ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಡೆಡ್ ಲೈನ್ ನಿಗದಿ

ಬೆಳೆ ಸಾಲ ಪಡೆದ ರೈತರು ಇಚ್ಛೆ ಪಡದೇ ಇದ್ದಲ್ಲಿ ತಮ್ಮ ವ್ಯಾಪ್ತಿಯ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಛಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುತ್ತದೆ. ಬೆಂಗಳೂರು : ಪ್ರಸ್ತಕ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ನೋಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಲ್ಲಿ ವಿಮೆ ಮಾಡಿಸಿಕೊಳ್ಳಬೇಕು…

Read More

ಮತ ಎಣಿಕೆ: ಜೂನ್‌ 4, 5 ರಂದು ರಾಜ್ಯಾದ್ಯಂತ ನಿಷೇದಾಜ್ಞೆ ಜಾರಿ..!

ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆ ಜೂನ್‌ 4 ರಂದು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಈ ಹಿನ್ನೆಲೆ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಜೂನ್ 4 ರ ಬೆಳಗ್ಗೆ 6 ಗಂಟೆಯಿಂದ ಜೂನ್ 5 ರ ಬೆಳಗ್ಗೆ 6 ಗಂಟೆಯವರೆಗೆ ರಾಜ್ಯಾದ್ಯಂತ 144 ಸೆಕ್ಷನ್ ಅಡಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಈ ಸಂಬಂಧ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ನಿಷೇದಾಜ್ಞೆ ಜಾರಿ ಮಾಡಿದ ಅವಧಿಯಲ್ಲಿ 5 ಜನ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದಾಗಲಿ, ಇತರ…

Read More

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹ; ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದ ಬಿ.ವೈ.ವಿಜಯೇಂದ್ರ

ಶಿವಮೊಗ್ಗ: ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಚಂದ್ರಶೇಖರ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ರಾಜ್ಯ ಸರ್ಕಾರದ ಮುಂದೆ ಎರಡು ಬೇಡಿಕೆ ಇಡುತ್ತಿದ್ದೇವೆ. ಅಧಿಕಾರಿ ಆತ್ಮಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ಕೊಡಬೇಕು. ಹಗರಣದ ಹೊಣೆಹೊತ್ತು ಸಚಿವ ಬಿ.ನಾಗೇಂದ್ರ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ನಮ್ಮ ಈ…

Read More

ವಿಶ್ವದ ಗಮನ ಸೆಳೆದ ವೈದ್ಯ ಡಾ ಇಸ್ತಿಯಾಕ್ ಅಹಮದ್

ಕುಂದಾಪುರ: ಜಗತ್ತಿನಲ್ಲಿಯೇ ಅಪರೂಪದ ಭಿನ್ನರಕ್ತ ಮಾದರಿಯ ಕಿಡ್ನಿ ಜೋಡಣೆ ಮೂಲಕ ಸಾಧನೆ ಮಾಡಿದ ಕುಂದಾಪುರ ಮೂಲದ ವೈದ್ಯ ಡಾ. ಎ.ಕೆ. ಇಸ್ತಿಯಾಕ್ ಅಹ್ಮದ್ ರನ್ನು ಗಳ್ಫ್ ಮಾದ್ಯಮಗಳು ಹಾಡಿ ಕೊಂಡಾಡಿವೆ! ವೈದ್ಯ ಲೋಕಕ್ಕೆ ಸವಾಲಾಗಿರುವ ಎರಡು ಭಿನ್ನ ಮಾದರಿಯ ರಕ್ತ ವರ್ಗಕ್ಕೆ ಸೇರಿದ ಮೂತ್ರ ಪಿಂಡಗಳನ್ನು ಜೋಡಿಸುವಲ್ಲಿ ಕುಂದಾಪುರ ಮೂಲದ ಡಾ. ಇಸ್ತಿಯಾಕ್ ಮತ್ತು ಅವರ ತಂಡ ಯಶಸ್ವಿಯಾಗಿದೆ. ವೈದ್ಯ ಲೋಕದಲ್ಲಿ ತೀರಾ ಅಪರೂಪದ್ದಾಗಿರುವ ಎಬಿಒ ಹೊಂದಾಣಿಕೆಯಾಗದ ಅತ್ಯಂತ ಸಂಕೀರ್ಣವಾದ  ಈ  ಶಸ್ತ್ರ ಚಿಕಿತ್ಸೆಯನ್ನು ಅಬುದಾಭಿಯ ಖ್ಯಾತ…

Read More

ಪೆನ್‌ಡ್ರೈವ ಹಂಚಿಕೆ ಪ್ರಕರಣ – ಕೊನೆಗೂ ಅರೆಸ್ಟ್ ಆದ ಸಚಿವ ಜಮೀರ್ ಶಿಷ್ಯ ನವೀನ್, ಚೇತನ್

ಬೆಂಗಳೂರು : ಹಾಸನ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಆರೋಪದಲ್ಲಿ ಸಚಿವ ಜಮೀರ್ ಶಿಷ್ಯ ನವೀನ್ ಗೌಡ ಹಾಗೂ ಚೇತನ್‌ನನ್ನ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ರು. ಇಂದು ಮಧ್ಯಾಹ್ನ ಹೈ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಹಿನ್ನೆಲೆ ಕೋರ್ಟ್ ಬಳಿ ಬಂದಿದ್ದ ಆರೋಪಿಗಳನ್ನ ಎಸ್‌ಐಟಿ ಬಂಧಿಸಿದೆ. ಪೆನ್ ಡ್ರೈವ್ ಹಂಚಿಕೆ ಆರೋಪದಲ್ಲಿ ಹಾಸನದ ಸೆನ್ ಠಾಣೆಯಲ್ಲಿ ನವೀನ್ ಗೌಡ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು….

Read More

‘ರೇವ್ ಪಾರ್ಟಿ’ ಪ್ರಕರಣ : ನಟಿ ಹೇಮಾ ಸೇರಿ 8 ಮಂದಿಗೆ ಮತ್ತೆ ‘CCB’ ನೋಟಿಸ್..!

ಬೆಂಗಳೂರಿನ ಜಿ.ಆರ್. ಪಾರ್ಮ್ ಹೌಸ್ ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾ ಸೇರಿ 8 ಮಂದಿಗೆ ಸಿಸಿಬಿ ಪೊಲೀಸರು ಮತ್ತೆ ನೋಟಿಸ್ ನೀಡಿದ್ದಾರೆ. ಸಿಸಿಬಿ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗುವಂತೆ ತೆಲುಗು ನಟಿ ಹೇಮಾ ಸೇರಿ 8 ಮಂದಿಗೆ ಮತ್ತೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಟಾಲಿವುಡ್ ಖ್ಯಾತ ನಟಿ ಹೇಮಾ, ಆಶು ರೈ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ರೇವ್ ಪಾರ್ಟಿ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿತ್ತು.ರೇವ್…

Read More

CANARA BANK APK: ವಾಟ್ಸಾಪ್‌ಗೆ ಈ ಮೆಸೇಜ್‌ ಬಂದರೆ ತಕ್ಷಣ ಡಿಲೀಟ್‌ ಮಾಡಿ

ವಾಟ್ಸಾಪ್‌ನಲ್ಲಿ ಬ್ಯಾಂಕ್‌ ಹೆಸರಿನಲ್ಲಿಸಿ APK ಫೈಲ್‌ ಕಳುಹಿಸುವ ಮೂಲಕ ಖಾತೆಗಳಿಂದ ಹಣ ದೋಚುವ ಹೊಸ ಮಾದರಿಸೈಬರ್‌ ಕ್ರೈಂ ಈಗ ಜಾಸ್ತಿಯಾಗಿದ್ದು ಹಲವರು ಈಗಾಗಲೇ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಬ್ಯಾಂಕ್‌ KYC ಅಪ್‌ಡೇಟ್‌, ರಿಡೀಮಿಂಗ್‌ ಪಾಯಿಂಟ್ಸ್‌ ಇತ್ಯಾದಿ ನೆಪದಲ್ಲಿ ನಿಮ್ಮ ಮೊಬೈಲ್‌ಗೆ ಕನ್ನ ಹಾಕುತ್ತಾರೆ. ಒಮ್ಮೆ APK ಫೈಲ್‌ಇನ್‌ಸ್ಟಾಲ್‌ ಮಾಡಿದರೆ ಮೊಬೈಲ್‌ನ ಎಲ್ಲ ಖಾಸಗಿ ಮಾಹಿತಿ ಸೈಬರ್‌ ಕಳ್ಳರ ಪಾಲಾಗಿ ನಾನಾ ರೀತಿ ಮೋಸ ಹೋಗಬೇಕಾಗುತ್ತದೆ. ಹೀಗಾಗಿ ವಾಟ್ಸಾಪ್‌ಗೆ ಬರುವ ಯಾವುದೇ APK ಫೈಲ್‌, ಲಿಂಕ್‌ ಅಥವಾ ಮೆಸೇಜ್‌…

Read More

ಮೇ.31 ರಂದು ‘SIT’ ವಿಚಾರಣೆಗೆ ಹಾಜರಾಗುತ್ತೇನೆ – ಪ್ರಜ್ವಲ್ ರೇವಣ್ಣ

ಬೆಂಗಳೂರು : ಮೇ.31 ರಂದು ಎಸ್ ಐ ಟಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ವಿದೇಶದಲ್ಲಿ ವಿಡಿಯೋ ಮೂಲಕ ಹೇಳಿಕೆ ನೀಡಿದ ಪ್ರಜ್ವಲ್ ರೇವಣ್ಣ ‘ ನಾನು ನನ್ನ ತಂದೆ-ತಾಯಿ, ತಾತನ ಕ್ಷಮೆ ಕೇಳುತ್ತೇನೆ. ವಿದೇಶದಕ್ಕೆ ಹೋದ 3 -4 ದಿನದ ಬಳಿಕ ಪ್ರಕರಣದ ಬಗ್ಗೆ ತಿಳಿಯಿತು. ಮೇ 31 ರಂದು ಬೆಳಗ್ಗೆ 10 ಗಂಟೆಗೆ ಎಸ್ ಐ ಟಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ವಾರ್ನ್ ಮಾಡಿದ್ದ ತಾತ ನನ್ನ…

Read More

402 ‘PSI’ ಸೇರಿ 4000 ಹುದ್ದೆಗಳ ಭರ್ತಿಗೆ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಹುದ್ದೆ ಸೇರಿದಂತೆ ವಿವಿಧ ಇಲಾಖೆ/ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಡೆಸಲು ಉದ್ದೇಶಿಸಿರುವ ನೇಮಕಾತಿ ಪರೀಕ್ಷೆಗಳ ಸಂಭಾವ್ಯ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಸೇರಿದಂತೆ, ವಿವಿಧ ಇಲಾಖೆ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂಭಾವ್ಯ ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗಿದೆ. ಪೋಲಿಸ್ ಇಲಾಖೆಯ 402 ಪಿಎಸ್‌ಐ ಹುದ್ದೆಗಳಿಗೆ ಸೆಪ್ಟೆಂಬರ್ 22ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೆಇಎ ಪ್ರಕಟಣೆ…

Read More

ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ವೀರ ಸಾವರ್ಕರ್ ಸಮ್ಮಾನ್- 2024 ಪ್ರಶಸ್ತಿ ಪ್ರದಾನ

ಸಾವರ್ಕರ್ ಪ್ರತಿಷ್ಠಾನದಿಂದ ಮೇ 28ರಂದು ಸಂಜೆ 5.30ಕ್ಕೆ ಮೈಸೂರು ಕಲಾಮಂದಿರದಲ್ಲಿ ‘ವೀರ ಸಾವರ್ಕರ್ ಸಮ್ಮಾನ್-2024′ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಪ್ರತಿಷ್ಠಾನದ ಸದಸ್ಯ ರಾಕೇಶ್ ಭಟ್ ತಿಳಿಸಿದರು. ನಗರದ ವೀರ್ ಸಾವರ್ಕರ್ ಪ್ರತಿಷ್ಠಾನದಿಂದ ಮೇ.28 ರಂದು ಇಲ್ಲಿನ ಕಲಾಮಂದಿರದಲ್ಲಿ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರವನ್ನು ಆಯೋಜಿಸಲಾದೆ. ಸ್ವಾತಂತ್ರ್ಯ ಸೇನಾನಿ ವಿನಾಯಕ ದಾಮೋದರ್ ಸಾವರ್ಕರ್ ವಿಚಾರಧಾರೆಗಳ ಕುರಿತು ಒಂದು ಲಕ್ಷ ನಗದು, ವೀರ ಸಾವರ್ಕರ್ ಅವರ ಪುತ್ಥಳಿ ಹಾಗೂ ಪ್ರಶಸ್ತಿ ಪತ್ರವುಳ್ಳ ಪ್ರತಿಷ್ಠಿತ ವೀರ ಸಾವರ್ಕರ್…

Read More