admin

ಸಿಡಿಲು ಬಡಿದು ಹಾನಿಯಾದ ಮನೆಗೆ ಶೀಘ್ರವೇ ಸ್ಪಂದಿಸಿ ಸಹಕರಿಸಿದ ಕಾಂತಾವರ ಕುಲಾಲ ಸಂಘ

ಕಾಂತಾವರ ಗ್ರಾಮದ ಬೇಲಾಡಿ ಕಂಬಳಗುಡ್ಡೆ ಜಲಜ ಮೂಲ್ಯ ಇವರ ಮನೆಗೆ ಅ. 21 ರಂದು ಸಿಡಿಲು ಬಡಿದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು ವಿದ್ಯುತ್ ಸಂಪರ್ಕ ಸಂಪೂರ್ಣ ಕಳಚಿ ಹೋಗಿದ್ದು ಗೋಡೆಗಳು ಕುಸಿದಿತ್ತು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರಭಾಕರ್ ಕುಲಾಲ್ ಮತ್ತು ಸ್ಥಳೀಯ ಪಂಚಾಯತ್ ಸದಸ್ಯರ ಸೂಚನೆ ಮೇರೆಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಲೆಕ್ಕಾಧಿಕಾರಿಯವರು ಭೇಟಿ ನೀಡಿ ಪರಿಹಾರಕ್ಕೆ ಕ್ರಮ ಕೈಗೊಂಡಿರುತ್ತಾರೆ. ಅಸಹಾಯಕ ಸ್ಥಿತಿಯಲ್ಲಿದ್ದ ಕುಟುಂಬದ ಮನೆಗೆ ಭೇಟಿ ನೀಡಿದ ಕಾಂತಾವರ ಕುಲಾಲ ಸಂಘದ ಅಧ್ಯಕ್ಷರಾದ…

Read More

ಕುಂಬಳೆ: 300 ಮಂದಿ ಕಾರ್ಮಿಕರು ಕಾರ್ಯ ನಿರತರಾಗಿದ್ದ ಪ್ಯಾಕ್ಟರಿಯಲ್ಲಿ ಭಾರೀ ಪ್ರಮಾಣ ಸ್ಫೋಟ..!!

ಕುಂಬಳೆ : ಅನಂತಪುರ ಪ್ಲೈವುಡ್ ಪ್ಯಾಕ್ಟರಿಯೊಂದರಲ್ಲಿ ಬಾಯ್ಲಾರ್  ಸ್ಪೋಟವಾಗಿ ಓರ್ವ ಮೃತಪಟ್ಟು ಹಲವರಿಗೆ ಗಾಯಗಳಾಗಿದೆ ಎಂದು ಪ್ರಾಥಮಿಕ ವರದಿ. ಇಂದು (ಸೋಮವಾರ) ಸುಮಾರು ಗಂಟೆ  7ರಿಂದ 7.30ರೊಳಗೆ  ನಡೆದ ದುರ್ಘಟನೆಯಲ್ಲಿ ಅನ್ಯರಾಜ್ಯ ಕಾರ್ಮಿಕನಾದ  ಓರ್ವ ಮೃತಪಟ್ಟಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ.   ಅನಂತಪುರ ಬಳಿಯ ಕಣ್ಣೂರು ಕುನ್ನಿಲ್ ಸಮೀಪದ ಡೆಕ್ಕೂರು  ಪ್ಲೈವುಡ್ ಫ್ಯಾಕ್ಟರಿಯಲ್ಲಿನ ಬಾಯ್ಲರ್ ಸ್ಪೋಟಗೊಂಡಿದ್ದು ವಿವಿದೆಡೆ ಬೆಂಕಿ ಹತ್ತಿಕೊಂಡಿದೆ. 300 ರಷ್ಟು ಕಾರ್ಮಿಕರು ಸ್ಪೋಟ ವೇಳೆ ಸ್ಥಳದಲ್ಲಿದ್ದರು. ಇಲ್ಲಿನ  ಪೆರಾಲ್ ಕಣ್ಣೂರು,ಸಿದ್ದಿಬಯಲು ಸಮೀಪದವರೆಗೆ ಇದರ ಅಪಾಯ ಸಂಭವಿಸಿದೆ‌. ಈ…

Read More

ಧರ್ಮಸ್ಥಳ ಪ್ರಕರಣ: ಅಕ್ಟೋಬರ್ ಅಂತ್ಯದೊಳಗೆ ಅಂತಿಮ ವರದಿ ಸಲ್ಲಿಸುವಂತೆ ‘SIT’ಗೆ ಗೃಹ ಸಚಿವ ಪರಮೇಶ್ವರ್ ಸೂಚನೆ

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಕ್ಟೋಬರ್ 31ರ ಒಳಗೆ ಧರ್ಮಸ್ಥಳ ಪ್ರಕರಣ ಸಂಪೂರ್ಣಗೊಳ್ಳುತ್ತದೆ. ಬೆಂಗಳೂರಿನಲ್ಲಿ ಈ ವಿಚಾರವಾಗಿ ಜಿ ಪರಮೇಶ್ವರ್ ಮಹತ್ವದ ಸುಳಿವು ನೀಡಿದ್ದು, ಅಕ್ಟೋಬರ್ 31ರ ಒಳಗಾಗಿ ಸೊಸೈಟಿ ಅಧಿಕಾರಿಗಳು ಧರ್ಮಸ್ಥಳ ಪ್ರಕರಣದ ಕುರಿತು ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು. ಧರ್ಮಸ್ಥಳ ವಿರುದ್ಧ ರೂಪಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಅಕ್ಟೋಬರ್ ನಲ್ಲಿ ಎಸ್ಐಟಿ ವರದಿ ನೀಡುವುದಾಗಿ ಹೇಳಿದೆ ಅಕ್ಟೋಬರ್ 31ರ ಒಳಗೆ ತನಿಖಾ ವರದಿ ಕೊಡಬಹುದು ಒಂದೆರಡು ದಿನ ಹಿಂದೆ ಮುಂದೆ ಆಗಬಹುದು ಅಷ್ಟೇ ಎಲ್ಲವನ್ನು ಸೇರಿಸಿ ಕೊಡಲು…

Read More

ಮೊಂಥಾ ಚಂಡಮಾರುತ: ಅ. 31ರವರೆಗೂ ಭಾರೀ ಮಳೆ- ಹವಾಮಾನ ಇಲಾಖೆ ಎಚ್ಚರಿಕೆ

ಮೊಂಥಾ ಚಂಡಮಾರುತದ ಪರಿಣಾಮ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.  ಮಂಗಳವಾರ ಸಂಜೆ ಅಥವಾ ರಾತ್ರಿ ಆಂಧ್ರದ ಕರಾವಳಿ ಭಾಗಕ್ಕೆ ಮೊಂಥಾ ಚಂಡಮಾರುತ ಅಪ್ಪಳಿಸಲಿದೆ. ಪರಿಣಾಮ ಎರಡು ದಿನಗಳ ಕಾಲ ರಾಜ್ಯದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಲಬುರಗಿ, ಕೊಪ್ಪಳ, ಬಾಗಲಕೋಟೆ, ಗದಗ, ಬೀದರ್, ಬೆಂಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಸೇರಿದಂತೆ ಅನೇಕ ಜಿಲ್ಲೆಗಳಿಗೆ ಎರಡು ದಿನ…

Read More

IMA ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು

ಗಂಗಾವತಿಯಲ್ಲಿ ಶನಿವಾರ ಜರಗಿದ 91ನೇ ಐಎಂಎ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ರಾಷ್ಟ್ರ ಅಧ್ಯಕ್ಷರಾಗಿ ಡಾ. ಭಾನುಶಾಲಿ, ರಾಷ್ಟ್ರ ಉಪಾಧ್ಯಕ್ಷರಾಗಿ ಡಾ.ಬಿದ್ದಾಳ್, ರಾಜ್ಯ ನಿರ್ಗಮನ ಹಾಗೂ ಆಗಮನ ಅಧ್ಯಕ್ಷರುಗಳಾದ ಡಾ.ಚಿನಿವಾಳ‌, ಡಾ.ವೀರಭದ್ರಯ್ಯ ಹಾಗೂ ಇನ್ನಿತರ ಹಿರಿಯ ರಾಷ್ಟ್ರ ಹಾಗೂ ರಾಜ್ಯ ನಾಯಕರುಗಳು ಉಪಸ್ಥಿತರಿದ್ದು ಪ್ರತಿಜ್ಞಾ ವಿಧಿ ಭೋದಿಸಿದರು. ಕರಾವಳಿ ಮಲೆನಾಡು ಹಾಗೂ ಮೈಸೂರು ವಿಭಾಗದಲ್ಲಿ ಪರಿಣಾಮಕಾರಿ ಸಂಘಟನಾ ಸೇವೆ ಸಲ್ಲಿಸಿದ ಡಾ.ಕುಲಾಲ್ ಅವರಿಗೆ ಬೆಳಗಾವಿ ವಿಭಾಗದ…

Read More

ಸಬ್ಸಿಡಿ ಲೋನ್‌ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚನೆ: ಮಹಿಳೆ ಬಂಧನ

ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಲ್ಲಿ ಸಬ್ಸಿಡಿ ಸಾಲ ತೆಗೆಸಿ ಕೊಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮೋಸಕ್ಕೆ ಬಲಿಯಾದವರು ಉಡುಪಿ ನಗರ ಮತ್ತು ಬ್ರಹ್ಮಾವರ ಠಾಣೆಗಳಲ್ಲಿ ದೂರು ದಾಖಲಿಸಿದ್ದು , ವಂಚನೆ ಜಾಲ ಬೆನ್ನತ್ತಿರುವ ಪೊಲೀಸರು ಕಾರ್ಯಾಚರಣೆ ನಡೆಸಿ ವಂಚನೆ ಜಾಲದ ಕಿಂಗ್ ಪಿನ್ ಬ್ರಹ್ಮಾವರ ತಾಲ್ಲೂಕು ಆರೂರು ಗ್ರಾಮ ಕೌಸಲ್ಯಾ ಎಂಬ ಮಹಿಳೆಯನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಈ ವಂಚನೆ ಜಾಲದ ಕೊಕ್ಕರ್ಣೆ…

Read More

1650 ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಪ್ರಕ್ರಿಯೆ ಆರಂಭ

ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, 1650 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಮಹತ್ವದ ಆದೇಶ ಹೊರಡಿಸಿದೆ. ಪೊಲೀಸ್‌ ಇಲಾಖೆಯ ಸಶಸ್ತ್ರ ಪೊಲೀಸ್‌ ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಉಳಿದಿರುವ 1,650 ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಮೀಸಲಾತಿ ಅನ್ವಯ ಹುದ್ದೆಗಳನ್ನು ಮರು ಹಂಚಿಕೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ. ಕಲ್ಯಾಣ ಕರ್ನಾಟಕದ 179, ಸಾಮಾನ್ಯ ವೃಂದದ ಜಿಲ್ಲೆಗಳಿಗೆ…

Read More

ಇನ್ಮುಂದೆ ‘KSRTC ಬಸ್ಸು’ಗಳಲ್ಲಿ ಈ ವಸ್ತುಗಳನ್ನು ಕೊಂಡೊಯ್ಯುವುದು ನಿಷೇಧ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಬಳಿಯಲ್ಲಿ ಖಾಸಗಿ ಬಸ್ ಅಪಘಾತದ ನಂತ್ರ ಬೆಂಕಿ ಹೊತ್ತಿಕೊಂಡು, 20 ಮಂದಿ ಸಜೀವ ದಹನವಾಗಿದ್ದರು. ಈ ದುರಂತದ ಬೆನ್ನಲ್ಲೇ ಕೆ ಎಸ್ ಆರ್ ಟಿ ಸಿ ಪ್ರಯಾಣಿಕರ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ಸಾರಿಗೆ ಬಸ್ಸುಗಳಲ್ಲಿ ಸ್ಪೋಟಗೊಳ್ಳುವಂತ ವಸ್ತುಗಳನ್ನು ಪ್ರಯಾಣಿಕರು ಕೊಂಡೊಯ್ಯೋದಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ ಸುರಕ್ಷತೆಯ ದೃಷ್ಠಿಯಿಂದ ಪ್ರಯಾಣಿಕರ ಪ್ರತಿ ಬ್ಯಾಗ್ ಚೆಕ್ ಮಾಡುವಂತೆಯೂ ರಾಜ್ಯ ಸರ್ಕಾರ ಸೂಚಿಸಿದೆ. ಈ ಕುರಿತಂತೆ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ…

Read More

ಹೋಂ ಸ್ಟೇ ಸ್ನಾನಗೃಹದಲ್ಲಿ ಯುವತಿ ಅನುಮಾನಾಸ್ಪದ ಸಾವು

ಚಿಕ್ಕಮಗಳೂರು: ಹೋಂ ಸ್ಟೇ ಸ್ನಾದ ಗೃಹದಲ್ಲಿ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳುರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿರುವ ಹಿಪ್ಲ ಹೋಮ್ ಸ್ಟೇಯಲ್ಲಿ ನಡೆದಿದೆ.   ದೇವಲಾಪುರ ಗ್ರಾಮದ ರಂಜಿತಾ (27) ಮೃತ ಯುವತಿ. ರಂಜಿತಾ ಹಾಗೂ ರೇಖಾ ಎಂಬ ಯುವತಿಯರು ಸ್ನೇಹಿತೆಯ ಎಂಗೇಜ್ ಮೆಂಟ್ ಗೆಂದು ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಬಂದಿದ್ದರು. ಮೃತ ರಂಜಿತಾ ಚಿಕ್ಕಮಗಳೂರಿನ ದೇವಲಾಪುರ ಮೂಲದವರು. ರಂಜಿತಾ ಹಾಗೂ ರೇಖಾ ಬೆಂಗಳೂರುನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರು.   ಎರಡು…

Read More

ಧರ್ಮಸ್ಥಳ ಪ್ರಕರಣ: ತಿಮರೋಡಿ ಸಹಿತ ನಾಲ್ಕು ಮಂದಿಗೆ ನೋಟೀಸ್

ಧರ್ಮಸ್ಥಳದಲ್ಲಿ ಸರಣಿ ಶವ ಹೂತಿರುವ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ತಂಡವು ಮಹೇಶ್ ಶೆಟ್ಟಿ ತಿಮರೋಡಿ ಸಹಿತ ನಾಲ್ಕು ಮಂದಿಗೆ ನೋಟೀಸ್ ನೀಡಿದೆ.  ಅ. 27ರಂದು ವಿಚಾರಣೆಗೆ ಹಾಜರಾಗುವಂತೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಹಾಗೂ ಸೌಜನ್ಯ ಮಾವ ವಿಠಲ ಗೌಡ ಎಂಬವರಿಗೆ ನೋಟೀಸ್ ಜಾರಿ ಮಾಡಿದೆ. ಈ ನಡುವೆ ಅ. 25ರಂದು ಎಸ್‌ಐಟಿ ಮುಖ್ಯಸ್ಥಪ್ರಣಬ್ ಮೊಹಾಂತಿ ಅವರು ಬೆಳ್ತಂಗಡಿ ಕಚೇರಿಗೆ ಆಗಮಿಸಿ, ತನಿಖೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. 

Read More