ಪುತ್ತೂರು: ಅಕ್ರಮ ಗೋಸಾಗಾಟ- ವಾಹನ ಬಿಟ್ಟು ಆರೋಪಿಗಳು ಪರಾರಿ..! 5 ಗೋವುಗಳ ರಕ್ಷಣೆ
ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ಸರ್ವೆ ಸಮೀಪದ ಗಡಿಪಿಲ ಎಂಬಲ್ಲಿ ಅಕ್ರಮ ಗೋಸಾಗಾಟ ನಡೆದಿದ್ದು ಗೋಕಳ್ಳರು ಅವರ ಗೋಸಾಗಾಟದ ವಾಹನ ಹಾಳಾದುದರಿಂದ ಗೋವುಗಳನ್ನು ರಸ್ತೆ ಬದಿಯಲ್ಲಿ ಬಿಟ್ಟು ಪರಾರಿಯಾದ ಶಂಕೆ ವ್ಯಕ್ತವಾಗಿದ್ದು ಸ್ಥಳದಲ್ಲಿ 5 ಗೋವುಗಳು ಪತ್ತೆಯಾಗಿವೆ. ತಕ್ಷಣ ಕಾರ್ಯಪ್ರವೃತರಾದ ಸ್ಥಳೀಯ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಕಾರ್ಯಕರ್ತರು ಮತ್ತು ಸ್ಥಳೀಯರು ಪುತ್ತೂರು ಪೋಲಿಸ್ ಇಲಾಖೆಯ ಸಿಬ್ಬಂದಿಗಳ ಜೋತೆ ಸೇರಿ ಗೋವುಗಳನ್ನು ಸುರಕ್ಷಿತವಾಗಿ ಪುತ್ತೂರು ನಗರ ಫೋಲಿಸ್ ಠಾಣೆಗೆ ಸಾಗಿಸಿ ರಕ್ಷಿಸಲಾಗಿದೆ. ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರ…

