“ಸುವರ್ಣ ಗೃಹಮಂತ್ರಿ” 500ರ ಸಂಭ್ರಮ.. ರವಿಶಂಕರ್ ಗೌಡ ಕುಟುಂಬದ ಜೊತೆ ರವಿಶಂಕರ್ ಗೌಡ. ಇದೇ ಅಕ್ಟೋಬರ್ 27 ರಂದು ಸಂಜೆ 5 ಗಂಟೆಗೆ..!
ಕರ್ನಾಟಕದ ಗೃಹಿಣಿಯರ ಮನಗೆದ್ದು ಮನೆಮಾತಾಗಿರೋ ಜನಪ್ರಿಯ ಕಾರ್ಯಕ್ರಮ “ಸುವರ್ಣ ಗೃಹಮಂತ್ರಿ”. ಖ್ಯಾತ ನಟ ರವಿಶಂಕರ್ ಗೌಡ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮ ಕನ್ನಡ ಕಿರುತೆರೆಯಲ್ಲಿ ಪ್ರತಿದಿನ ಪ್ರಸಾರವಾಗುವ ಸಾಮಾನ್ಯ ಜನರ (ಕಾಮನ್ ಮ್ಯಾನ್) ರಿಯಾಲಿಟಿ ಶೋ. .ತನಗಾಗಿ ಏನನ್ನೂ ಬಯಸದೇ ತನ್ನವರ ಖುಷಿಗಾಗಿ ನಿರಂತರವಾಗಿ ಹಂಬಲಿಸುವ ಗೃಹಿಣಿಯರನ್ನು ಗೌರವಿಸುವ ನಿಟ್ಟಿನಲ್ಲಿ ಕರ್ನಾಟಕದ ಮನೆ ಮನೆಗೆ ಹೋಗಿ ದಿನಕ್ಕೊಂದು ಕುಟುಂಬವನ್ನು ಭೇಟಿ ಮಾಡಿ, ಗಂಡ ಹೆಂಡತಿ ಅವರನ್ನು ಆಟ ಆಡಿಸಿ , ಮಾತನಾಡಿಸಿ, ಆಕೆಯ ಕುಟುಂಬದವರ ಪರಿಚಯ…

