ಶ್ರೀ ಸಿಗಂದೂರು ಚೌಡೇಶ್ವರಿಯ ಆಶೀರ್ವಾದದೊಂದಿಗೆ ಶುರುವಾಗ್ತಿದೆ “ಬೊಂಬಾಟ್ ಭೋಜನ ಸೀಸನ್ 6” ಇದೇ ಸೋಮವಾರದಿಂದ ಮಧ್ಯಾಹ್ನ 12 ಗಂಟೆಗೆ..!

0 0
Read Time:4 Minute, 24 Second

ಕನ್ನಡ ಕಿರುತೆರೆ ಇತಿಹಾಸದಲ್ಲಿ ದಾಖಲೆ ಬರೆದ ಅಡುಗೆ ಶೋ ಅಂದ್ರೆ ಅದು ಸ್ಟಾರ್ ಸುವರ್ಣ ವಾಹಿನಿಯ ‘ಬೊಂಬಾಟ್ ಭೋಜನ’. 1500ಕ್ಕೂ ಹೆಚ್ಚು ಸಂಚಿಕೆಗಳನ್ನು ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿರುವ ಈ ಶೋ ಈಗಾಗಲೇ 5 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೀಗ ಇನ್ನಷ್ಟು ಹೊಸತನವನ್ನೊಳಗೊಂಡು 6ನೇ ಆವೃತ್ತಿಯೊಂದಿಗೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಇನ್ನು ಈ ಬಾರಿ ‘ಬೊಂಬಾಟ್ ಭೋಜನ ಸೀಸನ್ 6’ ರ ಪ್ರಮುಖ ಆಕರ್ಷಣೆಯಂದ್ರೆ “ಜನರಿಂದ, ಜನರಿಗಾಗಿ, ಜನರಿಗೋಸ್ಕರ” ಅನ್ನೋ ಟ್ಯಾಗ್ ಲೈನ್. ಈ ಸೀಸನ್ ನ ಪ್ರತಿಯೊಂದು ಸೆಗ್ಮೆಂಟ್ ನಲ್ಲೂ ಜನರಿರ್ತಾರೆ, ಅಭಿಮಾನಿ ದೇವರುಗಳಿರ್ತಾರೆ. ಒಟ್ಟಿನಲ್ಲಿ ಈ ಸೀಸನ್ ಜನರಿಗೋಸ್ಕರ ಅರ್ಪಣೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯ ಆಶೀರ್ವಾದದೊಂದಿಗೆ ಮೊದಲ ಸಂಚಿಕೆ ಅಲ್ಲಿಂದಲೇ ಆರಂಭವಾಗಲಿದೆ.

ಜೊತೆಗೆ ಈ ಸೀಸನ್ ಅಲ್ಲಿ ಏನೆಲ್ಲಾ ಇರುತ್ತೆ ಎಂದು ಹೇಳೋದಾದ್ರೆ

  1. ವಿಶೇಷ ಭೋಜನ : ಸಿಹಿ ಕಹಿ ಚಂದ್ರು ಅವರು ರುಚಿ-ರುಚಿಯಾದ ಅಡುಗೆಯನ್ನು ತಿಳಿಸುತ್ತಾರೆ. ಜೊತೆಗೆ ಪತ್ರ ಹಾಗು ಕರೆಯ ಮೂಲಕ ಬಂದಿರುವ ಅಭಿಮಾನಿಗಳ ಅಡುಗೆ ಕೋರಿಕೆಯನ್ನು ಈಡೇರಿಸಲಾಗುತ್ತದೆ.
  2. ಆರೋಗ್ಯ ಭೋಜನ : ಡಾ|| ಗೌರಿ ಸುಬ್ರಮಣ್ಯ ರವರು ಜನರಿಗೆ ಉಪಯುಕ್ತವಾದ ಮನೆಮದ್ದನ್ನು ಇಲ್ಲಿ ತಿಳಿಸುತ್ತಾರೆ.
  3. ಸ್ಪೆಷಲ್ ಭೋಜನ : ಬೇರೆ ಬೇರೆ ಜಿಲ್ಲೆಗಳಲ್ಲಿರುವ ಲೇಡೀಸ್ ಕ್ಲಬ್ ಗಳಿಗೆ ಹೋಗಿ ಅಲ್ಲಿನ ಜನರೊಂದಿಗೆ ಬೆರೆತು, ಅಡುಗೆ ಮಾಂತ್ರಿಕ ಸಿಹಿ ಕಹಿ ಚಂದ್ರು ರವರು ವಿಭಿನ್ನ ಅಡುಗೆ ಡಿಶ್ ಗಳನ್ನು ತಯಾರಿಸುತ್ತಾರೆ.
  4. ಹಿತ ಭೋಜನ : ಜನಸಾಮಾನ್ಯರು / ಸೆಲೆಬ್ರಿಟಿಸ್ ಗಳು ಬಂದು ವಿವಿಧ ರೀತಿಯ ಕೈರುಚಿಯನ್ನು ತಿಳಿಸುವುದು.
  5. ಭೂರಿ ಭೋಜನ : ಕರ್ನಾಟಕದಾದ್ಯಂತ ಚಲಿಸಿ, ಹೋಟೆಲ್ ಗಳಿಗೆ ಧಾವಿಸಿ ಅಲ್ಲಿನ ಜನಪ್ರಿಯ ತಿನಿಸುಗಳನ್ನು ಸವಿದು ಜನರಿಗೆ ತಿಳಿಸುವುದು. ಜೊತೆಗೆ ಅಲ್ಲಿನ ಜನರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುತ್ತದೆ.
  6. ಸಹ ಭೋಜನ : ಒಬ್ಬರ ಮನೆಗೆ ಸರ್ಪ್ರೈಸ್ ಎಂಟ್ರಿ ಕೊಟ್ಟು, ಅವರು ತಯಾರಿಸಿರುವ ಅಡುಗೆಯ ರುಚಿಯನ್ನು ಸವಿದು, ಕೈತುತ್ತನ್ನು ನೀಡಿ ಅವರೊಂದಿಗೆ ಮಾತುಕತೆ ನಡೆಸುವುದು. ಜೊತೆಗೆ ಸ್ಥಳದಲ್ಲೇ ಫೋಟೋ ತೆಗೆದು ಸರ್ಟಿಫಿಕೇಟ್ ನೊಂದಿಗೆ ನೀಡಲಾಗುವುದು.
  7. ಗೃಹ ಭೋಜನ : ಸಿಹಿ ಕಹಿ ಚಂದ್ರು ಅವರು ಜಿಲ್ಲೆಯಾದ್ಯಂತ ಸಂಚರಿಸುತ್ತಾ, ವೀಕ್ಷಕರ ಮನೆಗಳಿಗೆ ಹೋಗಿ ತಮ್ಮ ಕೈಯಾರೆ ಮಾಡಿದ ರುಚಿಯಾದ ಅಡುಗೆ ಉಣಬಡಿಸೋದು ಹಾಗು ತಾವು ತೆರಳಿದ ಮನೆಯಲ್ಲಿ ದೇವಿ ಸದಾ ನೆಲೆಸಲೆಂದು ಮನೆ ಮಂದಿಗೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯದಿಂದ ದೈವಾನುಗ್ರಹಗೊಂಡ ದೇವಿಯ ವಿಗ್ರಹವನ್ನು ಉಡುಗೊರೆಯಾಗಿ ನೀಡಲಿದ್ದಾರೆ.
  8. ಬಾಲ ಭೋಜನ : ಇದು ಪ್ರತೀ ಶುಕ್ರವಾರದಂದು ಮಕ್ಕಳಿಗಾಗಿ ಮಾಡಿರೋ ಹೊಸ ವಿಭಾಗ. ಮಕ್ಕಳ ಜೊತೆ ಪೋಷಕರು ಭಾಗಿಯಾಗಿ ರುಚಿ-ರುಚಿಯಾದ ಅಡುಗೆ ಹೇಳಿ ಕೊಡಲಾಗುತ್ತದೆ.
    ಸಾಮಾನ್ಯ ಜನರಿಗೆ ಸೆಲೆಬ್ರಿಟಿ ಅನ್ನೋ ಅನುಭವ ಕೊಡಲು ‘ಸಿಹಿ-ಸಹಿ’ ಎಂಬ ಬೋರ್ಡ್ ಇರಿಸಲಾಗಿದೆ. ಇದೆಲ್ಲದರ ಜೊತೆಗೆ ಎಂದಿನಂತೆ ಪ್ರತೀ ಶನಿವಾರ ಮಧ್ಯಾಹ್ನ 12 ಗಂಟೆಗೆ ಮಾಂಸ ಪ್ರಿಯರಿಗಾಗಿ ಆದರ್ಶ್ ತಟಪತಿ ಸಾರಥ್ಯದ ‘ಬೊಂಬಾಟ್ ಬಾಡೂಟ’ ಕಾರ್ಯಕ್ರಮ ಪ್ರಸಾರವಾಗಲಿದೆ.

ನಳ ಮಹಾರಾಜ, ಅಡುಗೆ ಮಾಂತ್ರಿಕ ಸಿಹಿ ಕಹಿ ಚಂದ್ರು ರವರ ನೇತೃತ್ವದಲ್ಲಿ ಬರ್ತಿದೆ ‘ಬೊಂಬಾಟ್ ಭೋಜನ ಸೀಸನ್ 6’ ಇದೇ ಅಕ್ಟೋಬರ್ 27 ರಿಂದ ಮಧ್ಯಾಹ್ನ 12 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *