
Read Time:33 Second
ಮಂಗಳೂರು: ಕಾರು ಡಿವೈಡರ್ ಗೆ ಡಿಕ್ಕಿಯಾಗಿ ಮೋರಿಗೆ ಬಡಿದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಮಂಗಳೂರು ನಗರದ ಜಪ್ಪಿನಮೊಗರು ನಡುಮುಗೇರ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.


ಮೃತರನ್ನು ಕದ್ರಿ ನಿವಾಸಿ ಅಮನ್ ರಾವ್ ಹಾಗೂ ಎನ್ಎಸ್ಯುಐ ಮುಖಂಡ ಓಂ ಶ್ರೀ ಪೂಜಾರಿ ಎಂದು ಗುರುತಿಸಲಾಗಿದೆ.ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.