admin

ಇನ್ಮುಂದೆ ‘ವಕೀಲ’ರ ಮೇಲೆ ಹಲ್ಲೆ ಮಾಡಿದ್ರೆ ‘ಜೈಲು ಶಿಕ್ಷೆ’ ಫಿಕ್ಸ್

ಬೆಂಗಳೂರು: ರಾಜ್ಯ ಸರ್ಕಾರದಿಂದ ವಕೀಲರಿಗೆ ಭದ್ರತೆ ನೀಡುವ ಸಂಬಂಧ ಮಹತ್ವದ ಕ್ರಮ ವಹಿಸಿದೆ. ಇದಕ್ಕಾಗಿ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ-2023 ಜಾರಿಗೊಳಿಸಿದೆ. ಒಂದು ವೇಳೆ ವಕೀಲರ ಮೇಲೆ ಹಲ್ಲೆ ಮಾಡಿದ್ರೆ ಈ ನಿಯಮದಡಿ ಜೈಲು ಶಿಕ್ಷೆ ಫಿಕ್ಸ್ ಆಗಿದೆ. ಹೌದು. ರಾಜ್ಯದಲ್ಲಿ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ – 2023 ಜಾರಿ ಮಾಡಲಾಗಿದೆ. ಈ ನಿಯಮವನ್ನು ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಜಾರಿಗೊಳಿಸಿದೆ. ಈ ನಿಯಮದಂತೆ ಕರ್ತವ್ಯದ ವೇಳೆ ವೃತ್ತಿಪರ ವಕೀಲರ ಮೇಲೆ…

Read More

ಸೆ.14ರವರೆಗೆ ‘ಉಚಿತ ಆಧಾರ್’ ನವೀಕರಣದ ಗಡುವು ವಿಸ್ತರಿಸಿದ ‘UIDAI’

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India -UIDAI) ಆಧಾರ್ ಕಾರ್ಡ್ ( Aadhaar card ) ವಿವರಗಳನ್ನು ಉಚಿತವಾಗಿ ನವೀಕರಿಸುವ ಗಡುವನ್ನು ಮತ್ತೊಂದು ವಿಸ್ತರಣೆಯನ್ನು ಘೋಷಿಸಿದೆ. ಯುಐಡಿಎಐ ಪ್ರಕಾರ, ಯುಐಡಿ ಹೊಂದಿರುವವರು ತಮ್ಮ ಆಧಾರ್ ಕಾರ್ಡ್ ನವೀಕರಣಗಳನ್ನು ಶುಲ್ಕವಿಲ್ಲದೆ ಪೂರ್ಣಗೊಳಿಸಲು ಸೆಪ್ಟೆಂಬರ್ 14 ರವರೆಗೆ ಅವಕಾಶವಿದೆ. ಮೈ ಆಧಾರ್ ಪೋರ್ಟಲ್ನಲ್ಲಿ ಆಧಾರ್ ಕಾರ್ಡ್ ನವೀಕರಣ ಉಚಿತವಾಗಿದ್ದರೂ, ಆಫ್ಲೈನ್ ನವೀಕರಣಗಳಿಗೆ 50 ರೂ. ಸೆಪ್ಟೆಂಬರ್ 14 ರವರೆಗೆ, ಹೆಸರು, ವಿಳಾಸ, ಫೋಟೋ…

Read More

ತಿರುಪತಿ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು, ಇಲ್ಲಿ ‘ಓಂ ನಮೋ ವೆಂಕಟೇಶಾಯ’ ಘೋಷಣೆ ಮಾತ್ರ ಕೇಳಿಬರಬೇಕು- ಚಂದ್ರಬಾಬು ನಾಯ್ಡು

ತಿರುಪತಿ ತಿರುಮಲ ದೇವಸ್ಥಾನ ಕೇವಲ ಹಿಂದೂಗಳಿಗೆ ಸೇರಿದ್ದು, ಇಲ್ಲಿ ‘ಓಂ ನಮೋ ವೆಂಕಟೇಶಾಯ’ ಘೋಷಣೆ ಮಾತ್ರ ಕೇಳಿಬರಬೇಕು ಎಂದು ಆಂಧ್ರ ಪ್ರದೇಶ ನೂತನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತಿರುಪತಿ-ತಿರುಮಲ ದೇಗುಲಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದ ಚಂದ್ರಬಾಬು ನಾಯ್ಡು ಅವರು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ದರ್ಶನದ ಬಳಿಕ ದೇಗುಲದ ಹೊರಗೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಬಾಬು ನಾಯ್ಡು ಅವರು, ಶ್ರೀ ವೆಂಕಟೇಶ್ವರಸ್ವಾಮಿಯ ಆಶೀರ್ವಾದದಿಂದ ನಾನು ಮತ್ತೆ ಸಿಎಂ…

Read More

ಆನ್ ಲೈನ್ ನಲ್ಲಿ ಆರ್ಡರ್‌ ಮಾಡಿದ ʻಐಸ್ ಕ್ರೀಮ್ʼ ನಲ್ಲಿ ಮನುಷ್ಯನ ಬೆರಳಿನ ತುಂಡು ಪತ್ತೆ..!

ಮುಂಬೈ : ಮುಂಬೈನ ಮಲಾಡ್ ಪ್ರದೇಶದಲ್ಲಿ ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಐಸ್ ಕ್ರೀಮ್ ಕೋನ್ ಒಳಗೆ ಮಾನವ ಬೆರಳಿನ ತುಂಡು ಪತ್ತೆಯಾಗಿದೆ. ಐಸ್ ಕ್ರೀಮ್ ಆರ್ಡರ್ ಮಾಡಿದ ಮಹಿಳಾ ಗ್ರಾಹಕ ಮಲಾಡ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಲಾಡ್ ಪೊಲೀಸರು ಯುಮ್ಮೋ ಐಸ್ ಕ್ರೀಮ್ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಐಸ್ ಕ್ರೀಮ್ ಅನ್ನು ತನಿಖೆಗೆ ಕಳುಹಿಸಿದ್ದಾರೆ. ಅಲ್ಲದೆ, ಐಸ್ ಕ್ರೀಮ್ನಲ್ಲಿ ಕಂಡುಬರುವ ಮಾನವ ಅಂಗವನ್ನು ಎಫ್‌ಎಸ್‌ಎಲ್ (ವಿಧಿವಿಜ್ಞಾನ) ಗೆ ಕಳುಹಿಸಲಾಗಿದೆ. ಮಾಹಿತಿಯ ಪ್ರಕಾರ, ಮಲಾಡ್ ನಿವಾಸಿ…

Read More

ಮಂಗಳೂರು: ಕರ್ನಾಟಕದಲ್ಲಿ ಭಾರತ್‌ ಮಾತಾ ಕೀ ಜೈ ಅಂದ್ರೆ ತಪ್ಪಾ?- ವಿಪಕ್ಷ ನಾಯಕ ಆರ್.ಅಶೋಕ್ 

ಕರ್ನಾಟಕದಲ್ಲಿ ಭಾರತ್‌ ಮಾತಾ ಕೀ ಜೈ, ಜೈ ಶ್ರೀರಾಮ್‌ ಎಂದರೆ ತಪ್ಪು. ಕಾಂಗ್ರೆಸ್‌ ಸರ್ಕಾರ ಗೂಂಡಾಗಳ ಕೈಗೆ ರಾಜ್ಯವನ್ನು ಕೊಟ್ಟಿದ್ದು, ಇಂತಹ ಘೋಷಣೆ ಕೂಗಿದರೆ ಚೂರಿ ಹಾಕುತ್ತಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಬೊಳಿಯಾರಿನಲ್ಲಿ ಭಾರತ ಮಾತೆಗೆ ಜೈಕಾರ ಕೂಗಿದ್ದಕ್ಕಾಗಿ ಮತಾಂಧರಿಂದ ಹಲ್ಲೆಗೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿಯ ಗಾಯಾಳು ಕಾರ್ಯಕರ್ತರನ್ನು ಆರ್‌.ಅಶೋಕ ಭೇಟಿ ಮಾಡಿ ಧೈರ್ಯ ಹೇಳಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ…

Read More

ಮಂಗಳೂರು:  ಬಿಜೆಪಿ ವಿಜಯೋತ್ಸವ ವೇಳೆ ಚೂರಿ ಇರಿತ – ಮತ್ತೆ 7 ಆರೋಪಿಗಳ ಬಂಧನ

ಮಂಗಳೂರು: ಬಿಜೆಪಿ ವಿಜಯೋತ್ಸವ ವೇಳೆ ಇಬ್ಬರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 7 ಆರೋಪಿಗಳನ್ನು ಕೊಣಾಜೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್, ಇರ್ಷಾದ್, ಶರ್ವಾನ್, ತಾಜುದ್ದೀನ್, ಮುಬಾರಕ್, ಅಶ್ರಫ್, ತಲ್ಲತ್ ಬಂಧಿತರು. ಆ ಮೂಲಕ ಚೂರಿ ಇರಿತ ಪ್ರಕರಣದಲ್ಲಿ ಇದುವರೆಗೆ 13 ಆರೋಪಿಗಳನ್ನು ಬಂಧಿಸಲಾಗಿದೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆ ಸಂಭ್ರಮಾಚರಣೆ ನಡೆದಿತ್ತು. ಅದೇ ರೀತಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರ್‌ನಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದ ಮೆರವಣಿಗೆ ನಡೆಸಿದ್ದರು. ಆದ್ರೆ…

Read More

ವಾಹನ ಸವಾರರಿಗೆ ಬಿಗ್‌ ರಿಲೀಫ್‌ : ‘HSRPʼ ನಂಬರ್ ಪ್ಲೇಟ್’ ಅಳವಡಿಕೆಗೆ ಗಡುವು ವಿಸ್ತರಣೆ..!

ಬೆಂಗಳೂರು: ವಾಹನ ಸವಾರರಿಗೆ ಹೈಕೋರ್ಟ್ ಬಿಗ್‌ ರಿಲೀಫ್‌ ನೀಡಿದ್ದು, ಸೆಪ್ಟೆಂಬರ್ ವರೆಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಿಸೋದಕ್ಕೆ ಅನುಮತಿ ನೀಡಿದೆ. ಹೀಗಾಗಿ ವಾಹನ ಸವಾರರು ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸೋದಕ್ಕೆ ಸೆಪ್ಟೆಂಬರ್ ವರೆಗೆ ಗಡುವು ವಿಸ್ತರಣೆಯಾದಂತೆ ಆಗಿದೆ. ಬಿಎನ್ ಡಿ ಎನರ್ಜಿ ಲಿಮಿಟೆಡ್ ಮತ್ತಿತರರು ಹೈಕೋರ್ಟ್ ಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆ ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು, ಮುಖ್ಯ…

Read More

‘ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತವಾದರೆ ಮಾಲೀಕರೇ ಪರಿಹಾರ ಪಾವತಿಸಬೇಕು’- ಹೈಕೋರ್ಟ್

ಬೆಂಗಳೂರು: ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿ ಅಪಘಾತ ಮಾಡಿದರೆ, ವಾಹನದ ಮಾಲೀಕರೇ ಸಂಬಂಧಪಟ್ಟವರಿಗೆ ಪರಿಹಾರದ ಮೊತ್ತವನ್ನು ಪಾವತಿಸಬೇಕು ಹೊರತಾಗಿ ವಿಮಾ ಕಂಪನಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ವಿಮಾ ಕಂಪನಿಯ ಮೇಲೆ ಹೊಣೆಗಾರಿಕೆ ವಹಿಸಿದ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಯ ತೀರ್ಪು ರದ್ದುಗೊಳಿಸಿದ ನ್ಯಾ. ಹಂಚಾಟೆ ಸಂಜೀವ್‌ಕುಮಾರ್ ಅವರು ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತವಾದರೆ ಮಾಲೀಕರೇ ಪರಿಹಾರ ಕೊಡಬೇಕು ಎಂದು ತೀರ್ಪು ನೀಡಿದ್ದಾರೆ. ಈ ಮೂಲಕ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ನ ಮೇಲ್ಮನವಿಯನ್ನು ಪುಸ್ಕರಿಸಲಾಗಿದೆ. ಅಪಘಾತದಿಂದ…

Read More

ಎಚ್ಚರ: ವಿದ್ಯಾರ್ಥಿಗಳ ಪೋಷಕರಿಗೆ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಕರೆ..! ಹಣಕ್ಕೆ ಬೇಡಿಕೆ

ಸುರತ್ಕಲ್: ಪೊಲೀಸ್ ಅಧಿಕಾರಿಗಳೆಂದು ಹೇಳಿ ವಿದ್ಯಾರ್ಥಿಗಳ ಹೆತ್ತವರಿಗೆಗೆ ಕರೆ ಮಾಡಿ ಹಣ ಪೀಕಿಸುವ ತಂಡದಿಂದ ಸುರತ್ಕಲ್‌ನಲ್ಲಿ ಹಲವರಿಗೆ ಕರೆ ಬಂದಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಿಮ್ಮ ಮಕ್ಕಳು (ಮಗ) ಸಿಕ್ಕಿ ಹಾಕಿಕೊಂಡಿದ್ದಾರೆ. ಅವರನ್ನು ಬಿಡುಗಡೆ ಮಾಡ ಬೇಕಾದರೆ 5 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಸುರತ್ಕಲ್‌ನ ವಿದ್ಯಾರ್ಥಿಗಳ ಕೆಲವು ಪೋಷಕರಿಗೆ ಈ ಕರೆ ಬಂದಿದ್ದು ಕೂಡಲೇ ಪೋಷಕರು ಕಾಲೇಜಿಗೆ ಕರೆ ಮಾಡಿ ತಮ್ಮ ಮಕ್ಕಳ ಬಗ್ಗೆ ವಿಚಾರಿಸಿದ್ದಾರೆ. ಆ ಸಂದರ್ಭ ವಿದ್ಯಾರ್ಥಿಗಳು ಕಾಲೇಜಿನಲ್ಲೇ ಇದ್ದ ಕಾರಣ….

Read More

ಮಂಗಳೂರು: ಅನ್ಯಕೋಮಿನ ಇಬ್ಬರು ವಿದ್ಯಾರ್ಥಿಗಳ ಜೊತೆ ಹಿಂದೂ ಯುವತಿ ಸುತ್ತಾಟ..! ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಮಂಗಳೂರು: ಅನ್ಯಕೋಮಿನ ಇಬ್ಬರು ವಿದ್ಯಾರ್ಥಿಗಳ ಜೊತೆ ಹಿಂದೂ ಯುವತಿ ಸುತ್ತಾಟ ಆರೋಪ ಮಾಡಲಾಗಿದ್ದು, ಕಾರಿನಲ್ಲಿದ್ದ ತಂಡವನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿರುವಂತಹ ಘಟನೆ ಮಂಗಳೂರು  ಹೊರವಲಯದ ಮುಕ್ಕ ಎಂಬಲ್ಲಿ ನಡೆದಿದೆ. ಮುಕ್ಕ ಸಮೀಪ ಕಾರಿನಲ್ಲಿ ಇಬ್ಬರು ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿ ಇದ್ದಳು ಎನ್ನಲಾಗಿದೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಯುವತಿಯೊಂದಿಗೆ ಬಿಎಂಡಬ್ಲ್ಯು ಕಾರಿನಲ್ಲಿ ಹೊಗುತ್ತಿರಬೇಕಾದರೆ, ಸ್ಕೂಲ್​​ ಬಸ್​ಗೆ ಡಿಕ್ಕಿ ಹೊಡೆದಿದ್ದಾರೆ. ಹೀಗಾಗಿ ಬಸ್ ಚಾಲಕ‌ನ ಜೊತೆ…

Read More