ಮಂಗಳೂರು: ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಬಾಂಗ್ಲಾಪ್ರಜೆ – ಉಡುಪಿಯಲ್ಲಿ ಅಕ್ರಮವಾಗಿ ಪಾಸ್‌ಪೋರ್ಟ್ ಮಾಡಿದ್ದ ನುಸುಳುಕೋರ

0 0
Read Time:1 Minute, 46 Second

ಮಂಗಳೂರು: ಭಾರಕ್ಕೆ ಅಕ್ರಮವಾಗಿ ನುಸುಳಿಕೊಂಡು ಬಂದು ಉಳಿದುಕೊಂಡಿದ್ದಲ್ಲದೇ, ಅಕ್ರಮ ಪಾಸ್‌ಪೋರ್ಟ್ ಮಾಡಿಸಿ ದುಬೈಗೆ ಹಾರಲೆತ್ನಿಸಿದ ಬಾಂಗ್ಲಾ ಮೂಲದ ವ್ಯಕ್ತಿಯೊಬ್ಬನನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಾಂಗ್ಲಾದೇಶ ಮೂಲದ ನಿವಾಸಿ ಮಾಣಿಕ್ ಹುಸೈನ್ (26) ಬಂಧಿತ ಆರೋಪಿ. ಮಾಣಿಕ್ ಹುಸೈನ್ 2017ರಲ್ಲಿ ಪಶ್ಚಿಮ ಬಂಗಾಳ ಗಡಿಯ ಮೂಲಕ ಬಾಂಗ್ಲಾದಿಂದ ಭಾರತಕ್ಕೆ ಬಂದಿದ್ದ. ಬಳಿಕ, ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ. ಇತ್ತೀಚೆಗೆ ಉಡುಪಿ ಜಿಲ್ಲೆಯ ಪರಿಚಿತನೊಬ್ಬನ ಮೂಲಕ ನಕಲಿ ಆಧಾರ್ ಇನ್ನಿತರ ಐಡಿಗಳನ್ನು ಮಾಡಿ, ನಕಲಿ ವಿಳಾಸ ಮೂಲಕ ಭಾರತದ ಪಾಸ್‌ಪೋರ್ಟ್ ರೆಡಿ ಮಾಡಿಸಿದ್ದ. ಇದೀಗ ಮಂಗಳೂರು ವಿಮಾನ ನಿಲ್ದಾಣದ ಮೂಲಕ ದುಬೈಗೆ ಹಾರಲು ಯತ್ನಿಸುತ್ತಿದ್ದಾಗಲೇ ಎಮಿಗ್ರೇಷನ್ ಅಧಿಕಾರಿಗಳು ಸಂಶಯದಲ್ಲಿ ತಪಾಸಣೆ ನಡೆಸಿದ್ದು ವಶಕ್ಕೆ ಪಡೆದಿದ್ದಾರೆ. ಉಡುಪಿಯಲ್ಲಿ ಸಿದ್ಧಪಡಿಸಿದ ಪಾಸ್‌ಪೋರ್ಟ್‌ನಲ್ಲಿ ತನ್ನ ಹೆಸರನ್ನು ಮಹಮ್ಮದ್ ಮಾಣಿಕ್ ಎಂದು ಬದಲಾಯಿಸಿದ್ದ. ಸದಯ ಆರೋಪಿಯನ್ನು ಬಜಪೆ ಪೋಲೀಸರಿಗೆ ಒಪ್ಪಿಸಲಾಗಿದೆ. ಬಜಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಂಗ್ಲಾ ಮೂಲದ ಈ ವ್ಯಕ್ತಿಯೊಂದಿಗೆ ಇನ್ನಷ್ಟು ಮಂದಿ ಉಡುಪಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
100 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *