admin

ಕಾರ್ಕಳದ ಪಳ್ಳಿ ಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! : ಟಿಪ್ಪರ್ -ಬೈಕ್ ಮುಖಾಮುಖಿ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು: ಇಬ್ಬರು ಗಂಭೀರ

ಕಾರ್ಕಳ: ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು,ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಸೋಮವಾರ ಬೆಳ್ಳಂಬೆಳಗ್ಗೆ ಪಳ್ಳಿ ಗರಡಿ ಸಮೀಪ ಈ ಭೀಕರ ಅಪಘಾತ ಸಂಭವಿಸಿದ್ದು, ನೇಪಾಳ ಮೂಲದ ಕಮಲ್ ಮೃತಪಟ್ಟ ಬೈಕ್ ಸವಾರ. ಗಾಯಾಳುಗಳು ನೇಪಾಳ ಮೂಲದ ಪ್ರಸನ್ನ (26) ಹಾಗೂ ಬಚ್ಚನ್ ಡಿಸೋಜ(26) ಎಂದು ಗುರುತಿಸಲಾಗಿದೆ. ಟಿಪ್ಪರ್ ಲಾರಿ ಕ್ರಶರ್ ನಿಂದ ಜಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದು,ಗರಡಿ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.ಟಿಪ್ಪರ್ ಚಾಲಕನ ಮಿತಿಮೀರಿದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕಾರ್ಕಳ…

Read More

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಾಭ ಹೆಚ್ಚಳ: ಶೇ.15 ಲಾಭಾಂಶ ವಿತರಣೆಗೆ ಮಂಡಳಿ ಶಿಫಾರಸು

ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿ. ತನ್ನ ಕಳೆದ ಹಣಕಾಸು ವರ್ಷದ ಮತ್ತು ಮಾರ್ಚ್ 31, 2024ಕ್ಕೆ ಅಂತ್ಯಗೊಂಡ 4ನೇ ತ್ರೈಮಾಸಿಕ ಅವಧಿಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಬ್ಯಾಂಕ್ ಮಾರ್ಚ್ 31ಕ್ಕೆ ಕೊನೆಯಾದ ತ್ರೈಮಾಸಿಕ ಅವಧಿಯಲ್ಲಿ 6,681 ಕೋಟಿ ರೂ. ಸಾಲವನ್ನು ವಿತರಿಸಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಾಲ ವಿತರಣೆಯಲ್ಲಿ ಶೇ.11ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಅದೇ ರೀತಿ, 2023-2024ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ಒಟ್ಟಾರೆ 23,389 ಕೋಟಿ ರೂ. ಸಾಲ ವಿತರಿಸಿದ್ದು,…

Read More

ಶ್ರೀ ರಕ್ತೇಶ್ವರಿ ಯುವಕ ಸಂಘ ನೇರಂಬೋಳು ಇದರ ವತಿಯಿಂದ ಪುಸ್ತಕ ವಿತರಣೆ

ಶ್ರೀ ರಕ್ತೇಶ್ವರಿ ಯುವಕ ಸಂಘ ನೇರಂಬೋಳು ಇದರ ವತಿಯಿಂದ ತಾರೀಕು 19/ 5/ 2024 ರಂದು ಪುಸ್ತಕ ವಿತರಣೆ ಕಾರ್ಯಕ್ರಮವು ಸಂಘದ ಸಭಾಂಗಣದಲ್ಲಿ ನಡೆಯಿತು. ಸ್ಥಳೀಯರಾದ ರಾಜೀವ ಸಾಲಿಯಾನ್ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷರಾದ ಹರೀಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಮನೋಹರ್ ಕುಲಾಲ್ ನೆರಂಬೋಳು ನಿಕಟ ಪೂರ್ವ ಅಧ್ಯಕ್ಷರಾದ ಹರಿಶ್ಚಂದ್ರ ಪೂಜಾರಿ ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ್ ಪೂಜಾರಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 73 ಮಂದಿಗೆ ಪುಸ್ತಕ ವಿತರಣೆ…

Read More

ಸಿಎಂ ಸಿದ್ಧರಾಮಯ್ಯ ಕೊಲೆಗಡುಕರಿಗೆ ಧನ್ಯವಾದ ಹೇಳಿದ್ದಾ?: ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ

ಬೆಂಗಳೂರು: ಮುಖ್ಯಮಂತ್ರಿಗಳು ಕೊಲೆಗಡುಕರಿಗೆ ಧನ್ಯವಾದ ಹೇಳಿದ್ದಾರಾ? ತಮ್ಮ ಸರಕಾರದ ಅವಧಿ ಮುಗಿದುದಕ್ಕೆ ಬೈಬೈ- ಗುಡ್ ಬೈ ಎಂದು ಧನ್ಯವಾದ ಹೇಳಿದ್ದಾರೋ ಅರ್ಥ ಆಗಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರ ಮುಖದ ಕಳೆ ನೋಡಿದರೆ ಅವರು ಸರಕಾರದ ಕೊನೆ ಅವಧಿ ಎದುರಿಸುತ್ತಿರುವಂತಿತ್ತು ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ ಸರಕಾರದ ಒಂದು ವರ್ಷ ಕೊಲೆಗಡುಕರಿಗೆ ಹರ್ಷ. ಒನ್ ಇಯರ್ ಖಜಾನೆ…

Read More

Byju’s crisis : ರಜನೀಶ್ ಕುಮಾರ್, ಟಿವಿ ಮೋಹನ್‌ದಾಸ್ ಪೈ ಸಲಹಾ ಸಮಿತಿಯಿಂದ ಕೆಳಗಿಳಿಯಲಿದ್ದಾರೆ : ವರದಿ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಮುಖ್ಯಸ್ಥ ರಜನೀಶ್ ಕುಮಾರ್ ಮತ್ತು ಇನ್ಫೋಸಿಸ್ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಟಿವಿ ಮೋಹನ್ದಾಸ್ ಪೈ ಅವರು ಎಡ್ಟೆಕ್ ಸಂಸ್ಥೆ ಬೈಜುಸ್ ಸಲಹಾ ಸಮಿತಿಯ ಭಾಗವಾಗಲು ತಮ್ಮ ಒಪ್ಪಂದಗಳನ್ನು ನವೀಕರಿಸದಿರಲು ನಿರ್ಧರಿಸಿದ್ದಾರೆ. ಕುಮಾರ್ ಮತ್ತು ಪೈ ಅವರ ಒಂದು ವರ್ಷದ ಅಧಿಕಾರಾವಧಿ ಜೂನ್ 30 ರಂದು ಕೊನೆಗೊಳ್ಳುತ್ತದೆ, ನಂತರ ಅವರು ಸಲಹಾ ಸಮಿತಿಯಿಂದ ನಿರ್ಗಮಿಸಲು ಬಯಸಿದ್ದಾರೆ ಎಂದು ವರದಿಯಾಗಿದೆ. ರಜನೀಶ್ ಕುಮಾರ್ ಮತ್ತು ಟಿವಿ ಮೋಹನ್ ದಾಸ್ ಪೈ…

Read More

ಕುಲಾಲ ಸಂಘ (ರಿ.) ಕೊಲ್ಯ: ಕುಲಾಲ ಕ್ರೀಡೋತ್ಸವ -2024

ಕುಲಾಲ ಸಂಘ (ರಿ.) ಕೊಲ್ಯ, ಸೇವಾ ದಳ ಮತ್ತು ಮಹಿಳಾ ಘಟಕ ಕೊಲ್ಯ ಇದರ ಸಹಯೋಗದೊಂದಿಗೆ ಸಂಘದ ವ್ಯಾಪ್ತಿಗೆ ಒಳಪಟ್ಟ 14 ಗ್ರಾಮದ ಸಮಾಜ ಬಾಂಧವರಿಗಾಗಿ ಕುಲಾಲ ಕ್ರೀಡೋತ್ಸವ -2024 ಕಾರ್ಯಕ್ರಮವು ದಿನಾಂಕ ಮೇ19 ರಂದು ಅದ್ದೂರಿಯಾಗಿ ನಡೆಯಿತು.ಒಳಾಂಗಣ ಕ್ರೀಡಾಂಗಣದ ಉದ್ಘಾಟನೆಯನ್ನು ಶ್ರೀಮತಿ ಆಶಾಲತಾ ಅನಿಲ್ ದಾಸ್ ಅಂಬಿಕಾರೋಡ್ ನೇರವೆರಿಸಿದರು. ದಿನಾಂಕ ಮೇ 26 ರಂದು ಶ್ರೀ ರಾಮ ಫ್ರೆಂಡ್ಸ್ ಕ್ರೀಡಾಂಗಣ ಕೊಲ್ಯ ಇಲ್ಲಿ ಹೊರಾಂಗಣ ಕ್ರೀಡಾಕೂಟ ನಡೆಯಲಿದೆ.

Read More

BREAKING : ಮಾಜಿ ಸಚಿವ ಹೆಚ್.ಡಿ. ರೇವಣ್ಣಗೆ ಬಿಗ್‌ ರಿಲೀಫ್‌ : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ʻಜಾಮೀನು ಮಂಜೂರುʼ

ಬೆಂಗಳೂರು : ಹೊಳೆನರಸೀಪರುದಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂದ ಮಾಜಿ ಸಚಿವ ಹೆಚ್.ಡಿ. ರೇವಣ್ಣಗೆ ಜನಪ್ರತಿನಿಧಿಗಳ ವಿಶೇ಼ಷ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲಿ ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ನಡೆದಿದ್ದು, ರೇವಣ್ಣಗೆ ಜಾಮೀನು ಮಂಜೂರು ಮಾಡಿ ಕೋರ್ಟ್‌ ಆದೇಶ ಹೊರಡಿಸಿದೆ. ಜಾಮೀನು ಅರ್ಜಿ ಸಂಬಂಧ ವಿಶೇಷ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿದ್ದು, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತ್ತು. ಇಂದು ಕೋರ್ಟ್‌ ಷರತ್ತುಬದ್ದ…

Read More

ಬಂಟ್ವಾಳ: ಖೋಟಾ ನೋಟು ವಿನಿಮಯ : ಕೇರಳ ಮೂಲದ ಇಬ್ಬರು ಅಂದರ್..!

ಬಂಟ್ವಾಳ : ಖೋಟಾ ನೋಟುಗಳನ್ನು ವಿನಿಮಯ ಮಾಡಲು ಬಂದಿದ್ದ ಕೇರಳ ಮೂಲದ ತಂಡವನ್ನು ಭೇದಿಸಿದ್ದ ಬಂಟ್ವಾಳ ನಗರ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಳಿಕ ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ ಕೇರಳದಲ್ಲಿ ಸ್ವಾಧೀನದಲ್ಲಿಟ್ಟು ಕೊಂಡಿದ್ದ ಒಟ್ಟು 506 ನೋಟುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೇ 10 ರಂದು ಬಿ.ಸಿ.ರೋಡಿನಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀಡಿದ ಮಾಹಿತಿಯಂತೆ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೋಲೀಸ್ ನಿರೀಕ್ಷಕ ಆನಂತಪದ್ಮನಾಭ ನೇತೃತ್ವದ ಪೋಲೀಸರ…

Read More

ಕಾಂಗ್ರೆಸ್ ಸರ್ಕಾರದ ವರ್ಷದ ಶೂನ್ಯ ಸಾಧನೆ, ಕನ್ನಡಿಗರಿಗೆ ವೇದನೆ – ಬಿಜೆಪಿ ಟ್ವೀಟ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿಕಗಕೆ ಬಂದು ಇಂದಿಗೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ‌ ಸರ್ಕಾರ ವರ್ಷಾಚರಣೆಯನ್ನು ಸದ್ಯಕ್ಕೆ ಮುಂದೂಡಿದ್ದರೂ ಕೂಡ ಸುಮ್ಮನಿರದ ಪ್ರತಿಪಕ್ಷ ಬಿಜೆಪಿ, ಕಾಂಗ್ರೆಸ್ ಪಕ್ಷದ ಒಂದ ವರ್ಷದ ಸಾಧನೆ ಬರೀ ಶೂನ್ಯ ಎಂದು ಟೀಕಿಸಿದೆ. ಈ ಸಂಬಂಧ ಸುದ್ದಿಗಳ ಕಟ್ಟಿಂಗ್ಸ್‌ ಜೊತೆಗೆ ಸಿಎಂ ಸಿದ್ದರಾಮಯ್ಯ ಭಾವಚಿತ್ರವಿರುವ ಅವರ ಫೋಟೋವನ್ನು ಬಿಜೆಪಿ ತನ್ನ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಜೊತೆಗೆ, ‘ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಶೂನ್ಯ ಸಾಧನೆ, ಕನ್ನಡಿಗರಿಗೆ ವೇದನೆ…’…

Read More

ವಾಹನ ಸವಾರರೇ ಗಮನಿಸಿ : ʻಮೇ.31 ರೊಳಗೆ ʻHSRPʼ ನಂಬರ್‌ ಪ್ಲೇಟ್‌ ಹಾಕಿಸದಿದ್ರೆ ದಂಡ ಬೀಳುತ್ತೆ ಹುಷಾರು

ಕರ್ನಾಟಕ ಸಾರಿಗೆ ಇಲಾಖೆಯು ರಾಜ್ಯದಲ್ಲಿ ಎಲ್ಲ ವಾಹನಗಳಿಗೂ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳು (HSRP) ಅಳವಡಿಕೆಗೆ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಈಗಾಗಲೇ 3 ಬಾರಿ ಅವಧಿ ವಿಸ್ತರಣೆ ಮಾಡಿ ಮೇ 31ಕ್ಕೆ ಗಡುವು ವಿಸ್ತರಿಸಿದೆ. 2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ನಲ್ಲಿ ಅಧಿಸೂಚನೆ ಹೊರಡಿಸಿತ್ತು. ರಾಜ್ಯದಲ್ಲಿ ಸುಮಾರು ಎರಡು ಕೋಟಿ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಗತ್ಯವಿದೆ…

Read More