
ಮಂಗಳೂರು : ತಾಲೂಕಿನ ಬಜಪೆ ಪಟ್ಟಣ ಪಂಚಾಯತ್ಗೆ ಡಿ.21ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ಲಭಿಸಿದೆ.ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳನ್ನು ಗೆದ್ದುಕೊಂಡು ಬೀಗಿದೆ. ಕಾಂಗ್ರೆಸ್-4, ಎಸ್ಡಿಪಿಐ-3 ಮತ್ತು ಪಕ್ಷೇತರರು 1 ಸ್ಥಾನಗಳನ್ನು ಪಡೆದಿದ್ದಾರೆ.ಬುಧವಾರ ಮಂಗಳೂರು ಮಿನಿ ವಿಧಾನಸೌಧದಲ್ಲಿ ಮಾತಗಳ ಎಣಿಕೆ ನಡಯಿತು. ಬಜಪೆಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು.



ವಿಜೇತರ ವಿವರ:ವಾರ್ಡ್ 1. ಯಶೋದ (ಬಿಜೆಪಿ)ವಾರ್ಡ್ 2. ಪದ್ಮನಾಭ ಪೂಜಾರಿ (ಬಿಜೆಪಿ)ವಾರ್ಡ್ 3. ಜಾಕೋಬ್ ಪಿರೇರಾ (ಕಾಂಗ್ರೆಸ್)ವಾರ್ಡ್ 4. ಸಿರಾಜ್ ಬಜಪೆ (ಪಕ್ಷೇತರ)ವಾರ್ಡ್ 5. ಗುಲ್ಸನ್ ಕರೀಂ (ಎಸ್ಡಿಪಿಐ)ವಾರ್ಡ್ 6. ವೀಣಾ ಡಿಸೋಜಾ (ಎಸ್ಡಿಪಿಐ)ವಾರ್ಡ್ 7. ಆಯಿಷಾ ಬಜಪೆ (ಎಸ್ಡಿಪಿಐ)ವಾರ್ಡ್ 8. ಲೋಕೇಶ್ ಪೂಜಾರಿ (ಬಿಜೆಪಿ)ವಾರ್ಡ್ 9. ರಿತೇಶ್ ಶೆಟ್ಟಿ (ಬಿಜೆಪಿ)ವಾರ್ಡ್ 10. ಶರ್ಮಿಳಾ ಶೆಟ್ಟಿ (ಬಿಜೆಪಿ)ವಾರ್ಡ್ 11. ಚಿನ್ನಪ್ಪ ಸಾಲ್ಯಾನ್ (ಕಾಂಗ್ರೆಸ್)ವಾರ್ಡ್ 12. ಕಿರಣ್ (ಕಾಂಗ್ರೆಸ್)ವಾರ್ಡ್ 13. ಸುಪ್ರೀತಾ ಶೆಟ್ಟಿ (ಬಿಜೆಪಿ)ವಾರ್ಡ್ 14. ಹಾಜಿರಾ ಫರ್ಜಾನಾ (ಕಾಂಗ್ರೆಸ್)ವಾರ್ಡ್ 15. ದಿನೇಶ್ ಶೆಟ್ಟಿ ಕೆಂಜಾರು (ಬಿಜೆಪಿ)ವಾರ್ಡ್ 16. ರಾಜೇಶ್ ಅಮೀನ್ ಆರ್.ಕೆ (ಬಿಜೆಪಿ)ವಾರ್ಡ್ 17. ಮಲ್ಲಿಕಾ ಚಂದ್ರಶೇಖರ್ (ಬಿಜೆಪಿ)ವಾರ್ಡ್ 18. ರಕ್ಷಿತಾ ಶರತ್ (ಬಿಜೆಪಿ)ವಾರ್ಡ್ 19. ಜಯಂತ್ ಪೂಜಾರಿ (ಬಿಜೆಪಿ)

