
Read Time:41 Second
ವಿಟ್ಲ: ಚಲಿಸುತಿದ್ದ ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದ ಘಟನೆ ವಿಟ್ಲ ಸಮೀಪದ ವೀರಕಂಭ ಗ್ರಾಮದ ಮಜ್ಜೋಣಿಯಲ್ಲಿ ನಡೆದಿದೆ.


ಪುತ್ತೂರಿನಲ್ಲಿ ಕುಟುಂಬದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಕಲ್ಲಡ್ಕ ಕಡೆ ತೆರಳುತ್ತಿದ ಆಟೋ ರಿಕ್ಷಾ ಮಜ್ಜೋಣಿ ಎಂಬಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ. ಘಟನೆಯಲ್ಲಿ ಆಟೋ ರಿಕ್ಷಾ ಚಾಲಕ ಸೇರಿದಂತೆ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.