ, ನೋಂದಣಿ ರದ್ದು..!

ಬೆಂಗಳೂರು : ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಭಾರತದಲ್ಲಿ ಡ್ರೈವಿಂಗ್‌ ಲೈಸೆನ್ಸ್ ಪಡೆಯಲು ಹೊಸ ನಿಯಮಾವಳಿಗಳನ್ನು ಪ್ರಕಟಿಸಿದೆ. ಜೂನ್‌ 1ರಿಂದ ಸರ್ಕಾರಿ ಆರ್‌ಟಿಒಗಳ ಬದಲಿಗೆ ಖಾಸಗಿ ಡ್ರೈವಿಂಗ್‌ ತರಬೇತಿ ಕೇಂದ್ರಗಳಲ್ಲಿ ಡ್ರೈವಿಂಗ್‌ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಅಪ್ರಾಪ್ತರಿಗೆ ವಾಹನ ಕೊಟ್ರೆ 25,000 ರೂ.ದಂಡ, ನೋಂದಣಿ ರದ್ದಾಗಲಿದೆ. ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಗಳು ಜೂನ್ 1 ರಿಂದ ಹೊಸ ನಿಯಮಗಳನ್ನು ಹೊರಡಿಸಲಿವೆ. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದ್ದಕ್ಕಾಗಿ ಪೋಷಕರು ಎಷ್ಟು ಚಲನ್ ಪಾವತಿಸಬೇಕು ಮತ್ತು ಎಷ್ಟು ವರ್ಷ ಶಿಕ್ಷೆ…

Read More

ಟಿಪ್ಪರ್ ಲಾರಿ ಚಾಲಕರಿಗೆ ಹೆಲ್ಮೆಟ್​ ಧರಿಸಿಲ್ಲವೆಂದು ದಂಡ ಹಾಕಿದ ಪೊಲೀಸರು

ಕಾರವಾರ:  ಹೆಲ್ಮೆಟ್​ ಧರಿಸಿಲ್ಲವೆಂದು ಟಿಪ್ಪರ್ ಲಾರಿ ಚಾಲಕರೊಬ್ಬರಿಗೆ ಹೊನ್ನಾವರ ಸಂಚಾರ ಠಾಣೆ ಪೊಲೀಸರು  ದಂಡ ಹಾಕಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ವಿನುತಾ ವಿನೋದ್ ನಾಯ್ಕ ಎಂಬುವವರಿಗೆ ಸೇರಿದ ಟಿಪ್ಪರ್ ಲಾರಿಗೆ  ಚಂದ್ರಕಾಂತ್ ಹಳ್ಳೇರ ಎನ್ನುವರು ಮರಳು ತುಂಬಿದ ಟಿಪ್ಪರ್ ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಟಿಪ್ಪರ್ ಲಾರಿಯನ್ನು ಹೊನ್ನಾವರ ಸಂಚಾರಿ ಪೊಲೀಸರು, ಅಳ್ಳಂಕಿ ಎಂಬಲ್ಲಿ ತಡೆದು 500 ರೂಪಾಯಿ ದಂಡ ಹಾಕಿ ರಶೀದಿ ನೀಡಿದ್ದಾರೆ.  ಬಳಿಕ ಚಾಲಕ ರಶೀದಿಯನ್ನು ನೋಡಿ ಒಂದು…

Read More

ರಾಜ್ಯದ ಮದ್ಯಪ್ರಿಯರಿಗೆ ಬಿಗ್‌ ಶಾಕ್‌ : ಜೂನ್‌ ಮೊದಲ ವಾರ ಈ ಕಾರಣಕ್ಕೆ ಸಿಗೋದು ಇಲ್ಲ ಎಣ್ಣೆ..!

ಬೆಂಗಳೂರು: ಜೂನ್ 1 ರಿಂದ ರಾಜ್ಯದ ಮದ್ಯಪ್ರಿಯರಿಗೆ ಮದ್ಯ ಸಿಗುವುದು ಅನುಮಾನ ಎನ್ನಲಾಗಿದೆ. ಹೌದ, ಜೂನ್ 1 ರಿಂದ 6ರ ವರೆಗೆ ವೈನ್ ಶಾಪ್‌, ಎಂಆರ್‌ಪಿ ಔಟ್‌ಲೇಟ್‌ಗಳು ಬಂದ್ ಆಗುತ್ತಿದ್ದಾವೆ ಎನ್ನಲಾಗಿದೆ. ಪದವೀಧರ ಕ್ಷೇತ್ರದ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಮತ ಎಣಿಕೆ ಸಲುವಾಗಿ ಬೆಂಗಳೂರು ಜಿಲ್ಲಾಡಳಿತ ಮದ್ಯ ಮಾರಾಟವನ್ನ ಬಂದ್ ಮಾಡುವಂತೆ ಆದೇಶವನ್ನು ಹೊರಡಿಸಲಾಗಿದೆ. ಇದಲ್ಲದೇ ಜೂನ್ 3 ರಂದು ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ನಡೆಯುವುದರಿಂದ ಜೂನ್ 1ರ ಸಂಜೆ 4 ಗಂಟೆಯಿಂದಲೇ ಬಾರ್…

Read More

ಖಾಸಗಿ ಶಾಲೆಗಳ ಶುಲ್ಕದ ವಿವರ ನೋಟಿಸ್ ಬೋರ್ಡಿನಲ್ಲಿ ಪ್ರಕಟಿಸಲು ಆದೇಶ

ಬೆಂಗಳೂರು: ಖಾಸಗಿ ಶಾಲೆಗಳು ದಾಖಲಾತಿ ಪ್ರಕ್ರಿಯೆ, ದಾಖಲಾತಿ ಶುಲ್ಕ ಮತ್ತು ಇನ್ನಿತರ ಶುಲ್ಕವನ್ನು ಪಡೆಯುವ ವಿವರವನ್ನು ತಮ್ಮ ಶಾಲಾ ಜಾಲತಾಣದಲ್ಲಿ, ಶಾಲಾ ಸೂಚನಾ ಫಲಕದಲ್ಲಿ(ನೋಟೀಸ್ ಬೋರ್ಡ್) ಸಾರ್ವಜನಿಕರು ಮತ್ತು ಪೋಷಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ. ಶಾಲೆಗಳು ಶುಲ್ಕದ ವಿವರಗಳನ್ನು ಪ್ರಕಟಿಸುವುದು ಕಡ್ಡಾಯ ಎಂದು ಶಾಲಾ ಶಿಕ್ಷಣ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಶಾಲೆಗಳು ಶುಲ್ಕ ವಿವರ ಪ್ರಕಟಿಸಲು ನಿರಾಕರಿಸಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅನೇಕ ಶಾಲೆಗಳು ಶುಲ್ಕವನ್ನು…

Read More

ವಿಧಾನ ಪರಿಷತ್ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್, ಸಿ.ಟಿ.ರವಿ ಹೆಸರು  

ಜೂನ್ 13ರಂದು ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ 11 ಸ್ಥಾನಗಳಲ್ಲಿ ಬಿಜೆಪಿಗೆ ಲಭಿಸಲಿರುವ 3 ಸ್ಥಾನಗಳಿಗೆ 44 ಆಕಾಂಕ್ಷಿಗಳಿದ್ದು ಕೋರ್ ಕಮಿಟಿ 12 ಮಂದಿಯ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನೆ ಮಾಡಿದೆ. ಇದರಲ್ಲಿ ದ.ಕ.ಸಂಸದರೂ ಆಗಿರುವ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೆಸರೂ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಜಾತಿವಾರು ಹಾಗೂ ಪ್ರದೇಶವಾರು ಆಧರಿಸಿ 12 ಮಂದಿಯ ಅಂತಿಮ ಪಟ್ಟಿ ತಯಾರು ಮಾಡಲಾಗಿದ್ದು ಈ ಪೈಕಿ ಮೂವರನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ. ರಾಜ್ಯ…

Read More

‘CD ಶಿವು’ ಪೆನ್ ಡ್ರೈವ್ ಪಟಿಂಗರ ಪಟಾಲಂನ ‘ಕ್ಯಾಪ್ಟನ್’: JDS

ಬೆಂಗಳೂರು: CD ಶಿವು ಸಾರಥ್ಯದ, ಪೆನ್ ಡ್ರೈವ್ ಪಟಾಲಂ ಪಟಿಂಗರ ಪಾರ್ಟಿ ಕಾಂಗ್ರೆಸ್ಸಿಗೆ ಜಾತ್ಯತೀತತೆ ಎನ್ನುವುದು ವೋಟಿಗಾಗಿ ಹಾಕುವ ಮುಖವಾಡವಷ್ಟೇ. ಅದನ್ನು ಕಾಶಿ ಗಂಗೆಯಲ್ಲಿ ವಿಸರ್ಜಿಸಿ, ಸಂಚುಕೋರ ಕಾಂಗ್ರೆಸ್ ಪಕ್ಷವಾಗಿ ಹೊರಹೊಮ್ಮಿ ಬಹಳ ದಿನವೇ ಕಳೆದಿದೆ. ಅದು ಗಾಂಧಿ ಕಾಂಗ್ರೆಸ್ ಅಲ್ಲ, ನೆಹರು ಕಾಂಗ್ರೆಸ್ ಅಲ್ಲ.. CD ವಿದ್ಯಾಪಾರಂಗತನ ಕಪಿಮುಷ್ಟಿಗೆ ಸಿಕ್ಕಿ ಪೆನ್ ಡ್ರೈವ್ ಹಂಚಿಕೊಂಡು ವಿಕೃತಾನಂದ ಅನುಭವಿಸುತ್ತಿರುವ ಅಶ್ಲೀಲ ವಿಡಿಯೋ ಬಿಸ್ನೆಸ್ ಪಾರ್ಟಿ ಎಂಬುದಾಗಿ ಜೆಡಿಎಸ್ ವಾಗ್ಧಾಳಿ ನಡೆಸಿದೆ. ಇಂದು ಮತ್ತೊಂದು ಎಕ್ಸ್ ಪೋಸ್ಟ್ ಮಾಡಿದ್ದು,…

Read More

ಅರಬ್ಬೀ ಸಮುದ್ರದಲ್ಲಿ ಚಂಡಮಾರುತ: ಮುಂದಿನ 5 ದಿನಗಳಲ್ಲಿ ಗುಡುಗು ಮಿಂಚು ಸಹಿತ ಬಿರುಗಾಳಿಯ ಮಳೆಯಾಗಲಿದೆ, ಹವಾಮಾನ ಇಲಾಖೆ ಎಚ್ಚರಿಕೆ..!

ಬೆಂಗಳೂರು : ಮುಂಗಾರು ಪೂರ್ವ ಮಳೆ ಅಬ್ಬರದ ನಡುವೆ ಇದೀಗ ಅರಬ್ಬಿ ಸಮುದ್ರದಲ್ಲಿ ಚಂಡಮಾರುತವೇಳುವ ಸಾಧ್ಯತೆ ಇದ್ದು ಮೇ 26ರ ಮಧ್ಯಾಹ್ನದೊಳಗೆ ಅದು ಕರ್ನಾಟಕ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ಪ್ರಕೋಪ ನಿರ್ವಹಣಾ ಕೇಂದ್ರ (ಕೆಎಸ್ಎನ್ ಡಿಎಂಸಿ) ಹೇಳಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಕೆಎಸ್ಎನ್ ಡಿಎಂಸಿ, “ಕರ್ನಾಟಕ, ಗೋವಾ, ಕರಾವಳಿಯ ಸಮೀಪದಲ್ಲಿ ಚಂಡಮಾರುತ ಚಲಾವಣೆಯಾಗುವ ಸಾಧ್ಯತೆಯಿದ್ದು ಮುಂದಿನ 48 ಗಂಟೆಗಳಲ್ಲಿ ಗೋವಾ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ’’ ಎಂದು ತಿಳಿಸಿದೆ. ಚಂಡಮಾರುತದ…

Read More