ಇಂದು ಮಂಗಳೂರಿನ ಪುರಭವನದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ‘ಪಂಚಮ ವಾರ್ಷಿಕ ಸಂಭ್ರಮ’
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಇದರ ಮಂಗಳೂರು ನಗರ ಘಟಕದ ‘ಪಂಚಮ ವಾರ್ಷಿಕ ಸಂಭ್ರಮ’ವು ಇಂದು (ದಿನಾಂಕ 23-05-2024) ರಂದು ಸಂಜೆ ಗಂಟೆ 3-00ರಿಂದ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಸಂಜೆ ಗಂಟೆ 3-00ರಿಂದ ‘ಯಕ್ಷ ಹಾಸ್ಯ ವೈಭವ’ದಲ್ಲಿ ಭಾಗವತರಾಗಿ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ, ಮದ್ದಳೆ – ಶ್ರೀ ಗುರುಪ್ರಸಾದ್ ಬೊಳಿಂಜಡ್ಕ, ಚಂಡೆ – ಶ್ರೀ ಪ್ರಶಾಂತ್ ವಗೆನಾಡು, ಚಕ್ರತಾಳ – ಪೂರ್ಣೇಶ್ ಆಚಾರ್ಯ ಮತ್ತು ಮುಮ್ಮೇಳದಲ್ಲಿ ದಿನೇಶ್ ಶೆಟ್ಟಿಗಾರ್ ಕೋಡಪದವು, ದಿನೇಶ್ ರೈ…

