ಮಂಗಳೂರು: ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

0 0
Read Time:4 Minute, 55 Second

ಮಂಗಳೂರು : ಪಕ್ಷಿಕೆರೆಯಲ್ಲಿ ಪತ್ನಿ ಹಾಗೂ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಭಟ್ ಹಾಗೂ ಅಕ್ಕ ಕಣ್ಮಣಿ ರಾವ್ ಅವರನ್ನು ಈಗಾಗಲೇ ಪೊಲೀಸರು ಬಂದಿಸಿದ್ದಾರೆ.

ಈ ಇಬ್ಬರ ವಿರುದ್ಧ ಕಾರ್ತಿಕ್ ಪತ್ನಿಯ ತಾಯಿ ಸಾವಿತ್ರಿ ನೀಡಿದ ದೂರಿನಂತೆ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಮುಲ್ಕಿ ಪೊಲೀಸರು ಬಂಧಿಸಿ ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭ ತಾಯಿ ಮತ್ತು ಮಗಳು ತಲೆ ತಿರುಗಿ ಬಿದ್ದಿದ್ದು, ಮೂಡಬಿದ್ರೆ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪೋಲಿಸರ ಮಾಹಿತಿ ಪ್ರಕಾರ ಮೃತ ಕಾರ್ತಿಕ್ ನಾಲ್ಕು ಪುಟಗಳ ಡೆತ್ ನೋಟ್ ನಲ್ಲಿ ತಾಯಿ ಶ್ಯಾಮಲಾ ಹಾಗೂ ಅಕ್ಕ ಕಣ್ಮಣಿಯನ್ನು ಪ್ರಸ್ತಾಪ ಮಾಡಿ ತಮಗೆ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ.

ಅನ್‌ಲೈನ್ ಆಟದ ಗೀಳು ಹೊಂದಿದ ಕಾರ್ತಿಕ್ ಸಾಕಷ್ಟು ಹಣ ಕಳೆದುಕೊಂಡಿರಬೇಕು ಈ ಕಾರಣದಿಂದ ಹಲವರ ಬಳಿ ಸಾಲ ಪಡೆದಿದ್ದು ಹಿಂದಿರುಗಿಸಲಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದು, ಸ್ಥಳೀಯ ವ್ಯಕ್ತಿಯೋರ್ವರು ಕಾರ್ತಿಕ್ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಚಿನ್ನದ ಒಡವೆ ಇಟ್ಟಿದ್ದು, ಈ ಮೂಲಕ 3 ಲಕ್ಷ ರೂ ಸಾಲ ಪಡೆದಿದ್ದರು. ಇದೀಗ ಅದನ್ನು ಪರಿಶೀಲನೆ ಮಾಡುವಾದ ಆ ಚಿನ್ನದ ಒಡವೆ, ಅಡವಿಟ್ಟು ನಾಲ್ಕು ತಿಂಗಳಲ್ಲೇ ಅಲ್ಲಿಂದ ನಾಪತ್ತೆಯಾಗಿದೆ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ

ಕಾರ್ತಿಕ್ ಭಟ್ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಅವ್ಯವಹಾರ ನಡೆಸಿದ ಕಾರಣ ಕೆಲಸ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಕಾರ್ತಿಕ್ ಪತ್ನಿ ಪ್ರಿಯಾಂಕ, ಪ್ರತೀ ದಿನ ಸುರತ್ಕಲ್ ಗೆ ಜಿಮ್ ಗೆ ಹೋಗುತ್ತಿದ್ದು, ನಂತರ ಮನೆಯ ಕೋಣೆಯಲ್ಲಿ ಇರುತ್ತಿದ್ದಳು ಇಡೀ ದಿನ ಮನೆಯ ಕೊಣೆಯಲ್ಲಿ ಏನು ಮಾಡುತ್ತಿದ್ದಳು ಎಂಬುದೇ ಪ್ರಶ್ನೆಯಾಗಿದೆ,

ಮನೆಯಲ್ಲಿ ಅವರಿದ್ದ ಕೋಣೆಯಲ್ಲಿ ಪತ್ತೆಯಾದ 2 ಚೂರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೋಲೀಸ್‌ ಮೂಲಗಳು ತಿಳಿಸಿವೆ. ಕಾರ್ತಿಕ ಮತ್ತು ಪ್ರಿಯಾಂಕ ಮೊಬೈಲ್ ಗಳು ಶೌಚಾಲಯದ ಕೊಮೊಡ್ ನಲ್ಲಿ ಸಿಕ್ಕಿದ್ದು ಈ ರೀತಿ ಯಾಕೆ ಮಾಡಿದ್ದಾರೆ ಎಂಬುವುದು ಇನಷ್ಟು ಸಂಶಯಕ್ಕೆ ಎಡೆ ಮಾಡಿದೆ. ಸದ್ಯ ಮುಲ್ಕಿ ಪೊಲೀಸರು ಇನ್ನಷ್ಟು ಮಾಹಿತಿಗಾಗಿ ತನಿಖೆ ನಡೆಸುತ್ತಿದ್ದಾರೆ.

ಕೆಮ್ರಾಲ್‌ ಗ್ರಾಮ ಪಂಚಾಯತ್‌ನ ಹತ್ತಿರದ ವನಜಾಕ್ಷಿ ಫ್ಲ್ಯಾಟ್‌ನಲ್ಲಿ ಜನಾರ್ದನ-ಶ್ಯಾಮಲಾ ಭಟ್‌ ಹಾಗೂ ಪುತ್ರ ಕಾರ್ತಿಕ್‌ ಕುಟುಂಬ ವಾಸವಿದ್ದರು. ಸೋಮವಾರ ಪೋಲೀಸ್‌ ಇಲಾಖೆ ತನಿಖೆಯ ದೃಷ್ಟಿಯಲ್ಲಿ 2-3 ದಿನ ಫ್ಲ್ಯಾಟ್‌ನಲ್ಲಿ ತಾವು ವಾಸ ಮಾಡುವಂತಿಲ್ಲ ಎಂದು ಕಾರ್ತಿಕ್‌ ಹೆತ್ತವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಒಂದೇ ಮನೆಯ ಬೇರೆ ಬೇರೆ ಕೋಣೆಯಲ್ಲಿ ಕಾರ್ತಿಕ್‌ ಹಾಗೂ ಅವರ ಹೆತ್ತವರು ವಾಸ ಮಾಡಿಕೊಂಡಿದ್ದು, ಮನೆಯಲ್ಲಿದ್ದ ಕೊಣೆಯಲ್ಲಿ ನೇತು ಹಾಕಲಾಗಿದ್ದ ಗ್ರೂಪ್‌ ಫೋಟೋದಲ್ಲಿ ಕಾರ್ತಿಕ್‌ ಭಟ್‌, ಪತ್ನಿ ಹಾಗೂ ಮಗುವಿನ ಫೋಟೋಗೆ ಮಸಿ ಬಳಿಯಲಾಗಿರುವುದು ಪತ್ತೆಯಾಗಿದೆ. ಕುಟುಂಬದ ಒಳಗಿನ ಮನಸ್ತಾಪ ಎಷ್ಟು ತೀವ್ರವಾಗಿತ್ತೆಂದು ಇದರಿಂದ ತಿಳಿದು ಬರುತ್ತದೆ. ಮರಣೋತ್ತರ ಪರೀಕ್ಷೆಗಳು ನಡೆದಿದ್ದು, ವರದಿ ಇನ್ನಷ್ಟೇ ಪೊಲೀಸರ ಕೈ ಸೇರಬೇಕಿದೆ. ಕಾರ್ತಿಕ್‌ ಅವರ ಪತ್ನಿ ಮತ್ತು ಮಗು ಮೃತದೇಹ ತಮ್ಮದೇ ಮನೆಯ ಕೋಣೆಯಲ್ಲಿ ದಿನವಿಡೀ ಬಿದ್ದುಕೊಂಡಿದ್ದರೂ, ಮನೆಯಲ್ಲಿದ್ದ ಕಾರ್ತಿಕ್‌ ಅವರ ಹೆತ್ತವರಿಗೆ ತಿಳಿದಿಲ್ಲವೆಂದರೆ ವಿಶೇಷ.

ಕಾರ್ತಿಕ್‌ ಭಟ್‌ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ನಡೆಸಿದ ಘಟನೆಯ ಬಳಿಕ ದ್ವಿಚಕ್ರ ವಾಹನವನ್ನು ಕಲ್ಲಾಪು ದೇವಸ್ಥಾನ ಬಳಿ ಇಟ್ಟು ರೈಲು ಹಳಿಯ ಮೇಲೆ ಕೈಗೆ ಬಟ್ಟೆ ಸುತ್ತಿಕೊಂಡು ಹೋಗುವ ದೃಶ್ಯ ಅಲ್ಲಿನ ಪರಿಸರದ ಸಿಸಿ ಕೆಮರಾದಲ್ಲಿ ದಾಖಲಾಗಿದೆ ಎನ್ನಲಾಗಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *