
ಬೆಳ್ತಂಗಡಿ : ಬೈಕ್ ಕಳ್ಳತನಕ್ಕೆ ಯತ್ನದ ಆರೋಪದ ಹಿನ್ನೆಲೆ ಇಬ್ಬರನ್ನು ಮರಕ್ಕೆ ಕಟ್ಟಿ ಹಲ್ಲೆ ಸಾರ್ವಜನಿಕರು ಹಲ್ಲೆನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯಲ್ಲಿ ನಡೆದಿದೆ.



ಜ.20 ರಂದು ತಡರಾತ್ರಿ ಬೆಳ್ತಂಗಡಿಯ ಮರೋಡಿ ಗ್ರಾಮದ ಪಳಾರಗೋಳಿಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯ ನಿವಾಸಿ ದೇವಿ ಪ್ರಸಾದ್ ಎಂಬವರ ಬೈಕ್ ಕಳ್ಳತನವಾಗಿದ ಆರೋಪ ಕೇಳಿಬಂದಿದ್ದು ಮಂಗಳೂರಿನ ಕುಳೂರು ನಿವಾಸಿ ಮೋಯಿದ್ದಿನ್ ನಾಸೀರ್ ಹಾಗೂ ಅಬ್ದುಲ್ ಸಮದ್ ಎಂಬರ ಮೇಲೆ ಸಾರ್ವಾಜನಿಕರು ಕಟ್ಟಿಹಾಕಿ ಥಳಿಸಿದ್ದಾರೆ.
ಬೈಕ್ ಕದ್ದು ಪರಾರಿಯಾಗುತ್ತಿದ್ದ ಸಂದರ್ಭ ಇಬ್ಬರು ಆರೋಪಿಗಳನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದಿದ್ದು ಸಾರ್ವಜನಿಕರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿ ಪರಾರಿಯಾಗುತ್ತಿರುವಾಗ ಆರೋಪಿಗಳಾದ ಮೋಯಿದ್ದಿನ್ ನಾಸೀರ್ ಹಾಗೂ ಅಬ್ದುಲ್ ಸಮದ್ ಅವರನ್ನು ಥಳಿಸಿ ಸಾರ್ವಜನಿಕರು ಮರಕ್ಕೆ ಕಟ್ಟಿಹಾಕಿದ್ದಾರೆ.


ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ವೇಣೂರು ಪೊಲೀಸ್ ಠಾಣೆಯಲ್ಲಿ ಅಬ್ದುಲ್ ಸಮದ್ ಮತ್ತು ಮೊಯಿದ್ದಿನ್ ವಿರುದ್ದ BNS ಕಲಂ 303(2), 307 ಅಡಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ 8 ಜನರ ಮೇಲೆ ಪ್ರಕರಣ ದಾಖಲಾಗಿದ್ದು ಬಾಚು,ನಿಶೀತ್,ನರೇಶ್ ಅಂಚನ್, ರತ್ನಾಕರ, ಸಸ್ತಿಕ್,ದೇವಿಪ್ರಸಾದ್,ಸುಧೀರ್,ಚಂದಪ್ಪ ವಿರುದ್ದ.BNS ಕಲಂ 189(2), 191(2), 191(3), 352, 115(2), 118(1), 351(2) ,190 ಅಡಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

