
Read Time:53 Second
ವಿಟ್ಲ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರೊಂದು ಬ್ರೇಕ್ ಫೇಲ್ ಆಗಿ ಪಲ್ಟಿಯಾದ ಘಟನೆ ಪೆರುವಾಯಿ ಗ್ರಾಮದ ಮುಚ್ಚಿರಪದವು ಎಂಬಲ್ಲಿ ನ.13ರ ಬುಧವಾರ ನಡೆದಿದೆ.


ಘಟನೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕನ ತಲೆಗೆ ಗಾಯವಾಗಿದೆ. ಹಲವು ಮಕ್ಕಳು ಕೂಡ ಗಾಯಗೊಂಡಿದ್ದಾರೆ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.
ಪೆರುವಾಯಿ ಮಿತ್ತಮೂಲೆ ಎಂಬಲ್ಲಿದ್ದ ಮಕ್ಕಳನ್ನು ವಿಟ್ಲದ ಶಾಲೆಯ ಬಸ್ಸಿಗೆ ಹತ್ತಿಸಲು ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಚಾಲಕ ಮುಳಿಯ ರಾಮಣ್ಣ ಅವರ ತಲೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

