
Read Time:1 Minute, 15 Second
ಆಶ್ರಫ್ ಕಲಾಯಿ ಕೊಲೆ ಪ್ರಕರಣದ ಆರೋಪದಲ್ಲಿ ಬಂಧಿತನಾಗಿರುವ ಹಿಂದೂಪರ ಸಂಘಟನೆ ಮುಖಂಡ ಭರತ್ ಕುಮ್ದೇಲು ಅವರ ತಂದೆ ಸೇಸಪ್ಪ ಬೆಳ್ಳಾಡ (75) ಅವರು ನಿಧನರಾಗಿದ್ದಾರೆ.


ಕಳೆದ ಮೂರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಧ್ಯಾಹ್ನದ ವೇಳೆಗೆ ಇಹಲೋಕ ತ್ಯಜಿಸಿದರು. ಮಂಗಳೂರಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಗ ಭರತ್ ಕುಮ್ದೇಲು ಅವರನ್ನು ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪೊಲೀಸ್ ಭದ್ರತೆಯಲ್ಲಿ ಕರೆ ತರಲಾಯಿತು.
ನ್ಯಾಯಾಲಯವು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಅನುಮತಿ ನೀಡಿತ್ತು. ಅದರಂತೆ, ಭರತ್ ಕುಮ್ಮೆಲು ಅವರು ಸಂಜೆ 5:20ರ ಸುಮಾರಿಗೆ ಬಿಗಿ ಪೊಲೀಸ್ ಭದ್ರತೆ ಮತ್ತು ಬೆಂಗಾವಲಿನಲ್ಲಿ ಮನೆಗೆ ಆಗಮಿಸಿ ಬಳಿಕ ಬೆಂಜನಪದವು ಸ್ಮಶಾನದಲ್ಲಿ ನಡೆದ ತಂದೆಯ ಅಂತ್ಯಕ್ರಿಯೆಯ ವಿಧಿವಿಧಾನಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಯಿತು.


ರಾತ್ರಿ 8:45ರ ಸುಮಾರಿಗೆ ಪೊಲೀಸ್ ಬೆಂಗಾವಲಿನಲ್ಲಿ ಮತ್ತೆ ನ್ಯಾಯಾಲಯಕ್ಕೆ ಕರೆ ತರಲಾಯಿತು.
