ಬಂಟ್ವಾಳ: ದಿಗಂತ್ ಪತ್ತೆಗಾಗಿ ಪ್ರತಿಭಟನೆ ನಡೆಸಿದ್ದ ಹಿಂದೂ ಮುಖಂಡ ಭರತ್ ಕುಮ್ಡೇಲ್​ ಗೆ ಜಾಲತಾಣದಲ್ಲಿ ಜೀವ ಬೇದರಿಕೆ

0 0
Read Time:2 Minute, 20 Second

ಬಂಟ್ವಾಳ: ನಾಪತ್ತೆಯಾಗಿದ್ದ ಪಿಯುಸಿ ವಿಧ್ಯಾರ್ಥಿ ದಿಗಂತ್ ಪತ್ತೆಗಾಗಿ ಪ್ರತಿಭಟನೆ ನಡೆಸಿದ್ದ ಹಿಂದೂ ಮುಖಂಡರಿಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಜೀವ ಬೇದರಿಕೆ ಬರಲಾರಂಭಿಸಿದೆ. ಭಜರಂಗದಳ ಮುಖಂಡ ಭರತ್ ಕುಮ್ಡೇಲ್​ ಅವರಿಗೆ ಸಾಮಾಜಿಕ ತಾಣಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. BEARY_ROYAL_NAWAB, ಬ್ಯಾರಿ ಟ್ರೋಲರ್, ಮಂಗಳೂರು ಕಿಂಗ್ ಎಂಬ ಹೆಸರಿನ ಪೇಜ್​ಗಳ ಮುಖಾಂತರ ಕೊಲೆ ಬೆದರಿಕೆ ಹಾಕಲಾಗಿದೆ.

ದಿಗಂತ್ ಪತ್ತೆಗಾಗಿ ಮಾರ್ಚ್​ 1ರಂದು ಭಜರಂಗದಳ ಮುಖಂಡ ಭರತ್ ನೇತೃತ್ವದಲ್ಲಿ ಫರಂಗೀಪೇಟೆ ಬಂದ್ ನಡೆಸಲಾಗಿತ್ತು. ದಿಗಂತ್ ನಾಪತ್ತೆ ಹಿಂದೆ ಅನ್ಯಮತೀಯರ ಹಾಗೂ ಗಾಂಜಾ ಗ್ಯಾಂಗ್ ಕೈವಾಡ ಎಂದು ಪ್ರತಿಭಟನೆ ವೇಳೆ ಭರತ್ ಕುಮ್ಡೇಲು ಆರೋಪಿಸಿದ್ದರು.

ಇದೀಗ, ವಿದ್ಯಾರ್ಥಿ ದಿಗಂತ್ ಪತ್ತೆಯಾದ ಬೆನ್ನಲ್ಲೇ ಸಾಮಾಜಿ ಜಾಲತಾಣದಲ್ಲಿ ಕಿಡಿಗೇಡಿಗಳು ಭರತ್ ಕುಮ್ಡೇಲುಗೆ ಬೆದರಿಕೆ ಹಾಕಿದ್ದಾರೆ. “ಭರತ್‌ ಕುಮ್ಮೇಲು ರಕ್ತ ಈ ಭೂಮಿಗೆ ಹರಿಸದೆ ನಮಗೆ ಸಮಾಧಾನವಿಲ್ಲ. ಶಾಂತಿಯುತವಾದ ಪರಂಗಿಪೇಟೆಯಲ್ಲಿ ಕೋಮುಗಲಭೆ ನಡೆಸಲು ಸಂಘ ಪರಿವಾರದ ಅಜಂಡವಿತ್ತು. ಅದು ನಡೆಯಲಿಲ್ಲ, ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ಕೋಮು ಬಣ್ಣ ಬಳಿಯಲು ನೋಡಿದರು. ಆದರೆ, ಪೊಲೀಸ್‌ ಇಲಾಖೆಯ ಕಠಿಣ ಶ್ರಮದಿಂದ ಚಾನ್ಸ್ ಸಿಕ್ಕಿಲ್ಲ. ದಿಗಂತ್ ಪತ್ತೆಹಚ್ಚಿದ ಪೊಲೀಸ್‌ ಇಲಾಖೆಗೆ ಅಭಿನಂದನೆಗಳು. ದಿಗಂತ್ ಅಪರಣ ಪ್ರಕರಣವನ್ನು ಭರತ್‌ ಕುಮ್ಮೇಲು ಮುಸಲ್ಮಾನರ ತಲೆಗೆ ಕಟ್ಟುವ ಹುನ್ನಾರವಿತ್ತು.” “ಇವನು ಇನ್ನು ಎಲ್ಲಿಯಾದರೂ ಮುಸಲ್ಮಾನರ ಹೆಸರು ಎತ್ತಿದರೆ ಅದೇ ಪ್ರತಿಭಟನೆಗೆ ದಾಳಿ ಮಾಡುತ್ತೇವೆ. ಮತ್ತೆ ಇಲ್ಲಿ ಕೋಮು ಗಲಭೆ ಉಂಟಾದರೆ ನಾವು ಜವಾಬ್ದಾರರಲ್ಲ ಎಚ್ಚರಿಕೆ, ಇವನ ಬಗ್ಗೆ ಕ್ರಮ ತೆಗಿದುಕೊಳ್ಳಿ. ನಮ್ಮ ಸಹೋದರ ಶಾಹಿದ್ ಅಶ್ರಫ್ ಕಲಾಯಿಯನ್ನು ಮರೆತಿಲ್ಲ, ಪ್ರತಿರೋಧ ಅಪರಾಧವಲ್ಲ” ಎಂದು ಪೋಸ್ಟ್ ಹಾಕಲಾಗಿದೆ.

Happy
Happy
0 %
Sad
Sad
0 %
Excited
Excited
100 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *