
Read Time:1 Minute, 8 Second
ಬೆಳ್ತಂಗಡಿ: ಬೆಳಗ್ಗೆ ಧನು ಪೂಜೆಗೆಂದು ಹೋದ 9 ನೇ ತರಗತಿಯ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಘಟನೆ ಒಡಿಲ್ನಾಳ ಗ್ರಾಮದ ಸಂಭೋಳ್ಯದಲ್ಲಿ ನಡೆದಿದೆ. ಸುಮಂತ್ (16) ಎಂಬವನೇ ನಾಪತ್ತೆಯಾದ ವಿದ್ಯಾರ್ಥಿ.



ಪ್ರತಿದಿನವೂ ಗೆಳೆಯರ ಜೊತೆಗೆ ಹೋಗುತ್ತಿದ್ದ ಬಾಲಕ ಇಂದು ಬಂದಿಲ್ಲ ಎನ್ನುವ ಮಾಹಿತಿ ಸ್ನೇಹಿತರಿಂದ ದೊರೆತಿದ್ದು, ಈ ವೇಳೆ ನಾಪತ್ತೆಯಾಗಿರುವ ವಿಚಾರ ತಿಳಿದಿದೆ.
ತೋಟದ ಬದಿಯ ಪ್ರದೇಶದಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು, ಚಿರತೆಗಳು ಓಡಾಡುತ್ತಿವೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಬಾಲಕ ನಾಪತ್ತೆಗೆ ಸಂಬಂಧಿಸಿದ ಹಾಗೆ ಅನುಮಾನ ವ್ಯಕ್ತವಾಗಿದೆ.


ಬೆಳ್ತಂಗಡಿ ಪೊಲೀಸರು, ಅರಣ್ಯ ಇಲಾಖೆಯ ಅಧಿಕಾರಿಗಳು, ಅಗ್ನಿಶಾಮಕ ದಳ ನಾಪತ್ತೆಯಾದ ಬಾಲಕನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿವೆ ಎಂದು ತಿಳಿದು ಬಂದಿದೆ.


