ಧರ್ಮಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು, ಪ್ರಕರಣ‌ ದಾಖಲು

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಬೈಕ್ ನಿಲ್ಲಿಸಿ ದೇವರ ದರ್ಶನ ಪಡೆದು ಹಿಂತಿರುಗುವ ವೇಳೆಗೆ ಕಳ್ಳರು ಬೈಕ್ ಅನ್ನು ಕಳ್ಳತನ ಮಾಡಿದ ಘಟನೆ‌ಸಂಭವಿಸಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ. ಬೈಂದೂರು ನಿವಾಸಿ ಮುತ್ತಯ್ಯ ಆಚಾರಿ ಎಂಬವರು ಈಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇವರು ಮೇ 24ರಂದು ತನ್ನ ಮೋಟಾರ್ ಸೈಕಲ್ k.A 20EJ 3502 ರಲ್ಲಿ ಮಗ ದಿನೇಶ ನೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದಾರೆ. ಇವರೊಂದಿಗೆ ಇನ್ನೂ ಹಲವರು ಬೈಕ್ ಗಳಲ್ಲಿಯೇ ಬಂದಿದ್ದು ಎಲ್ಲರೂ ಬೈಕ್ ಗಳನ್ನು…

Read More

ಕೊಲ್ಯ ಕುಲಾಲ ಸಂಘ (ರಿ.) : 2024 ನೇ ವಾರ್ಷಿಕ ಕ್ರೀಡಾ ಕೂಟ

ಕೊಲ್ಯ ಕುಲಾಲ ಸಂಘ (ರಿ ) ಇದರ 2024 ನೇ ವಾರ್ಷಿಕ ಕ್ರೀಡಾ ಕೂಟ ಶ್ರೀ ರಾಮ ಕ್ರೀಡಾಂಗಣ ಕೊಲ್ಯ ದಲ್ಲಿ ನಡೆಯಿತು. ಕಾರ್ಯಕ್ರಮ ವನ್ನು ಉಳ್ಳಾಲ ಮುನ್ನೂರು ಪಂಚಾಯತ್ ಉಪಾಧ್ಯಕ್ಷರು ಶ್ರೀ ಮಹಾಬಲ ದೆಪ್ಪಲಿ ಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.. ಕ್ರೀಡಾಕೂಟ ವನ್ನು ಉದ್ಯಮಿ ಶ್ರೀ ಭರತ್ ರಾಜ್ ಮುಂಡೋಲಿ ಮಾಲಕರು ಭಾರತ್ ಕಾರ್ಪೋರೇಶನ್ ಅತಿಥಿ ಗಳಾಗಿ ಶ್ರೀ ವಿಶ್ವಥ್ ಕೊಲ್ಯ, ಕಾರ್ಯದರ್ಶಿ ಯೂತ್ ಇಂಟಕ್ ಮಂಗಳೂರು ಹಾಗೂ ಸಂಘದ ಅಧ್ಯಕ್ಷ ಭಾಸ್ಕರ್ ಕುತ್ತಾರ್, ಕ್ರೀಡಾ…

Read More

ಬೆಳ್ತಂಗಡಿ : ಮನೆಯ ಕೆರೆಗೆ ಜಾರಿ ಬಿದ್ದು ನವ ವಿವಾಹಿತ ಸಾವು

ಬೆಳ್ತಂಗಡಿ : ಕಳೆದ ಆರು ತಿಂಗಳ ಹಿಂದೆ ಮದುವೆಯಾಗಿದ್ದ ನವ ವಿವಾಹಿತ ಮನೆಯ ಕೆರೆಗೆ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಮೇ.25 ರಂದು ರಾತ್ರಿ ಬೆಳ್ತಂಗಡಿಯ ನಂದಿಬೆಟ್ಟದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಂದಿಬೆಟ್ಟದ ಹೊಸಹೊಕ್ಕು ನಿವಾಸಿ ಸದಾಶಿವ ಶೆಟ್ಟಿಯ ಒಬ್ಬನೇ ಮಗನಾಗಿರುವ ಕಳೆದ ಆರು ತಿಂಗಳ ಹಿಂದೆ ಮದುವೆಯಾಗಿದ್ದ ಕೃಷಿ ಕೆಲಸ ಮಾಡಿಕೊಂಡಿರುವ ಶೈಲೇಶ್ ಶೆಟ್ಟಿ(38) ಎಂಬವರು ತನ್ನ ಮನೆಯ ಕೆರೆಗೆ ಮೇ.25 ರಂದು ರಾತ್ರಿ ಸುಮಾರು 8:30 ಕ್ಕೆ ಜಾರಿ ಬಿದ್ದು ಕೆಸರಿನಲ್ಲಿ…

Read More

ಮಂಗಳೂರು: ಸೈಬರ್ ವಂಚಕರಿಂದ ʼರ್ಯಾಟ್‌ʼ ವಂಚನೆ – ಮೊಬೈಲ್ ಗೆ ಲಿಂಕ್ ಕಳುಹಿಸಿ ಹಣ ವರ್ಗಾವಣೆ

ಮಂಗಳೂರು: ಸೈಬರ್ ವಂಚಕರು ರಿಮೋಟ್ ಆಕ್ಸೆಸ್ ಟೂಲ್‌ಗಳನ್ನು ಬಳಸಿಕೊಂಡು ಎಪಿಕೆ ಫೈಲ್ ಅಥವಾ ಆಂಡ್ರಾಯ್ಡ್ ಆಪ್ ಸಿದ್ಧಪಡಿಸುತ್ತಾರೆ. ಬಳಿಕ ವಾಟ್ಸಾಪ್ ಮೆಸೇಜ್ ಮುಖಾಂತರ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗಳಿಗೆ ಕಳುಹಿಸಿ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ದೋಚುತ್ತಿದ್ದಾರೆ. ವಂಚಕರು ವಾಟ್ಸಾಪ್ ನಲ್ಲಿ ಕಳುಹಿಸಿದ ಎಪಿಕೆ ಫೈಲ್ ಮೆಸೇಜ್ ಅನ್ನು ಓಪನ್ ಮಾಡಿದಲ್ಲಿ ನಮ್ಮ ಮೊಬೈಲ್ ಗೆ ಬರುವ ಎಲ್ಲಾ ಮೆಸೇಜ್ ಗಳು ವಂಚಕರ ಮೊಬೈಲ್ ಗಳಿಗೆ ತಾನಾಗಿಯೇ ಹೋಗುತ್ತವೆ. ಆ ಮೂಲಕ ವಂಚಕರು ನಮ್ಮ…

Read More

ಸಿದ್ದರಾಮಯ್ಯ, ಡಿಕೆಶಿ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಂತೆ ಭಕ್ತರಿಂದ ಮೋದಿಗೆ ಜೈಕಾರ

ಬೆಳ್ತಂಗಡಿ : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಯವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ‌ ಆಗಮಿಸುತ್ತಿದ್ದಂತೆ ಭಕ್ತರಿಂದ ಮೋದಿ ಪರ ಘೋಷಣೆ, ಜೈಶ್ರ್ರೀರಾಂ ಘೋಷಣೆ ಕೇಳಿ ಬಂದಿತು. ಸಿಎಂ, ಡಿಸಿಎಂ ದೇವಸ್ಥಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ಭಕ್ತರ ದೇವರ ದರ್ಶನ ಬಂದ್ ಮಾಡಲಾಗಿತ್ತು. ಒಂದು ಗಂಟೆಗೂ ಅಧಿಕ ಸಮಯದಿಂದ ದೇವರ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಆದ್ದರಿಂದ ಸಾವಿರಾರು ಮಂದಿ ಭಕ್ತರು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತ್ತು‌. ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಸಿಎಂ, ಡಿಸಿಎಂ ಬಂದು ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಜೈಶ್ರೀರಾಂ,…

Read More

ಚರಂಡಿಗೆ ಆಟೋರಿಕ್ಷಾ ಬಿದ್ದು ಚಾಲಕ ಸಾವು- ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ದ ಎಫ್ಐಆರ್

ಮಂಗಳೂರು : ಮಂಗಳೂರು ರಾತ್ರಿ ಸುರಿದ ಮಳೆಗೆ ಕೊಟ್ಟಾರ ಬಳಿ ರಾಜಕಾಲುವೆಯಲ್ಲಿ ರಿಕ್ಷಾವೊಂದು ಕೊಚ್ಚಿ ಹೋಗಿ ಚಾಲಕ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಇದೀಗ ರಾಜಕಾಲುವೆ ಸರಿಯಾಗಿ ಕ್ಲಿನ್ ಮಾಡದೆ ನಿರ್ಲಕ್ಷ ತೋರಿಸಿರುವ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ದ ಎಫ್ಐಆರ್ ದಾಖಲಾಗಿದೆ. ನಗರದಲ್ಲಿ ಶುಕ್ರವಾರ ರಾತ್ರಿ ಇಡೀ ಧಾರಾಕಾರ ಮಳೆಯಾಗಿದ್ದು ಕೊಟ್ಟಾರ ಚೌಕಿಯಲ್ಲಿ ತಗ್ಗು ಪ್ರದೇಶದ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.‌ ಮಳೆ ನೀರು ಹರಿಯುವ ಕಾಲುವೆಯಲ್ಲಿ ರಿಕ್ಷಾವೊಂದು ಕೊಚ್ಚಿ ಹೋಗಿದ್ದು, ಚಾಲಕ ಕೊಟ್ಟಾರ…

Read More

“ಪತ್ತನಾಜೆ” ತುಳುನಾಡಿನ ಉತ್ಸವ, ಜಾತ್ರೆ, ನೇಮ, ಯಕ್ಷಗಾನಕ್ಕೆ ಸಾಂಪ್ರದಾಯಿಕ ತೆರೆ

ಮಂಗಳೂರು: ತುಳುವರು ಮೂಲತಃ ಕೃಷಿಕರು. ಆದ್ದರಿಂದ ತುಳುನಾಡಿನಲ್ಲಿ ಎಲ್ಲಾ ಆಚರಣೆ, ಆರಾಧನೆಗಳಲ್ಲಿ ಕೃಷಿ ಬದುಕು ಒಂದಿಲ್ಲೊಂದು ರೀತಿ ತಳುಕಿ ಹಾಕಿಕೊಂಡಿರುತ್ತದೆ. ಇದಕ್ಕೆ “ಪತ್ತನಾಜೆ”ಯೂ ಹೊರತಲ್ಲ. ಪತ್ತನಾಜೆ ಎಂದರೆ ಪ್ರಸ್ತುತ ಸಾಲಿನ ಜಾತ್ರೆ, ಅಂಕ, ಆಯನ, ನೇಮ, ಯಕ್ಷಗಾನಕ್ಕೆ ಸಾಂಪ್ರದಾಯಿಕ ತೆರೆಬೀಳುವ ದಿನವೆಂದೇ ನಂಬಿಕೆ ತುಳುವರಲ್ಲಿದೆ. ಇಂದಿಗೂ ಅದೇ ನಿಯಮ ಚಾಲ್ತಿಯಲ್ಲಿದೆ. ವೃಷಭ ಸಂಕ್ರಮಣ ಬಳಿಕದ ಹತ್ತನೇ ದಿನವನ್ನೇ ಪತ್ತನಾಜೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ಪತ್ತನಾಜೆ ಪ್ರತೀವರ್ಷ ಮೇ 24 ಅಥವಾ 25ರಂದು ಬರುತ್ತದೆ‌. ಇಂದಿನ ದಿನವೇ “ಪತ್ತನಾಜೆ”. ಕೃಷಿಕರಾದ…

Read More

ಮೇ 26 ರಂದು ಕುಲಾಲ ಸುಧಾರಕ ಸಂಘ (ರಿ.) ಬಂಟ್ವಾಳ ಇದರ ವಾರ್ಷಿಕೋತ್ಸವ

ಬಂಟ್ವಾಳ: ಕುಲಾಲ ಸುಧಾರಕ ಸಂಘ (ರಿ.) ಬಂಟ್ವಾಳ ಇದರ 44 ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕೋತ್ಸವವು ದಿನಾಂಕ ಮೇ 26 ರಂದು ಕುಲಾಲ ಸಮುದಾಯ ಭವನ ಪೊಸಳ್ಳಿ ಬಿ.ಸಿ ರೋಡು ಇಲ್ಲಿ ನಡೆಯಲಿದೆ. ಬೆಳ್ಳಗೆ 9 ಗಂಟೆಯಿಂದ 11 ಗಂಟೆಯ ವರೆಗೆ ಸ್ವಜಾತಿ ಬಾಂಧವರಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಸಂಜೆ 4 ಗಂಟೆಯಿಂದ ಕುಲಾಲ ಸಂಗೀತ ಸಂಜೆ, ಕುಸಾಲ್ದ ಗೊಂಚಿಲ್ ಹಾಸ್ಯ ನಾಟಕ, ಮತ್ತು ವಿವಿಧ ವಿನೋದಾವಳಿಗಳು ನಡೆಯಲಿದೆ.

Read More

ಮಂಗಳೂರು: ಮೇ 27 ರಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಮತದಾರರ ಸಂವಾದ ಕಾರ್ಯಕ್ರಮ

ಮಂಗಳೂರು: ಭಾರತೀಯ ಜನತಾ ಪಾರ್ಟಿಯ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಮತದಾರರ ಸಂವಾದ ಕಾರ್ಯಕ್ರಮವು ದಿನಾಂಕ ಮೇ 27 ರಂದು ಬೆಳ್ಳಗೆ 10 ಗಂಟೆಗೆ ಸುಧೀಂದ್ರ ಸಭಾಭವನ ಡೊಂಗರಕೇರಿ ಇಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಂಗಳೂರು: ನಾಗರಿಕರೇ ಗಮನಿಸಿ ನಾಳೆ (ಮೇ 25) ನಗರದಲ್ಲಿ ರಸ್ತೆ ಸಂಚಾರದಲ್ಲಿ ಬದಲಾವಣೆ

ಮಂಗಳೂರು : ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರ ಕುಟುಂಬಿಕರೊಬ್ಬರ ವಿವಾಹ ಮೇ 25ರಂದು ಎಂ.ಜಿ.ರಸ್ತೆಯ ಟಿಎಂಎ ಪೈ ಸಭಾಂಗಣದಲ್ಲಿ ನಡೆಯಲಿದೆ. ಈ ವಿವಾಹ ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಸಿಎಂ ಹಾಗೂ ಹಲವಾರು ಪ್ರಮುಖ ವಿವಿಐಪಿಗಳು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕವಾಗುವ ಸಾಧ್ಯತೆಯಿದೆ. ಆದ್ದರಿಂದ ಪಿವಿಎಸ್ ನಿಂದ ಲೇಡಿಹಿಲ್ ಸರ್ಕಲ್ ಕಡೆಗೆ ಹೋಗುವ ಎಂ.ಜಿ.ರಸ್ತೆಯಲ್ಲಿನ ಎಲ್ಲಾ ಮೀಡಿಯನ್‌ಗಳನ್ನು ಮುಚ್ಚಲಾಗುತ್ತದೆ. (ಬೆಸೆಂಟ್ ಜಂಕ್ಷನ್, ಕೋಡಿಯಾಲ್‌ಗುತ್ತು ಕ್ರಾಸ್, ಬಲ್ಲಾಳ್‌ಬಾಗ್ ಜಂಕ್ಷನ್, ನೆಹರೂ ಅವೆನ್ಯೂ ಜಂಕ್ಷನ್). ಆದ್ದರಿಂದ ವಾಹನ…

Read More