ಬ್ಯಾಂಕ್ ದರೋಡೆ ಪ್ರಕರಣ: ಪರಾರಿಯಾದ ಆರೋಪಿಗಳು ಟೋಲ್ ಗೇಟಿನಲ್ಲಿ ಯಡವಟ್ಟು

0 0
Read Time:2 Minute, 18 Second

ಉಳ್ಳಾಲ: ಮುಸುಕುದಾರಿಗಳಿಂದ ಬ್ಯಾಂಕ್ ದರೋಡೆ ನಡೆಸಿದ ಆರೋಪಿಗಳು ಚಿನ್ನ, ಒಡವೆ, ನಗದುಗಳೆಲ್ಲವೂ ದರೋಡೆ ಮಾಡಿದ್ದು ಫಿಯೇಟ್ ಕಾರಿನಲ್ಲಿ ಬಂದು ಮಂಗಳೂರಿನ ಕಡೆಗೆ ಪರಾರಿಯಾಗಿದ್ದಾರೆ. ದೇರಳಕಟ್ಟೆ ಮಾರ್ಗವಾಗಿ ದರೋಡೆಕೋರರು ಪರಾರಿಯಾಗಿರುವ ಮಾಹಿತಿ ಬಂದಿದೆ. ಎಲ್ಲಾ ಟೋಲ್ ಗಳಲ್ಲೂ ತಪಾಸಣೆ ಮಾಡಿ ನೋಡಿದಾಗ ಕೇರಳ ಗಡಿಯಲ್ಲಿನ ಸಿಸಿ ಕ್ಯಾಮರಾಗಳ ಪರಿಶೀಲನೆಗೆ ಸೂಚನೆ ನೀಡಲಾಗಿದೆ.

ಸದ್ಯ ಪ್ರಕರಣದಲ್ಲಿ ಒಂದು ಪ್ರಮುಖ ಬೆಳವಣಿಗೆಯಾಗಿದ್ದು ತಲಪಾಡಿ ಟೋಲ್ ಗೇಟ್ನಲ್ಲಿ 150 ರೂಪಾಯಿ ಹಣ ಕೊಟ್ಟು ರಶೀದಿಯನ್ನು ದರೋಡೆಕೋರರು ಪಡೆದಿರುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ನಂಬರ್ ಪ್ಲೇಟ್ ಫೇಕ್ ಆಗಿದ್ದರಿಂದ ಫಾಸ್ಟಾಗ್ ಇರಲಿಲ್ಲ ಎಂದು ತಿಳಿದು ಬಂದಿದೆ. ದರೋಡೆಕೋರರು ಕಾರಿಗೆ ಫೇಕ್ ನಂಬರ್ ಪ್ಲೇಟ್ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ. KA04 MQ9923 ಎಂಬ ನಂಬರ್ ಹಾಕಿದ್ದಾರೆ. ಈ ನಂಬರ್ ಪ್ಲೇಟ್ ಡಿಟೇಲ್ ತೆಗೆದು ನೋಡಿದ ಪೊಲೀಸರು ಶಾಕ್ ಆಗಿದ್ದಾರೆ.ಈ ನಂಬರ್ ನ ಅಸಲಿ ಮಾಲೀಕನಿಗೆ ಪೊಲೀಸರು ಕರೆ ಮಾಡಿದಾಗ ಶಾಕ್ ಒಳಗಾಗಿದ್ದಾನೆ.

ಪ್ರಕರಣದಲ್ಲಿ ಇನ್ನೂ ಒಂದು ಅಚ್ಚರಿಯ ಘಟನೆ ನಡೆದಿದೆ. ದರೋಡೆಕೋರರರು ಎಷ್ಟು ಸಾಧ್ಯವೋ ಅಷ್ಟು ಬೇಗ ಎಲ್ಲವನ್ನು ದೋಚಿ ಓಡಿಹೋಗುವ ಪ್ಲ್ಯಾನ್ನಲ್ಲಿದ್ದರು. ಇದೇ ಆತುರದಲ್ಲಿ ಸುಮಾರು 6 ಕೋಟಿ ರೂಪಾಯಿ ಮೌಲ್ಯದಷ್ಟು ಚಿನ್ನವನ್ನು ಬಿಟ್ಟು ಹೋಗಿದ್ದಾರೆ. ಸುಮಾರು 12ಕೆಜಿಯಷ್ಟು ಚಿನ್ನವನ್ನು ಬ್ಯಾಂಕ್ನಲ್ಲಿಯೇ ಉಳಿಸಿದ ತಮ್ಮ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೂ ದೋಚಿಕೊಂಡು ಹೋಗಿದ್ದಾರೆ. ಎಲ್ಲಾ ಹೊತ್ತುಕೊಂಡು ಹೋಗುವಷ್ಟರಲ್ಲಿ ಒಂದು ಪೊಲೀಸರಿಗೆ ಸಮಯ ಕೊಟ್ಟ ಹಾಗೆ ಆಗುತ್ತೆ ಮತ್ತೊಂದು ಎತ್ತುಕೊಂಡು ಹೋಗಲು ಭಾರವಾಗುತ್ತೆ ಎಂಬ ಕಾರಣದಿಂದ ಬಿಟ್ಟು ಹೋಗಿರುವ ಶಂಕೆಯಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *