
Read Time:1 Minute, 2 Second
ಉಡುಪಿ: ಕರಾವಳಿ ಅಂದ್ರೆ ಇಲ್ಲಿ ಜನರು ದೇವರನ್ನು ನಂಬುವಷ್ಟೇ ದೈವವನ್ನು ಕೂಡಾ ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಾರೆ. ದೈವಾರಾಧನೆಗೆ ಹೆಸರಾದ ನಮ್ಮ ಈ ಪುಣ್ಯ ಸ್ಥಳದಲ್ಲೂ ಅನೇಕ ದುಷ್ಕೃತ್ಯಗಳು ನಡೆಯುತ್ತಿದೆ. ಇದೀಗ ಉಡುಪಿಯ ಮಲ್ಪೆಯಲ್ಲಿ ದೈವಸ್ಥಾನದ ಡಬ್ಬಿಯನ್ನೇ ಒಡೆದು ಕಳ್ಳತನ ಮಾಡಿ ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ನಡೆದಿದೆ.


ಇಲ್ಲಿನ ಕೊಡವೂರು ಪಾಳೆಕಟ್ಟೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ದೇವರಬೆಟ್ಟು ಆವರಣ ಗೋಡೆಯ ಹೊರಭಾಗದಲ್ಲಿ ಇಟ್ಟಿದ್ದಂತಹ ಕಾಣಿಕೆ ಡಬ್ಬಿ ಒಡೆದು ಹಣ ದೋಚಿ ಕಿಡಿಗೇಡಿಗಳೂ ಕೂಡಾ ಎಸ್ಕೇಪ್ ಆಗಿದ್ದಾರೆ.
ಕಾಣಿಕೆ ಡಬ್ಬಿಯಲ್ಲಿದ್ದ ಅಂದಾಜು ಸುಮಾರು ಹದಿನೈದು ಸಾವಿರ ಹಣ ಕಳವು ಮಾಡಲಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

