
ಸೌತ್ ಕೆನರಾ ಚಿಟ್ ಫಂಡ್ ಅಸೋಸಿಯೇಷನ್ ಮಂಗಳೂರು ಇದರ ಮಾಲೀಕರ ವಿಶೇಷ ಸಭೆಯು ಇಂದು ನಗರದ ಕುಡ್ಲ ಹೋಟೆಲ್ ನ ಸಿಲ್ವರ್ ಸಭಾಂಗಣದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ನವಚೇತನ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ನ ಪಾಲುದಾರರು ಹಾಗೂ ಸೌತ್ ಕೆನರಾ ಚಿಟ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ರು ಶ್ರೀ ಲೋಕೇಶ್ ಶೆಟ್ಟಿ ವಹಿಸಿದ್ದರು.

ಹಿರಿಯ ಸಲಹೆಗಾರ ದ ಶ್ರೀ ಚಂದ್ರಹಾಸ ಶೆಟ್ಟಿ. ಜಿ.ಆರ್. ಶೆಟ್ಟಿ( ಮಕರ ಜ್ಯೋತಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ) ಹಾಗೂ ಶ್ರೀ ಸುರೇಶ್ ರೈ.( ಉಪಾಧ್ಯಕ್ಷರು) ಪ್ರಧಾನ ಕಾರ್ಯದರ್ಶಿ ರಂಜನ್ ಶೆಟ್ಟಿ. (ಕುಡ್ಲ ಚಿಟ್ಸ್ ) ಕೋಶಧಿಕಾರಿ ಶ್ರೀ ಸಂದೇಶ್ ಶೆಟ್ಟಿ ( ತುಳುನಾಡ್ ಚಿಟ್ಸ್).ಲಯನ್ ಅನಿಲ್ ದಾಸ್ (ಸುಗ್ಗಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಕಂಕನಾಡಿ ) ಶ್ರೀ ಕಿರಣ್ ರೈ. ಶ್ರೀ ಸಂದೇಶ್ (ಕುಡ್ಲ ಚಿಟ್ಸ್ ಪಂಪವೆಲ್) ಶ್ರೀ ಅರವಿಂದ್. ಶ್ರೀ ವರದ್ ರಾಜ್. (ಪಾವನಿ ಚಿಟ್ಸ್ ). ಶ್ರೀ ಹರೀಶ್ ಶೆಟ್ಟಿ. ಶ್ರೀ ಯಶವಂತ.ಪೂಜಾರಿ. ಶ್ರೀ ಜ್ಞಾನೇಶ್ ಆಳ್ವ. ಹರೀಶ್ ಆಳ್ವ. ಚರಣ್ ಆಳ್ವ (ತುಡರ್ ಚಿಟ್ಸ್). ಶ್ರೀ ದಿನೇಶ್ ರೈ ಕಲ್ಲಿಗೆ. ಶ್ರೀ ಶಿವಪ್ರಸಾದ್. ಶ್ರೀ ರಾಹುಲ್ ಶೆಟ್ಟಿ. (ಬೊಳ್ಳಿ ಚಿಟ್ಸ್ ) ಶ್ರೀ ಮೋಹನ್ ದಾಸ್ ಪ್ರಭು (ಸಿಂಚನ ಚಿಟ್ಸ್ ).ಶ್ರೀ ವಸಂತ್ ಶೆಟ್ಟಿ. ( ಜಯಂಬಿಕಾ ಚಿಟ್ಸ್) ಶ್ರೀ ರಾಜೇಂದ್ರ ರೈ. ಶ್ರೀ ಕಿರಣ್ ಕುಮಾರ್ (ಸಾಯಿ ತೀರ್ಥ ಚಿಟ್ಸ್) ಶ್ರೀ ನಿತಿನ್ ಅತ್ತಾವರ.(ನವ ಚೇತನ ಚಿಟ್ಸ್) ಮುಂತಾದ ನೋಂದಾಯಿತ ಚಿಟ್ಸ್ ಸಂಸ್ಥೆ ಯ ಹೆಚ್ಚಿನ ಪಾಲುದಾರರು ಉಪಸ್ಥಿತರಿದ್ದರು.


ಮುಖ್ಯವಾಗಿ ಇಂದಿನ ಹಣಕಾಸು ವ್ಯವಹಾರದಲ್ಲಿ ಸಾರ್ವಜನಿಕರಿಗೆ ಭದ್ರತೆ ಹಾಗೂ ಜಿ ಎಸ್ ಟಿ. ಮತ್ತು ಡಿವಿಡೆಂಟ್ ಮುಂತಾದ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.. ಸಾರ್ವಜನಿಕರಿಗೆ ಇದರಿಂದಾಗುವ ತೊಂದರೆಗಳ ಬಗ್ಗೆ ವಿಶೇಷವಾದ ಗಮನವನ್ನು ಹರಿಸಲಾಯಿತು.

ಪಾರದರ್ಶಕ ವ್ಯವಹಾರ ನಡೆಸುವ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವ ಹಲವಾರು ಉಪಯುಕ್ತ ಸಲಹೆಗಳನ್ನು ಪಡೆಯಲಾಯಿತು.
ಮುಂದಿನ ದಿನಗಳಲ್ಲಿ ಹಲವಾರು ಸಮಾಜಮುಖಿ ಕೆಲಸಗಳನ್ನು ಕಾರ್ಯರೂಪಕ್ಕೆ ತರಲು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಯಿತು.