ಬಾದಶಾಹಿ ಬಾಗ್ ಪ್ರದೇಶದ ಹೆಸರನ್ನು ‘ಬ್ರಹ್ಮಪುರಂ’ ಎಂದು ಮರು ನಾಮಕರಣ ಮಾಡಿದ ಯೋಗಿ ಸರ್ಕಾರ

0 0
Read Time:1 Minute, 32 Second

ಲಖನೌ: ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ ಹೆಸರು ಬದಲಾವಣೆ ರಾಜಕೀಯ ಮುಂದುವರೆದಿದೆ. ಇದೀಗ ಆಗ್ರಾದ ಫತೇಹಾಬಾದ್ ಪಟ್ಟಣ ಮತ್ತು ಬಾದಶಾಹಿ ಬಾಗ್ ಪ್ರದೇಶದ ಹೆಸರನ್ನು ಹೆಸರನ್ನು ಬದಲಾಯಿಸಲು ನಿರ್ಧರಿಸಲಾಗಿದೆ.

ಫತೇಹಾಬಾದ್ ಪಟ್ಟಣದ ಹೆಸರನ್ನು ಸಿಂಧೂರಪುರಂ ಮತ್ತು ಬಾದಶಾಹಿ ಬಾಗ್ ಪ್ರದೇಶದ ಹೆಸರನ್ನು ಬ್ರಹ್ಮಪುರಂ ಎಂದು ಮರು ನಾಮಕರಣ ಮಾಡಲಾಗುತ್ತಿದೆ.

ಸೋಮವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಂಜು ಭಡೋರಿಯಾ ಅವರು ಈ ಕುರಿತು ಪ್ರಸ್ತಾವನೆಯನ್ನು ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಿದರು. ಇದೀಗ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುತ್ತಿದೆ.

ಈ ಪ್ರದೇಶಗಳು ಗುಲಾಮಗಿರಿ ಸಂಕೇತಿಸುವುದರಿಂದ ಹೆಸರು ಬದಲಾವಣೆಗಳನ್ನು ನಿರ್ಣಯ ಕೈಗೊಳ್ಳಲಾಗಿದೆ ಎಂದು ಭಡೋರಿಯಾ ಹೇಳಿದರು. ಫತೇಹಾಬಾದ್ ಪಟ್ಟಣವನ್ನು ಹಿಂದೆ ಸಮುಘರ್ ಎಂದು ಕರೆಯಲಾಗುತ್ತಿತ್ತು. ಇದನ್ನು ಸಿಂಧೂರಪುರಂ ಎಂದು ಮರುನಾಮಕರಣ ಮಾಡಲು ಸೂಚಿಸಲಾಗಿದೆ.

ಫತೇಹಾಬಾದ್‌ನಲ್ಲಿರುವ ಬಾದಶಾಹಿ ಬಾಗ್ ಪ್ರದೇಶವನ್ನು ಬ್ರಹ್ಮೋಸ್ ಕ್ಷಿಪಣಿ ಮತ್ತು ಬ್ರಹ್ಮನ ಹೆಸರಿನಲ್ಲಿ ಬ್ರಹ್ಮಪುರಂ ಎಂದು ಮರುನಾಮಕರಣಕ್ಕೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *