ಶಾರ್ಜಾಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ತಾಂತ್ರಿಕ ದೋಷ: ತಿರುಚ್ಚಿ ರನ್ವೇಯಲ್ಲಿ ಹಾರಾಟ ಸ್ಥಗಿತ
ನವದೆಹಲಿ: ಯುಎಇಯ ಶಾರ್ಜಾಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ತಾಂತ್ರಿಕ ದೋಷದಿಂದಾಗಿ ತಮಿಳುನಾಡಿನ ತಿರುಚ್ಚಿ ವಿಮಾನ ನಿಲ್ದಾಣದ ರನ್ವೇ ಬಳಿ ಬುಧವಾರ ಬೆಳಿಗ್ಗೆ ಸ್ಥಗಿತಗೊಂಡಿದೆ. ತಿರುಚ್ಚಿಯಿಂದ ಶಾರ್ಜಾಗೆ ಮುಂಜಾನೆ 4.45 ಕ್ಕೆ ಹೊರಡಬೇಕಿದ್ದ ವಿಮಾನವು ಸಮಸ್ಯೆಯಿಂದಾಗಿ ಟೇಕ್ ಆಫ್ ಆಗಲು ಸಾಧ್ಯವಾಗಲಿಲ್ಲ. ಎಂಜಿನಿಯರ್ ಗಳು ತಾಂತ್ರಿಕ ಸಮಸ್ಯೆಗೆ ಸ್ಪಂದಿಸಿದಾಗ ಪ್ರಯಾಣಿಕರು ಟಾರ್ಮಾಕ್ ನಲ್ಲಿಯೇ ಉಳಿದಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ದೃಢಪಡಿಸಿದ್ದಾರೆ. ನಂತರ ಅಧಿಕಾರಿಗಳು ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲು ವ್ಯವಸ್ಥೆ ಮಾಡಿದರು. ಪರಿಸ್ಥಿತಿಯನ್ನು ಪರಿಹರಿಸಲು ಮತ್ತು…

