7 ವರ್ಷಗಳ ಬಳಿಕ ಭಾರತದಲ್ಲಿ ಇಂದು ಅಪರೂಪದ ರಕ್ತ ಚಂದ್ರ ಗ್ರಹಣ
ಬೆಂಗಳೂರು: ಇಂದು ರಾತ್ರಿ ನಭೋ ಮಂಡಲದಲ್ಲಿ ಅಪರೂಪದ ಕೌತುಕದ ರಕ್ತ ಚಂದನ ಚಂದ್ರಗ್ರಹಣ ಸಂಭವಿಸಲಿದೆ. ಸುದೀರ್ಘ 3 ಗಂಟೆ 28 ನಿಮಿಷಗಳ ಕಾಲ ನಡೆಯುವ ಭೂಮಿ, ಸೂರ್ಯ ಹಾಗೂ ಚಂದ್ರನ ನಡುವಿನ ನೆರಳಿನಾಟಕ್ಕೆ ಭಾರತ ಕೂಡ ಸಾಕ್ಷಿಯಾಗಲಿದೆ. ಭಾರತವಲ್ಲದೇ , ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಯೂರೋಪ್ ಸೇರಿ ಬಹುತೇಕ ವಿಶ್ವದ ಶೇ .85ರಷ್ಟು ಮಂದಿ ಸೆ. 7ರ ರವಿವಾರ ತಡರಾತ್ರಿ ಸಂಭವಿಸಲಿರುವ ಅತೀ ಅಪರೂಪದ ರಕ್ತ ಚಂದ್ರಗ್ರಹಣವನ್ನು ವೀಕ್ಷಿಸಬಹುದಾಗಿದೆ. ಏಷ್ಯಾ ಹಾಗೂ ಆಸ್ಟ್ರೇಲಿಯಾದಲ್ಲಿ ಆರಂಭದಿಂದ ಅಂತ್ಯದವರೆಗೂ ಉತ್ತಮವಾಗಿ…

