ಸಹಕಾರಿ ಸಂಘದಲ್ಲಿ 1.70 ಕೋಟಿ ರೂ. ವಂಚನೆ..! ಪರಾರಿಯಾಗಿದ್ದ ಸುರೇಶ್ ಭಟ್ ಅರೆಸ್ಟ್
ಶಿರಿಯಾರ ಸೇವಾ ಸಹಕಾರಿ ಸಂಘ, ಕಾವಡಿ ಶಾಖೆಯಲ್ಲಿ ನಡೆದ 1 ಕೋಟಿಯ 70 ಲಕ್ಷ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಕೋಟಾ ಪೊಲೀಸರ ಬಲೆಗೆ ಸಿಕ್ಕಿದ್ದಾನೆ. ಕೋಟ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 205/2025, ಬಿ.ಎನ್.ಎಸ್.–2023ರ ಕಲಂ 318(3)(4), 112 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಘದ ಮ್ಯಾನೇಜರ್ ಸುರೇಶ್ ಭಟ್ (38) ಹಾಗೂ ಕಿರಿಯ ಗುಮಾಸ್ತ ಹರೀಶ್ ಕುಲಾಲ್ ವಿರುದ್ಧ ವಂಚನೆ ಆರೋಪ ಹೊರಿಸಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆಯೇ ಇಬ್ಬರೂ ತಲೆಮರೆಸಿಕೊಂಡಿದ್ದರು. ಪರಾರಿಯಾಗಿದ್ದ ಸುರೇಶ್…

