ಪುತ್ತೂರು : ಹೆಲ್ಮೆಟ್ ಇಲ್ಲದೆ ರಾಂಗ್ ಸೈಡ್ ನಲ್ಲಿ ವಿದ್ಯಾರ್ಥಿಗಳ ತ್ರಿಬಲ್ ರೈಡ್ : ಕಾರುಗಳಿಗೆ ಡಿಕ್ಕಿ!
ಪುತ್ತೂರು : ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ದ್ವಿಚಕ್ರ ವಾಹನದಲ್ಲಿ ರಾಂಗ್ ಸೈಡ್ ನಿಂದ ಬಂದು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ದರ್ಬೆ ಸಮೀಪ ನಡೆದಿದೆ. ಆಕ್ಟಿವಾದಲ್ಲಿ ಮೂವರು ವಿದ್ಯಾರ್ಥಿಗಳು ಹೆಲ್ಮೆಟ್ ಕೂಡ ಧರಿಸದೆ ರಾಂಗ್ ಸೈಡ್ ನಿಂದ ಬಂದಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ವರದಿಯಾಗಿದೆ. ಘಟನೆಯಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

