ರಾಜ್ಯದಲ್ಲಿ ಟೀನೇಜ್ ಪ್ರೆಗ್ನೆನ್ಸಿ ಭಾರೀ ಹೆಚ್ಚಳ : ಆರೋಗ್ಯ ಇಲಾಖೆಯಿಂದ ಬೆಚ್ಚಿ ಬೀಳಿಸುವ ವರದಿ
ಬೆಂಗಳೂರು : ಕರ್ನಾಟಕದಲ್ಲಿ 18 ವರ್ಷ ತುಂಬುವುದಕ್ಕಿಂತ ಮೊದಲೇ ಗರ್ಭಿಣಿ ಆಗುತ್ತಿರುವವರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಜ್ಯಾದ್ಯಂತ 3,36,000 ಕ್ಕೂ ಹೆಚ್ಚು ಟಿನೇಜ್ ಪ್ರಗ್ನೆನ್ಸಿ ಪ್ರಕರಣಗಳು ವರದಿಯಾಗಿದೆ. ಹೌದು, ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಾದ್ಯಂತ ಒಟ್ಟಾರೆಯಾಗಿ 3,36,000 ಕ್ಕೂ ಹೆಚ್ಚು ಟಿನೇಜ್ ಪ್ರಗ್ನೆನ್ಸಿ ಪ್ರಕರಣಗಳು ವರದಿಯಾಗಿದ್ದರೆ, ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ 22000 ಹಾಗೂ ಬೆಂಗಳೂರು ಅರ್ಬನ್ನಲ್ಲಿ 8891 ಟೀನೇಜ್ ಪ್ರಗ್ನೆನ್ಸಿ ಪ್ರಕರಣಗಳು ಕಂಡು ಬಂದಿವೆ. 2020-21 ರಿಂದ 2024-25 ರವರೆಗೆ (ಫೆಬ್ರವರಿ ವರೆಗೆ) ಎಲ್ಲಾ…

