
Read Time:1 Minute, 13 Second
ಮಂಗಳೂರು: ಮನಪಾ ನೂತನ ಮೇಯರ್ ಉಪಮೇಯರ್ ಆಯ್ಕೆ ನಿನ್ನೆಯಷ್ಟೇ ನಡೆದಿದೆ. ಆದರೆ ಮೇಯರ್, ಉಪಮೇಯರ್ ಚುನಾವಣೆ ನಡೆದ ಕೆಲವೇ ಗಂಟೆಗಳಲ್ಲಿ ಅವರ ಕಾರನ್ನು ವಾಪಸ್ ನೀಡಬೇಕಾಯಿತು. ಗುರುವಾರ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್ ಅವಿರೋಧವಾಗಿ ಆಯ್ಕೆಯಾದರೆ ಉಪಮೇಯರ್ ಆಗಿ ಭಾನುಮತಿ ಮಧ್ಯಾಹ್ನ 1.45ಕ್ಕೆ ಅಧಿಕಾರ ಸ್ವೀಕರಿಸಿದರು. ಆದರೆ ವಿಧಾನ ಪರಿಷತ್ ಚುನಾವಣೆಗೆ 3.45ಕ್ಕೆ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮೇಯರ್, ಉಪಮೇಯರ್ ಅವರಿಗೆ ನೀಡಲಾದ ಕಾರನ್ನು ತಕ್ಷಣ ವಾಪಾಸು ನೀಡಬೇಕಾಯಿತು. ನೂತನ ಮೇಯರ್, ಉಪಮೇಯರ್ ಅಧಿಕಾರ ಸ್ವೀಕರಿಸಿದ ಬಳಿಕ ಪಾಲಿಕೆ ಸಭಾಂಗಣದಲ್ಲಿ ಅಭಿನಂದನಾ ಸಭೆ ಮುಗಿಸಿ ಕಾರಿನಲ್ಲಿ ಮನೆಗೆ ತೆರಳಿದ್ದಾರೆ. ಆದರೆ ಅದಾದ ಕೆಲವೇ ಹೊತ್ತಿನಲ್ಲಿ ಕಾರು ವಾಪಾಸು ನೀಡಬೇಕಾಯಿತು. ಈ ಮೂಲಕ ಮಂಗಳೂರು ಮೇಯರ್ ಅವರಿಗೆ ಕೇವಲ ಅರ್ಧ ಗಂಟೆ ಮಾತ್ರ ಕಾರು ಉಪಯೋಗಿಸಲು ಅವಕಾಶ ದೊರಕಿದಂತಾಗಿದೆ.

