ಬಿಗ್‌ಶಾಕ್‌: ಪ್ರತಿ ಲೀಟರ್ ‘ಹಾಲಿಗೆ’ 2.10 ರೂ ಹೆಚ್ಚಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆ ಬಿಸಿತಟ್ಟಿದೆ. ಮೊನ್ನೆತಾನೇ ಪೆಟ್ರೋಲ್‌, ಡಿಸೇಲ್‌ ಮೇಲಿನ ಸೆಸ್‌ ದರವನ್ನು ಹೆಚ್ಚಿದ ರಾಜ್ಯ ಸರ್ಕಾರ ಈಗ ಮತ್ತೆ ಹಾಲಿನ ದರವನ್ನು ಹೆಚ್ಚಿಸಿ ಆದೇಶವನ್ನು ಹೊರಡಿಸಿದೆ. ಪ್ರತಿ ಲೀಟರ್‌ ಹಾಲಿನ ದರವನ್ನು 2.10 ರೂಗೆ ಹೆಚ್ಚಿಸಿ ಕೆಎಂಎಫ್‌ ಆದೇಶ ಹೊರಡಿಸಿದೆ. ಇದರೊಂದಿಗೆ ಮೊದಲೇ ಬೆಲೆ ಏರಿಕೆಯ ಬಿಸಿಯಲ್ಲಿರುವ ರಾಜ್ಯದ ಜನತೆ ಮತ್ತೆಕಿಸೆಗೆ ಬಾರವಾಗುವುದರಲ್ಲಿ ಅನುಮಾನವಿಲ್ಲ. ದರ ವಿಚಾರವಾಗಿ ಆಗುತ್ತಿರುವ ನಷ್ಟದ ಬಗ್ಗೆ ಸಭೆಯಲ್ಲಿ ಒಕ್ಕೂಟಗಳು ತಮ್ಮ ಸಮಸ್ಯೆಯನ್ನು ಸಿಎಂ ಮುಂದೆ ಹೇಳಿಕೊಂಡಿದ್ದ…

Read More

ಸನಾತನ ಧರ್ಮದ ಅವಹೇಳನ: ಇಂದು ಬೆಂಗಳೂರಿನ ನ್ಯಾಯಾಲಯಕ್ಕೆ ಉದಯನಿಧಿ ಸ್ಟಾಲಿನ್?

ಸನಾತನ ಧರ್ಮದ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇಂದು ಬೆಳಗ್ಗೆ 10:30ರ ಸುಮಾರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗುವ ಎಲ್ಲಾ ಸಾಧ್ಯತೆಗಳು ಇವೆ. ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ ಎಂಬ ಅವರ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳ ಹಿಂದೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಮಾಡಿ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತು. ಇಂದು ಅವರು 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಎದುರು ಹಾಜರಾಗಿ…

Read More

BREAKING: MLC ಸೂರಜ್‌ ರೇವಣ್ಣ ವಿರುದ್ದ ದೂರು ನೀಡಿದ್ದ ದೂರುದಾರ ನಾಪತ್ತೆ

ಬೆಂಗಳೂರು: ಸೂರಜ್‌ ರೇವಣ್ಣ ವಿರುದ್ದ ದೂರು ನೀಡಿದ್ದ ದೂರು ದಾರ ಶಿವಕುಮಾರ್ ಈಗ ನಾಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸೂರಜ್ ರೇವಣ್ಣ ಪರವಾಗಿ ದೂರು ನೀಡಿದ ನಂತರ ಶಿವಕುಮಾರ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಶಿವಕುಮಾರ್ ನಾಪತ್ತೆಯಾಗಿದ್ದಾನೆ ಎನ್ನಲಾಗಿದ್ದು, ಸೂರಜ್‌ ಪರ ಯುವಕರು ಅವರನ್ನು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎನ್ನುವಾತ ಸಂತ್ರಸ್ತನ ವಿರುದ್ಧ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಆದ್ರೆ, ಇದೀಗ ಸಂತ್ರಸ್ತನ ದೂರಿನ…

Read More

ಶಾಲೆಗಳಲ್ಲಿ ʻಯೋಗ ಕಡ್ಡಾಯʼ, ಶಿಕ್ಷಕರ ನೇಮಕ : ರಾಜ್ಯ ಸರ್ಕಾರ ಘೋಷಣೆ

ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಯೋಗವನ್ನು ರೂಢಿಗೊಳಿಸಬೇಕೆನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತೆ ಶಾಲೆಗಳಲ್ಲಿ ಯೋಗವನ್ನು ಕಡ್ಡಾಯ ಮಾಡಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಚಿವರು, ಶಾಲೆಗಳಲ್ಲಿ ಯೋಗವನ್ನು ಕಡ್ಡಾಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯೋಗ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ, ಬಹಳ ವರ್ಷಗಳಿಂದಲೂ ಶಾಲೆಗಳಲ್ಲಿ ಯೋಗ ಮತ್ತು ದೈಹಿಕ ಶಿಕ್ಷಣವನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರ ಈ ಪದ್ಧತಿಯನ್ನು ನಿಲ್ಲಿಸಿತ್ತು. ಈಗ ನಮ್ಮ ಸರ್ಕಾರ ಮತ್ತೆ ಆರಂಭಿಸಿದೆ ಎಂದರು….

Read More

ದರ್ಶನ್‌ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ..!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದ ನಟ ದರ್ಶನ್‌ ಸೇರಿದಂತೆ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶ ನೀಡಿದೆ. ಶನಿವಾರ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ದರ್ಶನ್‌, ವಿನಯ್‌, ಪ್ರದೋಶ್‌ ಹಾಗೂ ಧನರಾಜ್‌ ಅವರನ್ನು ಜು.4 ರವರೆಗೆ(12 ದಿನಗಳ ಕಾಲ) ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಪೊಲೀಸರು ನಾಲ್ವರು ಆರೋಪಿಗಳನ್ನು ಬೇರೆ ಜೈಲಿಗೆ ವರ್ಗಾಯಿಸಲು ಕೋರ್ಟಿನಲ್ಲಿ ಮನವಿ ಮಾಡಿದ್ದಾರೆ. ಸದ್ಯ ಕೋರ್ಟ್‌ ಮುಂದಿನ ವಿಚಾರಣೆಯನ್ನು ಜೂ.24 ಕ್ಕೆ ಮುಂದೂಡಿದೆ. ಈಗಾಗಲೇ ಈ ಪ್ರಕರಣದಲ್ಲಿ ಎ1…

Read More

ರಾಜ್ಯ ಸರ್ಕಾರದಿಂದ ಟ್ರಕ್ಕಿಂಗ್‌ ಪ್ರಿಯರಿಗೆ ಶಾಕ್‌ : ಪ್ರಸಿದ್ಧ ಮುಳ್ಳಯ್ಯನಗಿರಿ, ಎತ್ತಿನಭುಜದಲ್ಲಿ ʻಟ್ರಿಕ್ಕಿಂಗ್‌ʼ ನಿಷೇಧ

ಚಿಕ್ಕಮಗಳೂರು : ಟ್ರಕ್ಕಿಂಗ್‌ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್‌ ನೀಡಿದ್ದು, ಪ್ರಸಿದ್ಧ ಪ್ರವಾಸಿತಾಣಗಳಾದ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಎತ್ತಿನಭುಜ ಪ್ರದೇಶಗಳಲ್ಲಿ ಟ್ರಕ್ಕಿಂಗ್‌ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಮುಳ್ಳಯ್ಯನಗಿರಿ ಹಾಗೂ ಎತ್ತಿನಭುಜ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತವಾಗಿ ಟ್ರೆಕ್ಕಿಂಗ್‌ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮುನ್ನೆಚ್ಚರಿಕೆಯಿಂದ ಟ್ರಕ್ಕಿಂಗ್ ಹೋಗುವ ಮರ್ಗದಲ್ಲಿ ಪ್ರವಾಸಿಗರ ಸುರಕ್ಷತಾ ಕಾಮಗಾರಿಗೆ ಇಲಾಖೆ ಮುಂದಾಗಿದೆ. ಕಾಮಗಾರಿ ಅನುಷ್ಠಾನಗೊಳ್ಳಲಿರುವ ಕಾರಣ ಎತ್ತಿನ ಭುಜಕ್ಕೆ ಮುಂದಿನ ಆದೇಶದವರೆಗೂ ಅರಣ್ಯ ಇಲಾಖೆ ಪ್ರವಾಸಿಗರಿಗೆ…

Read More

ಉದ್ಯೋಗಾಕಾಂಕ್ಷಿಗಳಿಗೆ ʻKSRTCʼ ಗುಡ್‌ ನ್ಯೂಸ್‌ : 1,260 ಚಾಲಕರ ನೇಮಕಾತಿ

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆಎಸ್‌ ಆರ್‌ ಟಿಸಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಹೊರಗುತ್ತಿಗೆ ಆಧಾರದಲ್ಲಿ 1,260 ಚಾಲಕರ ನೇಮಕಕ್ಕೆ ಮುಂದಾಗಿದೆ. ಚಾಲಕರ ಕೊರತೆ ಹಿನ್ನಲೆಯಲ್ಲಿ 2 ಸಾವಿರಕ್ಕೂ ಹೆಚ್ಚಿನ ಚಾಲಕ ಕಂ ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಲು ಕೆಎಸ್‌ ಆರ್‌ ಟಿಸಿ ಪ್ರಕ್ರಿಯೆ ಆರಂಭಿಸಿದ್ದು, ಈ ನಡುವೆ ಹೊರಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕಾತಿಗೂ ಮುಂದಾಗಿದೆ. ಕಳೆದ ವರ್ಷ ಕೆಎಸ್‌ ಆರ್‌ ಟಿಸಿ 1,700 ಚಾಲಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು. ಇದೀಗ 2,200 ಚಾಲಕ ಕಂ ನಿರ್ವಾಹಕರ ನೇಮಕಕ್ಕೆ…

Read More

ಭ್ರೂಣ ಹತ್ಯೆ ಸುಳಿವು ಕೊಟ್ಟವರಿಗೆ 1 ಲಕ್ಷ ರೂಪಾಯಿ ಬಹುಮಾನ!

ಬೆಂಗಳೂರು: ರಾಜ್ಯದಲ್ಲಿ ಭ್ರೂಣ ಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಮುಂದಾಗಿರುವ ಆರೋಗ್ಯ ಇಲಾಖೆ ಭ್ರೂಣ ಹತ್ಯೆ ಸುಳಿವು ನೀಡಿದವರಿಗೆ 1 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದೆ. ಯಾವುದೇ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ನಡೆಯುತ್ತಿರುವ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದವರಿಗೆ ಈ ಹಿಂದೆ 50 ಸಾವಿರ ರೂ. ಬಹುಮಾನ ನೀಡಲಾಗುತ್ತಿತ್ತು. ಈಗ ಈ ಮೊತ್ತವನ್ನು ಒಂದು ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಗುಪ್ತ ಕಾರ್ಯಾಚರಣೆ ಬಗ್ಗೆ ನಿಖರ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 50 ಸಾವಿರ ರೂ….

Read More

ಹಾಸನದಲ್ಲಿ ಬೆಚ್ಚಿಬೀಳಿಸಿದ ಗುಂಡಿನ ದಾಳಿ – ಇಬ್ಬರ ಸಾವು

ಹಾಸನ: ಇಲ್ಲಿನ ಹೊಯ್ಸಳ‌ನಗರ ಬಡಾವಣೆಯಲ್ಲಿ ಗುರುವಾರ ಮಧ್ಯಾಹ್ನ ಶೂಟೌಟ್ ಪ್ರಕರಣ ನಡೆದಿದ್ದು, ಇದರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನ ಆಸೀಫ್ (46) ಮತ್ತು ಹಾಸನದ ಆಡುವಳ್ಳಿಯ ಶರಾಫತ್ ಅಲಿ (52) ಮೃತರು. ಇವರಿಬ್ಬರೂ ಸ್ನೇಹಿತರಾಗಿದ್ದು ಶುಂಠಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಮೃತ ಶರಾಪತ್ ಮೂಲತಃ ದೆಹಲಿಯವರಾಗಿದ್ದು, ಹಲವು ವರ್ಷಗಳಿಂದ ಹಾಸನದಲ್ಲಿ ವಾಸವಿದ್ದರು. ಇವರಿಬ್ಬರೂ ಮಧ್ಯಾಹ್ನ 12ರ ಸಮಯದಲ್ಲಿ ಕಾರಿನಲ್ಲಿ ಹೊಯ್ಸಳ ನಗರಕ್ಕೆ ಬಂದಿದ್ದರು. ಶೂಟೌಟ್‌ಗೆ ರಿಯಲ್‌ ಎಸ್ಟೇಟ್‌ ವಿಷಯವೇ ಕಾರಣ ಎಂದೆನ್ನಲಾಗಿದೆ. ಗುಂಡಿನ ದಾಳಿಯ…

Read More

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಶೀಘ್ರವೇ ಬಸ್‌ ಪ್ರಯಾಣ ದರ ಹೆಚ್ಚಳದ ಸುಳಿವು ನೀಡಿದ ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ಶೀಘ್ರವೇ ಬಸ್‌ ಪ್ರಯಾಣ ದರ ಹೆಚ್ಚಳ ಮಾಡುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಸುಳಿವು ನೀಡಿದ್ದಾರೆ. ಅವರು ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಡೀಸೆಲ್ ದರ ಹೆಚ್ಚಳದಿಂದ ಹೆಚ್ಚು ಹೊರೆ ಆಗುತ್ತಿದೆ. ನಿಗಮಗಳಿಂದ ಪ್ರಸ್ತಾವನೆ ಬಂದರೆ ಪರಿಶೀಲನೆ ಮಾಡುತ್ತೇವೆ ಅಂತ ಹೇಳಿದರು. ಇದೇ ವೇಳೆ ಅವರು ಮಾತನಾಡಿ, ಶಕ್ತಿ ಗ್ಯಾರಂಟಿ (Shakti Scheme) ಯೋಜನೆಯ 1100 ಕೋಟಿ ರೂ. ಹಣವನ್ನು ಸಾರಿಗೆ ನಿಗಮಗಳಿಗೆ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Read More