ಮಂಗಳೂರು: ಕೆಲಸಕ್ಕೆಂದು ಮನೆಯಿಂದ ಹೊರಟ ಯುವತಿ ನಾಪತ್ತೆ

ಮಂಗಳೂರು: ನಗರದ ಮಾಲ್‌ವೊಂದರಲ್ಲಿ ಉದ್ಯೋಗಿಯಾಗಿರುವ 24 ವರ್ಷದ ವಿವಾಹಿತ ಯೊಬ್ಬರು ನವೆಂಬರ್ 11ರ ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟವರು ನಾಪತ್ತೆಯಾಗಿರುವ ಕುರಿತು ಅವರ ಪತಿ ದೂರು ದಾಖಲಿಸಿದ್ದಾರೆ. ನಾಪತ್ತೆಯಾದ ಮಹಿಳೆಯನ್ನು ಜಪ್ಪು ಸೂಟರ್‌ಪೇಟೆಯ ನಿವಾಸಿ ಕುಮಾರ್ ಅವರ ಪತ್ನಿ ಸುಮಾ ಎನ್. (24) ಎಂದು ಗುರುತಿಸಲಾಗಿದೆ. ಸುಮಾ ಅವರು ಸೋಮವಾರ ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟವರು ಕೆಲಸದ ಸ್ಥಳವನ್ನು ತಲುಪಿಲ್ಲ. ಅವರ ಪತಿ ಕುಮಾರ್ ಅವರು ಸುಮಾ ಅವರಿಗೆ ಕರೆ ಮಾಡಲು ಪ್ರಯತ್ನಿಸಿದಾಗ ಅವರ ಮೊಬೈಲ್ ಸ್ವಿಚ್…

Read More

ಉಪ್ಪಿನಂಗಡಿ: ವಿದ್ಯಾರ್ಥಿನಿ ಕೀಟನಾಶಕ ಸೇವಿಸಿ ಆತ್ಮಹತ್ಯೆ!!

ಉಪ್ಪಿನಂಗಡಿ: 10ನೇ ತರಗತಿವಿದ್ಯಾರ್ಥಿನಿಯೋರ್ವಳು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದಲ್ಲಿ ನಡೆದಿದೆ.ಮೃತ ವಿದ್ಯಾರ್ಥಿನಿಯನ್ನು ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ ಹರ್ಷಿತಾ (15) ಎಂದು ಗುರುತಿಸಲಾಗಿದೆ.ಹರ್ಷಿತಾ ಉಪ್ಪಿನಂಗಡಿ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ನವೆಂಬ‌ರ್ 4ರಂದು ತಲೆನೋವು ಇದೆ ಎಂದು ಹೇಳಿ ಶಾಲೆಗೆ ತೆರಳದೇ ಮನೆಯಲ್ಲಿಯೇ ಇದ್ದಾಳೆ. ಈ ಸಂದರ್ಭಮನೆಯಲ್ಲಿ ಇದ್ದ ಹುಲ್ಲಿಗೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಗೊಂಡಿದ್ದಾಳೆ.ವಿಷಯ ತಿಳಿದ ತಕ್ಷಣ ಕೂಲಿ ಕೆಲಸಕ್ಕೆ ತೆರಳಿದ್ದ ತಾಯಿ ಗೀತಾ ಮನೆಗೆ…

Read More

ನವೆಂಬರ್ 16ರಂದು‌ ಕಟೀಲು ಏಳನೆಯ ಮೇಳದ ಪಾದಾರ್ಪಣೆ : ವೈಭವದ ಮೆರವಣಿಗೆಗೆ ಸಜ್ಜು

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಶ್ರಯದಲ್ಲಿನ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳನೆಯ ಮೇಳದ ಪಾದಾರ್ಪಣೆ ನವೆಂಬರ್ 16ರಂದು ನಡೆಯಲಿದೆ ಎಂದು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ. ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನವೆಂಬರ್ 15ರಂದು ಮಧ್ಯಾಹ್ನ 3 ಗಂಟೆಗೆ ಬಜಪೆಯಿಂದ ಎಂಟು ಸ್ತಬ್ಧಚಿತ್ರಗಳಲ್ಲಿ ದೇವರ ಪರಿಕರಗಳು, ಕಿರೀಟಗಳು, ತೊಟ್ಟಿಲು, ಚಿನ್ನ-ಬೆಳ್ಳಿಯ ಆಯುಧಗಳನ್ನು ವೈಭವದ ಮೆರವಣಿಗೆಯಲ್ಲಿ ಕಟೀಲಿಗೆ ತರಲಾಗುವುದಾಗಿ ಹೇಳಿದರು. ಈ ಪರಿಕರಗಳ ಮೌಲ್ಯ ಸುಮಾರು ಒಂದು…

Read More

ಧರ್ಮಸ್ಥಳ ಪ್ರಕರಣ : ‘SIT’ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್

 ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತಿಟ್ಟಿದ್ದಾರೆ ಎನ್ನಲಾದ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದ್ದ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ. ಈ ಆದೇಶದಿಂದ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಮುಂದುವರೆಯಲಿದ್ದು, ಪಿತೂರಿ ನಡೆಸಿದ ಆರೋಪ ಎದುರಿಸುತ್ತಿದ್ದ ವಿಠಲಗೌಡ, ಗಿರೀಶ್ ಮಟ್ಟಣ್ಣವರ್, ಮಹೇಶ್ ತಿಮರೋಡಿ ಮತ್ತು ಟಿ. ಜಯಂತ್ ಅವರು ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಿದೆ. ವಿಚಾರಣೆ ವೇಳೆ, ಸರ್ಕಾರದ ಪರ ವಕೀಲರು, ‘ಅರ್ಜಿದಾರರಿಗೆ ಈ ಹಿಂದೆ ಹಲವು ಬಾರಿ ನೋಟಿಸ್‌ ನೀಡಿರುವುದು 150 ತಾಸು…

Read More

ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಂಟ್ವಾಳದ ಸಾನ್ವಿ.ಕೆ ಪ್ರಥಮ

ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ 17ರ ವಯೋಮಿತಿಯ ಬಾಲಕಿಯರ ಕರಾಟೆ ಸ್ಪರ್ದೆಯಲ್ಲಿ ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿಧ್ಯಾರ್ಥಿನಿ ಸಾನ್ವಿ.ಕೆ. ಪ್ರಥಮ ಸ್ಥಾನದೊಂದಿಗೆ ಸ್ವರ್ಣಪದಕ ಮತ್ತು ಪ್ರಮಾಣ ಪತ್ರ ಪಡೆದಿರುತ್ತಾರೆ. ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ರ್ಟಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರು ರಾಜ್ಯಗುಪ್ತ ವಾರ್ತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಕೃಷ್ಣ ಕುಲಾಲ್ ಮತ್ತು ಅಶ್ವಿನಿ ದಂಪತಿ ಪುತ್ರಿ ಹಾಗೂ ಅಶೋಕ್…

Read More

ಬಂಟ್ವಾಳ ಕುಲಾಲ ಸುಧಾರಕ ಸಂಘ ಹೊಸಳ್ಳಿ ಇದರ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್ ರವರಿಗೆ ಸನ್ಮಾನ

ಬಂಟ್ವಾಳ ಕುಲಾಲ ಸುಧಾರಕ ಸಂಘ ಹೊಸಳ್ಳಿ ಇದರ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್ ರವರಿಗೆ ಸನ್ಮಾನಿಸಿದರು. ಬಂಟ್ವಾಳ ಕುಲಾಲ ಸುಧಾರಕ ಸಂಘ ಹೊಸಳ್ಳಿ ಇದರ ನಿಕಟ ಪೂರ್ವಾಧ್ಯಕ್ಷರಾದ ಮಚೇಂದ್ರನಾಥ ಸಾಲಿಯಾನ್ , ರಾಧಾಕೃಷ್ಣ ಬಂಟ್ವಾಳ ,ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲ್ ,ಪದಾಧಿಕಾರಿಗಳಾದ ಸತೀಶ್ ಸಂಪಾಜೆ , ಸೋಮನಾಥ ಸಾಲ್ಯಾನ್ , ಮಾಧವ ಬಿ ಸಿ ರೋಡ್ , ಜಯಂತ್ ಅಗ್ರಬೈಲ್ , ಪ್ರೇಮ ಜನಾರ್ಧನ , ಆಶಾ ಗಿರಿಧರ್ , ಮೀನಾಕ್ಷಿ…

Read More

ನವೆಂಬರ್ 23ರಂದು ಮಂಗಳೂರಿನ “ಕುಲಾಲ್ ಭವನ” ಲೋಕಾರ್ಪಣೆ

ಮಂಗಳೂರಿನ ಮಂಗಳಾದೇವಿ ಸಮೀಪ ಮುಂಬಯಿ ಕುಲಾಲ ಸಂಘದ ಒಡೆತನದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕುಲಾಲ ಭವನವು ನವೆಂಬರ್ 23ರಂದು ಲೋಕಾರ್ಪಣೆಗೊಳ್ಳಲಿದೆ ಇದರ ಉದ್ಘಾಟನಾ ಸಮಾರಂಭಕ್ಕೆ ಅಧ್ಯಕ್ಷರಾದ ರಘು ಎ.ಕುಲಾಲ್, ಗೌರವ ಅಧ್ಯಕ್ಷರಾದ ದೇವದಾಸ್ ಎಲ್. ಕುಲಾಲ್, ಉಪಾಧ್ಯಕ್ಷ ಡಿ.ಐ.ಮೂಲ್ಯ, ಗೌ.ಪ್ರಧಾನ ಕಾರ್ಯದರ್ಶಿ ಕರುಣಾಕರ್ ಬಿ ಸಾಲಿಯಾನ್, ಗೌ.ಕೋಶಾಧಿಕಾರಿ ಜಯ ಎಸ್. ಅಂಚನ್, ಕಟ್ಟಡ ನಿರ್ಮಾಣ ಸಮಿತಿ ಕಾರ್ಯಧ್ಯಕ್ಷರು, ಗಿರೀಶ್ ಬಿ ಸಾಲಿಯಾನ್, ಕಟ್ಟಡ ನಿರ್ಮಾಣ ಸಮಿತಿ ಉಪಕಾರ್ಯಧ್ಯಕ್ಷರು ಸುನಿಲ್ ಆರ್ ಸಾಲಿಯಾನ್, ಮಹಿಳಾ ವಿಭಾಗ ಕಾರ್ಯಧ್ಯಕ್ಷ ಸುಚಿತಾ…

Read More

ಬಂಟ್ವಾಳ: ಮಹಿಳೆಗೆ ಡಿಜಿಟಲ್ ಅರೆಸ್ಟ್- 1.16 ಕೋಟಿ ರೂ. ವಂಚನೆ

ಬಂಟ್ವಾಳ : ವಾಟ್ಸ್ಆ್ಯಪ್ ಮೂಲಕ ಮಹಿಳೆಯೊಬ್ಬರಿಗೆ ವಿಡಿಯೋ ಕರೆ ಮಾಡಿ ಬೆದರಿಕೆ ಹಾಕಿ, ಡಿಜಿಟಲ್ ಅರೆಸ್ಟ್ ಮಾಡಿ ಬಳಿಕ ಸುಮಾರು 1.16 ಕೋಟಿ ರೂ. ಲಪಟಾಯಿಸಿದ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆ.24ರಂದು ಬೆಳಗ್ಗೆ ಮಹಿಳೆ ಮನೆಯಲ್ಲಿದ್ದ ಸಮಯ ವಾಟ್ಸ್ಆ್ಯಪ್ ಮೂಲಕ ವಿಡಿಯೊ ಕರೆ ಬಂದಿದ್ದು, ಟೆಲಿ ಕಮ್ಯುನಿಕೇಶನ್ ಡಿಪಾರ್ಟ್ಮೆಂಟ್ ದಿಲ್ಲಿಯಿಂದ ಮಾತನಾಡುವುದಾಗಿ ಹೇಳಿದ್ದರು. ನಿಮ್ಮ ಹೆಸರಿನಲ್ಲಿರುವ ಆಧಾರ್ ಕಾರ್ಡ್ ಮತ್ತು ಪಾನ್‌ ಕಾರ್ಡ್ ಬಳಸಿ ಮೊಬೈಲ್ ನಂಬರ್ ಖರೀದಿಸಿ ದಿಲ್ಲಿಯಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ…

Read More

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲ. ಅನಿಲ್ ದಾಸ್ ಅವರಿಗೆ ಕುಲಾಲ ವೇದಿಕೆ ಮಂಜೇಶ್ವರ ವತಿಯಿಂದ ಸನ್ಮಾನ

ಕಾಸರಗೋಡು: ಕುಲಾಲ ವೇದಿಕೆ ಮಂಜೇಶ್ವರ ಇದರ ವತಿಯಿಂದ ಬೃಹತ್ ರಕ್ತದಾನ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ, ‘ಗಿಳಿವಿಂಡು’ ಮಂಜೇಶ್ವರ ಇಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಲ.ಅನಿಲ್ ದಾಸ್ ಕುಲಾಲ ಕುಂಬಾರರ ವೇದಿಕೆ ಜಿಲ್ಲಾಧ್ಯಕ್ಷರು ದ.ಕ ಜಿಲ್ಲೆ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರದ ಪ್ರಯುಕ್ತ ಕುಲಾಲ ಯುವ ವೇದಿಕೆ ಮಂಜೇಶ್ವರ ಇವರು ರಾಜಕೀಯ ಮುಖಂಡರು ಮತ್ತು ಅತಿಥಿ ಗಣ್ಯರ ನೇತೃತ್ವದಲ್ಲಿ ಸನ್ಮಾನಿಸಿದರು. ಇನ್ನು ಕುಲಾಲ ಸಂಘಟನೆಗೆ ಮತ್ತು ಯುವ…

Read More

ನ. 15 ರಿಂದ 19ರ ವರೆಗೆ ಧರ್ಮಸ್ಥಳ ಲಕ್ಷ ದೀಪೋತ್ಸವ

ಧರ್ಮಸ್ಥಳ: ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ನ. 15 ರಿಂದ 19ರ ವರೆಗೆ ನಡೆಯಲಿವೆ. ನ. 18 ರಂದು ಮಂಗಳವಾರ ಸಂಜೆ ಗಂಟೆ 5 :00 ರಿಂದ ಸರ್ವಧರ್ಮ ಸಮ್ಮೇಳನದ ಅಧಿವೇಶನವು ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ. ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲ ಸೌಕರ್ಯಾಭಿವೃದ್ಧಿ ಇಲಾಖೆ ಸಚಿವರಾದ ಡಾ.ಬಿ.ಎಂ. ಪಾಟೀಲ್ ಸರ್ವಧರ್ಮ ಸಮ್ಮೇಳನದ 93 ನೇ ಅಧೀವೇಶನ ಉದ್ಘಾಟಿಸಲಿದ್ದಾರೆ.ಹರಿಹರಪುರದ ಪೂಜ್ಯ ಸ್ವಯಂಪ್ರಕಾಶ್ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು…

Read More