
Read Time:38 Second
ಬಂಟ್ವಾಳ : ಕೆ–ಸೆಟ್ (ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ) 2025ರಲ್ಲಿ ಭಾರ್ಗವಿ ಯು. ಎಸ್ ಅವರು ವಾಣಿಜ್ಯ ವಿಷಯದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ರಾಜ್ಯಮಟ್ಟದಲ್ಲಿ 97ನೇ ರ‍್ಯಾಂಕ್ ಪಡೆದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹರಾಗಿದ್ದಾರೆ.


ಇವರು ಪ್ರಸ್ತುತ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಪೂಂಜಾಲಕಟ್ಟೆಯ ನಿವಾಸಿ ಉಮಾನಾಥ್ ಮತ್ತು ಶ್ರೀಲತಾ ಎಂ.ಜೆ ದಂಪತಿಯ ಸುಪುತ್ರಿ.

