
Read Time:1 Minute, 1 Second
ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊಂದು ಪಲ್ಟಿಯಾದ ಪರಿಣಾಮ ಚಾಲಕ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಬದ್ಯಾರ್ ಸಮೀಪ ನಡೆದಿದೆ.


ಮೃತಪಟ್ಟ ಚಾಲಕನನ್ನು ಮಾಲಾಡಿ ನಿವಾಸಿ ಶಿವಾನಂದ ಪಿ. ಮಾಳವ (33) ಎಂದು ಗುರುತಿಸಲಾಗಿದೆ.
ಗುರುವಾಯನಕೆರೆಯಿಂದ ಅಳದಂಗಡಿಗೆ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಶಿವಾನಂದ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗೆ ಮೃತಪಟ್ಟಿದ್ದರು.


ಸಹಪ್ರಯಾಣಿಕ ಶಿವರಾಜ್ ಗಾಯಗೊಂಡಿದ್ದು, ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರ ಠಾಣೆಯ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
