
Read Time:1 Minute, 6 Second
ಧರ್ಮಸ್ಥಳ: ಬೈಕ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಸವಾರ ಗಂಭೀರ ಗಾಯಗೊಂಡ ಘಟನೆ ಕನ್ಯಾಡಿ ಸಮೀಪ ನಡೆದಿದೆ.


ಗಂಭೀರ ಗಾಯಗೊಂಡ ಬೈಕ್ ಸವಾರನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಹಾಸನದಿಂದ ಉಜಿರೆಗೆ ಪ್ರಯಾಣ ಮಾಡುತ್ತಿದ್ದ ಪಲ್ಸರ್ ಬೈಕ್ ಸವಾರ ಮಂಜುನಾಥ್ ಹಾಗೂ ಉಜಿರೆ ಕಡೆಯಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ವಿಜಯಾನಂದ ಬಸ್ ನಡುವೆ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಬೈಕ್ ಸಂಪೂರ್ಣ ಹಾನಿಯಾಗಿದ್ದು, ಜೊತೆಗೆ ಬೈಕ್ ಸವಾರನಿಗೂ ಗಂಭೀರ ಗಾಯವಾಗಿದೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಉಜಿರೆ ಧನ್ವಿ ಆಂಬುಲೆನ್ಸ್ ಸಹಾಯದ ಮೂಲಕ ಪ್ರಥಮ ಚಿಕಿತ್ಸೆಗೆಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಹಾಸನಕ್ಕೆ ಜನಪ್ರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

