admin

ಮಂಗಳೂರು ವಿಮಾನ ನಿಲ್ದಾಣ: ಚಳಿಗಾಲದ ಹೊಸ ವೇಳಾಪಟ್ಟಿ ಪ್ರಕಟ; ಅ.26 ರಿಂದಲೇ ಜಾರಿ…

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಕ್ಟೋಬರ್ 26ರಿಂದ ಜಾರಿಗೆ ಬರುವ ಚಳಿಗಾಲದ ಹೊಸ ವಿಮಾನಯಾನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, ದೆಹಲಿಗೆ ಎರಡನೇ ದೈನಂದಿನ ವಿಮಾನ, ತಿರುವನಂತಪುರಂಗೆ ಹೊಸ ಸೇವೆ ಮತ್ತು ಗಲ್ಫ್ ರಾಷ್ಟ್ರಗಳಿಗೆ ಹೆಚ್ಚುವರಿ ವಿಮಾನ ಸಂಪರ್ಕವನ್ನು ಕಲ್ಪಿಸಲಾಗಿದೆ. ಈ ಪರಿಷ್ಕೃತ ವೇಳಾಪಟ್ಟಿಯು 2026ರ ಮಾರ್ಚ್ 28ರವರೆಗೆ ಜಾರಿಯಲ್ಲಿರುತ್ತದೆ. ದೇಶೀಯ ವಿಮಾನಯಾನದಲ್ಲಿ ಪ್ರಮುಖ ಬದಲಾವಣೆಗಳು: 1. ದೆಹಲಿಗೆ ಹೆಚ್ಚುವರಿ ವಿಮಾನ:ಈಗಾಗಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು-ದೆಹಲಿ…

Read More

ಕರ್ನಾಟಕದಲ್ಲಿ ಹಲಾಲ್ ಸರ್ಟಿಫಿಕೇಟ್ ನಿಷೇಧಿಸಿ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಯತ್ನಾಳ್ ಪತ್ರ

ಬೆಂಗಳೂರು: ಕರ್ನಾಟಕದಲ್ಲಿ ಹಲಾಲ್ ಸರ್ಟಿಫಿಕೇಟ್ ನಿಷೇಧ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ಸಂಬಂಧ ಕೇಂದ್ರ ಸಚಿವ ಅಮಿತ್ ಶಾಗೆ ಪತ್ರ ಬರೆದಿರುವಂತ ಅವರು, ಕರ್ನಾಟಕದಲ್ಲಿ ಹಲಾಲ್ ಸರ್ಟಿಫಿಕೇಟ್ ನಿಷೇಧಿಸಿ. ಹಲಾಲ್ ಸರ್ಟಿಫಿಕೇಷನ್ ಏಜೆನ್ಸಿಗಳನ್ನು ನಿಷೇಧಿಸಿ. ಹಲಾಲ್ ಸರ್ಟಿಫಿಕೇಟ್ ಹಣ ದುರ್ಬಳಕೆ ಆಗುತ್ತಿದೆ. ದೇಶದ ಭದ್ರತೆ ದೃಷ್ಟಿಯಿಂದ ಹಲಾಲ್ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಕರ್ನಾಟಕದಲ್ಲಿ ಹಲಾಲ್ ಸರ್ಟಿಫಿಕೇಟ್ ನಿಂದ ಕೆಲ ಸಂಘಟನೆಗಳು ಹಣ ದುರ್ಬಳಕೆ…

Read More

ಸ್ನಾನ ಗೃಹದಲ್ಲಿ ಗ್ಯಾಸ್‌ ಗೀಸರ್‌ ಸೋರಿಕೆ: ಅಕ್ಕ-ತಂಗಿಯರಿಬ್ಬರೂ ಉಸಿರುಗಟ್ಟಿ ಸಾವು

 ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಮನೆಯ ಸ್ನಾನಗೃಹದಲ್ಲಿದ್ದ ಗ್ಯಾಸ್‌ ಗೀಸರ್‌ನಿಂದ ಕಾರ್ಬನ್ ಮಾನಾಡ್ ಸೋರಿಕೆಯಾದ ಪರಿಣಾಮ, ಅಕ್ಕ-ತಂಗಿಯರಿಬ್ಬರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬೆಟ್ಟದಪುರ ಗ್ರಾಮದ ಸಿಮ್ರಾನ್ ತಾಜ್(23)ಮತ್ತು ಅವರ ಸಹೋದರಿ ಗುಲ್ಬರ್ಮ್ ತಾಜ್ (20) ದುರಂತ ಅಂತ್ಯ ಕಂಡ ಯುವತಿಯರು. ಸಹೋದರಿಯರಾದ ಸಿಮ್ರಾನ್ ತಾಜ್ ಮತ್ತು ಗುಲ್ಬರ್ಮ್ ತಾಜ್ ಒಟ್ಟಿಗೆ ಸ್ನಾನ ಮಾಡಲು ಬಾತ್‌ರೂಂಗೆ ತೆರಳಿದ್ದರು. ಈ ವೇಳೆ ಸ್ನಾನದ ಕೋಣೆಯಲ್ಲಿ ಅಳವಡಿಸಿದ್ದ ಗ್ಯಾಸ್ ಗೀಸರ್‌ನಿಂದ ಮಾರಕವಾದ ಕಾರ್ಬನ್ ಮಾನಾಡ್ ವಿಷಾನಿಲ ಸೋರಿಕೆಯಾಗಿದೆ. ಸ್ನಾನದ ಕೋಣೆಯಲ್ಲಿ…

Read More

ಶಬರಿಮಲೆ ದೇಗುಲದಲ್ಲಿ ಚಿನ್ನ ಕಳವು ಪ್ರಕರಣ : ಆರೋಪಿ ಪೊನ್ನಿ ಉನ್ನಿಕೃಷ್ಣನ್ ಮನೆ ಮೇಲೆ SIT ರೇಡ್

ಶಬರಿಮಲೆ ದೇಗುಲದಲ್ಲಿ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿ ಪೊನ್ನಿ ಉನ್ನಿಕೃಷ್ಣನ್ ಮನೆಯ ಮೇಲೆ ಕೇರಳ ಎಸ್ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಮೇಲೆ ದಾಳಿ ಮಾಡಿದ್ದಾರೆ. ನಾಲ್ವರು ಅಧಿಕಾರಿಗಳ ತಂಡದಿಂದ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ. ತಿರುವನಂತಪುರದಲ್ಲಿ ಉನ್ನಿಕೃಷ್ಣನ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ತನಿಖೆ ಭಾಗವಾಗಿ ಸಾಕ್ಷಿ ಆಧಾರಗಳನ್ನು ಸಂಗ್ರಹಿಸಲು ಪ್ರಮುಖ ಆರೋಪಿಯಾಗಿರುವ ಪೊನ್ನಿ ಉನ್ನಿಕೃಷ್ಣನ್ ನಿವಾಸದ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ….

Read More

ರಾಜ್ಯದಲ್ಲಿ ಹೊಸ APL, BPL ಕಾರ್ಡ್ ಗೆ ಮತ್ತೆ ಅರ್ಜಿ ಸಲ್ಲಿಕೆ ಆರಂಭ!!

ಬೆಂಗಳೂರು : ರಾಜ್ಯದಲ್ಲಿ ಹೊಸ ಎಪಿಎಲ್, ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಕುಟುಂಬದ ಆದಾಯವನ್ನು ಪರಿಗಣಿಸಿ ಎಪಿಎಲ್ ನೀಡಬೇಕೋ ಅಥವಾ ಬಿಪಿಎಲ್‌ ನೀಡಬೇಕೋ ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ.ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುವವರು  ತಮ್ಮ ಮೊಬೈಲ್ ಮೂಲಕ ಅಥವಾ ಕಂಪ್ಯೂಟರ್ ಅಥವಾ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಹೊಸ ರೇಷನ್‌ ಕಾರ್ಡ್‌ ಗೆ ಅರ್ಜಿ ಸಲ್ಲಿಸಬಹುದು.

Read More

ಸುರತ್ಕಲ್ ಚೂರಿ ಇರಿತ ಪ್ರಕರಣ: ನಾಲ್ವರು ಆರೋಪಿಗಳು ಬಂಧನ

ಸುರತ್ಕಲ್: ಯುವಕರಿಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುರತ್ಕಲ್‌ ಕಟ್ಲ ನಿವಾಸಿಗಳಾದ ಸುಶಾಂತ್ ಯಾನೆ ಕಡವಿ (29), ಕೆ.ವಿ. ಅಲೆಕ್ಸ್ (27), ಸುರತ್ಕಲ್‌ ಇಂದಿರಾ ಕಟ್ಟೆ ನಿವಾಸಿ ನಿತಿನ್ (26) ಮತ್ತು ಆರೋಪಿಗಳಿಗೆ ಆಶ್ರಯ ನೀಡಿದ ಕುಳಾಯಿ ಹೊನ್ನಕಟ್ಟೆ ನಿವಾಸಿ ಅರುಣ್ ಶೆಟ್ಟಿ (56) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಗುರುರಾಜ್‌ ಮತ್ತು ಆರೋಪಿ ಗಳಿಗೆ ಆಶ್ರಯ ನೀಡಿದ್ದ ಅಶೋಕ್ ಎಂಬವರು…

Read More

ಕೇಸ್ ಇದ್ದವರ ಜತೆ ತಿರುಗಾಡಿದ್ರೆ ನಿಮಗೆ ತೊಂದರೆ: ಮಂಗಳೂರು ಪೊಲೀಸ್‌ ಕಮಿಷನ‌ರ್ ಎಚ್ಚರಿಕೆ

ಮಂಗಳೂರು: ಈಗಾಗಲೇ ಪ್ರಕರಣದಲ್ಲಿ ಭಾಗಿಯಾದವರ ಜತೆ ಯಾವುದೇ ಪ್ರಕರಣ ಇಲ್ಲದವರು ತಿರುಗಾಡದಂತೆ ಈಗಾಗಲೇ ನಾವು ಎಚ್ಚರಿಕೆ ನೀಡಿದ್ದೇವೆ. ಸರಿಯಾಗಿ ಕೇಳಿಸಿದಂತೆ ಕಾಣುತ್ತಿಲ್ಲ. ಈಗಾಗಲೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ಜತೆ ತಿರುಗಾಡುವವರಿಗೂ ತೊಂದರೆ ಆಗಲಿದೆ. ಇಲ್ಲ ನಾವು ತಿರುಗುತ್ತೇವೆ. ನಮ್ಮ ಇಷ್ಟ ಎಂದು ನೀವು ಬಯಸಿದರೆ ನಮಗೆ ಸಮಸ್ಯೆ ಇಲ್ಲ. ನೀವು ಮಾಡುವುದು ನೀವು ಮಾಡಿ, ನಾವು ಮಾಡುವುದು ನಾವು ಮಾಡುತ್ತೇವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀ‌ರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

Read More

ಮಂಗಳೂರು: ಹಿಂದೂ ಸಂಘಟನೆಯ ಕಾರ್ಯಕರ್ತ ಅಕ್ಷಯ್ ರಾಜ್‌ಪುತ್ ಅವರ ವಾಟ್ಸ್ಯಾಪ್ ನಂಬರ್‌ ಶಾಶ್ವತ ರದ್ದು!!

ಮಂಗಳೂರು: ಹಿಂದೂ ಸಂಘಟನೆಯ ಮುಂಚೂಣಿಯಲ್ಲಿರುವ ಅಕ್ಷಯ್ ರಾಜ್‌ಪುತ್ ಅವರ ವಾಟ್ಸ್ಯಾಪ್ ನಂಬರ್‌ (+91 9148949324) ಅನ್ನು ವಾಟ್ಸ್ಯಾಪ್ ಕಂಪನಿಯು ಶಾಶ್ವತವಾಗಿ ರದ್ದುಪಡಿಸಿದೆ ಎಂದು ವರದಿಯಾಗಿರುತ್ತದೆ. ಸುಮಾರು ಹತ್ತು ವರ್ಷಗಳಿಂದ ನಿರಂತರವಾಗಿ ಬಳಸುತ್ತಿದ್ದ ಈ ನಂಬರನ್ನು ಕಂಪನಿಯು ತನ್ನ ನೀತಿ ಹಾಗೂ ನಿಯಮಗಳಿಗನುಗುಣವಾಗಿ ಸ್ಥಗಿತಗೊಳಿಸಿದೆ ಎಂದು ವಾಟ್ಸ್ಯಾಪ್ ಮೂಲಗಳು ತಿಳಿಸಿವೆ. ಅಕ್ಷಯ್ ರಾಜ್‌ಪುತ್ ಅವರು ಇತ್ತೀಚೆಗೆ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಜಿಲ್ಲೆಯ ಮಟ್ಟದಲ್ಲಿ ಹಿಂದೂ ಸಂಘಟನೆಯ ಗಡಿಪಾರದ ಪ್ರಮುಖರಲ್ಲಿ ಒಬ್ಬರು. ಈ ಹಿನ್ನೆಲೆ ಅವರ ಖಾತೆ ರದ್ದುಗೊಂಡಿರುವುದು…

Read More

ಬೆಳ್ತಂಗಡಿ: ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ- ಆರೋಪಿ ಪರಾರಿ

ಬೆಳ್ತಂಗಡಿ: ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪತ್ತೆ ಹಚ್ಚಿದ್ದು ಆಟೋ ರಿಕ್ಷಾ ಹಾಗೂ ಗೋ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಪರಿಶೀಲನೆ ವೇಳೆ ಆಟೋ ರಿಕ್ಷಾದೊಳಗೆ 85 ಕೆ.ಜಿ ಗೋಮಾಂಸ ಪತ್ತೆಯಾಗಿದ್ದು, ಆಟೋದ ಮೌಲ್ಯ 2,50,000 ಲಕ್ಷ ರೂ. ಮತ್ತು ಗೋಮಾಂಸ ವಶಪಡಿಸಿಕೊಂಡು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಅ.23 ರಂದು ಮಧ್ಯಾಹ್ನ ಕಿಲ್ಲೂರು ರಸ್ತೆಯಿಂದ ಬರುತ್ತಿದ್ದ ಆಟೋ ರಿಕ್ಷಾವನ್ನು…

Read More

ಖಾಸಗಿ ಬಸ್ ಅಗ್ನಿ ದುರಂತ:  20ಕ್ಕೂ ಅಧಿಕ ಮಂದಿ ಸಾವು..! ದುರಂತಕ್ಕೆ ಕಾರಣವಾಯ್ತು ಸಣ್ಣದೊಂದು ತಪ್ಪು!

ಹೈದರಾಬಾದ್: ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್​​ನ ವೋಲ್ವೊ ಬಸ್ ಬೆಂಕಿಗಾಹುತಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದ ದುರ್ಘಟನೆ ಹೈದರಾಬಾದ್-ಬೆಂಗಳೂರು ಹೆದ್ದಾರಿಯ ಚಿನ್ನ ಟೆಕುರು ಗ್ರಾಮದ ಬಳಿ ಸಂಭವಿಸಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಬಸ್‌ನಲ್ಲಿ ಒಟ್ಟು 42 ಮಂದಿ ಪ್ರಯಾಣಿಕರಿದ್ದು, 12 ಮಂದಿ ಎಮೆರ್ಜೆನ್ಸಿ ಎಕ್ಸಿಟ್‌ ವಿಂಡೋ(ತುರ್ತು ನಿರ್ಗಮನ ದ್ವಾರ) ಮೂಲಕ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಬೈಕ್‌ಗೆ ಢಿಕ್ಕಿಯಾಗುತ್ತಿದ್ದಂತೆ ಬಸ್‌ ಅಲ್ಲೇ ನಿಲ್ಲುತ್ತಿದ್ದರೆ ಇಂಥದೊಂದು ದುರಂತ ಸಂಭವಿಸುತ್ತಿರಲಿಲ್ಲ ಎನ್ನಲಾಗಿದೆ. ಬಸ್​ಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ? ಆರಂಭದಲ್ಲಿ ಬಸ್…

Read More