
Read Time:1 Minute, 6 Second
ಉಡುಪಿಯಿಂದ ಮಣಿಪಾಲಕ್ಕೆ ಅಡ್ಡಾದಿಡ್ಡಿಯಾಗಿ ಚಲಿಸಿದ ವಿದೇಶಿ ರಿಜಿಸ್ಟರ್ ಸಂಖ್ಯೆಯ ಕಾರೊಂದು ಸಿಂಡಿಕೇಟ್ ಸರ್ಕಲ್ ನಿಂದ ಐನಾಕ್ಸ್ ಕಡೆಗೆ ಬರುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದು ಸವಾರ ಗಾಯಗೊಂಡಿರುವ ಘಟನೆ ನಡೆದಿದೆ.


ವಾರಾಂತ್ಯದಲ್ಲಿ ಮಣಿಪಾಲ ಭಾಗದಲ್ಲಿ ಮಾದಕ ದ್ರವ್ಯ ಚಟುವಟಿಕೆ ನಡೆಯುತ್ತಿದ್ದು ಅಡ್ಡಾದಿಡ್ಡಿ ವಾಹನ ಚಾಲನೆ ಸಾಮಾನ್ಯವಾಗಿ ಬಿಟ್ಟಿದೆ. ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಫುಡ್ ಡೆಲಿವರಿ ಸಾಗಾಟ ಮಾಡುವ ಯುವಕನ ಬೈಕ್ ಗೆ ಕಾರು ಢಿಕ್ಕಿ ಹೊಡೆದಿದೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತನ ಚಿಕಿತ್ಸೆಗೂ ನೆರವು ನೀಡುವುದಾಗಿ ಕಾರಿನಲ್ಲಿದ್ದವರು ತಿಳಿಸಿದ್ದಾರೆ. ಮಣಿಪಾಲ ಠಾಣೆಯಲ್ಲಿ ಸಂಧಾನ ನಡೆಸಲಾಗಿದೆ.

