admin

Andhra Style mango Dal Recipe: ಆಂಧ್ರ ಶೈಲಿಯ ಮಾವಿನಕಾಯಿ ದಾಲ್ ರೆಸಿಪಿ: ಮಾಡಿದರೆ ಬೆರಳು ಚೀಪಿ ತಿಂತೀರಾ…

ಅಗತ್ಯವಿರುವ ವಸ್ತುಗಳು: * ಮೊಸರು – 1/2 ಕಪ್ * ಹೆಸರು ಬೇಳೆ ದಾಲ್ – 1/2 ಕಪ್ * ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ) * ಹಸಿರು ಮೆಣಸಿನಕಾಯಿ – 3 * ಟೊಮೇಟೊ – 1 (ಸಣ್ಣದಾಗಿ ಹೆಚ್ಚಿದ) * ಚಿಕ್ಕ ಮಾವು – 1 * ಅರಿಶಿನ ಪುಡಿ – 1 ಚಿಟಿಕೆ * ಸಾಂಬಾರ್ ಪುಡಿ – 1 tbsp * ಉಪ್ಪು – 1 tbsp * ನೀರು…

Read More

ಸಿದ್ದರಾಮಯ್ಯ, ಡಿಕೆಶಿ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಂತೆ ಭಕ್ತರಿಂದ ಮೋದಿಗೆ ಜೈಕಾರ

ಬೆಳ್ತಂಗಡಿ : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಯವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ‌ ಆಗಮಿಸುತ್ತಿದ್ದಂತೆ ಭಕ್ತರಿಂದ ಮೋದಿ ಪರ ಘೋಷಣೆ, ಜೈಶ್ರ್ರೀರಾಂ ಘೋಷಣೆ ಕೇಳಿ ಬಂದಿತು. ಸಿಎಂ, ಡಿಸಿಎಂ ದೇವಸ್ಥಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ಭಕ್ತರ ದೇವರ ದರ್ಶನ ಬಂದ್ ಮಾಡಲಾಗಿತ್ತು. ಒಂದು ಗಂಟೆಗೂ ಅಧಿಕ ಸಮಯದಿಂದ ದೇವರ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಆದ್ದರಿಂದ ಸಾವಿರಾರು ಮಂದಿ ಭಕ್ತರು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತ್ತು‌. ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಸಿಎಂ, ಡಿಸಿಎಂ ಬಂದು ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಜೈಶ್ರೀರಾಂ,…

Read More

ಚರಂಡಿಗೆ ಆಟೋರಿಕ್ಷಾ ಬಿದ್ದು ಚಾಲಕ ಸಾವು- ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ದ ಎಫ್ಐಆರ್

ಮಂಗಳೂರು : ಮಂಗಳೂರು ರಾತ್ರಿ ಸುರಿದ ಮಳೆಗೆ ಕೊಟ್ಟಾರ ಬಳಿ ರಾಜಕಾಲುವೆಯಲ್ಲಿ ರಿಕ್ಷಾವೊಂದು ಕೊಚ್ಚಿ ಹೋಗಿ ಚಾಲಕ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಇದೀಗ ರಾಜಕಾಲುವೆ ಸರಿಯಾಗಿ ಕ್ಲಿನ್ ಮಾಡದೆ ನಿರ್ಲಕ್ಷ ತೋರಿಸಿರುವ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ದ ಎಫ್ಐಆರ್ ದಾಖಲಾಗಿದೆ. ನಗರದಲ್ಲಿ ಶುಕ್ರವಾರ ರಾತ್ರಿ ಇಡೀ ಧಾರಾಕಾರ ಮಳೆಯಾಗಿದ್ದು ಕೊಟ್ಟಾರ ಚೌಕಿಯಲ್ಲಿ ತಗ್ಗು ಪ್ರದೇಶದ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.‌ ಮಳೆ ನೀರು ಹರಿಯುವ ಕಾಲುವೆಯಲ್ಲಿ ರಿಕ್ಷಾವೊಂದು ಕೊಚ್ಚಿ ಹೋಗಿದ್ದು, ಚಾಲಕ ಕೊಟ್ಟಾರ…

Read More

ʻರೇವ್‌ ಪಾರ್ಟಿʼ ಕೇಸ್‌ : ತೆಲುಗು ನಟಿ ಹೇಮಾ ಸೇರಿ 8 ಮಂದಿಗೆ ʻCCBʼಯಿಂದ ನೋಟಿಸ್‌

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಜಿ.ಆರ್. ಪಾರ್ಮ್ ಹೌಸ್ ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾ ಸೇರಿ 8 ಮಂದಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಮೇ.27 ರಂದು ಸಿಸಿಬಿ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗುವಂತೆ ತೆಲುಗು ನಟಿ ಹೇಮಾಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್.ಪಾರ್ಮ್ ಹೌಸ್ ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ನಟ-ನಟಿಯರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಬಳಿಕ ಸಿಸಿಬಿ ಪೊಲೀಸರು ಅವರನ್ನು ವಶಕ್ಕೆ…

Read More

ಮೈಸೂರು: ಮಾವು ಹಲಸು ಮೇಳಕ್ಕೆ ಚಾಲನೆ

ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಮಾವು ಬೆಳೆಗಾರರಿಗೆ ಉತ್ತಮ ದರ ದೊರಕುವಂತೆ ಮಾಡಲು ತೋಟಗಾರಿಕೆ ಇಲಾಖೆ ಶುಕ್ರವಾರದಿಂದ ಮೈಸೂರು ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಆಯೋಜಿಸಿರುವ ಮಾವು, ಹಲಸು ಮೇಳಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮೈಸೂರು, ಮಂಡ್ಯ, ರಾಮನಗರ, ಉತ್ತರ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸಿಗುವಂತಹ ಮಾವಿನ ಹಣ್ಣುಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲಾಗುತ್ತಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಬರುತ್ತಿರುವುದರಿಂದ ಹೆಚ್ಚಿನ ವಹಿವಾಟು ನಡೆಯುವ ಸಾಧ್ಯತೆ ಇದೆ ಎಂದು ವಿಶ್ವಾಸ…

Read More

ಕಾರಡ್ಕ ಸಹಕಾರಿ ಸಂಘಕ್ಕೆ ವಂಚನೆ ಪ್ರಕರಣ: 48.5 ಲಕ್ಷ ರೂ. ಮೌಲ್ಯದ ಚಿನ್ನ ಕ್ರೈಂ ಬ್ರಾಂಚ್‌ ವಶ

ಕಾಸರಗೋಡು: ಕಾರಡ್ಕ ಕೃಷಿ ಸಹಕಾರಿ ಸಂಘಕ್ಕೆ ಸುಮಾರು 4.67 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಬ್ಯಾಂಕ್‌ನಲ್ಲಿ ಅಡವಿರಿಸಿದ 48.5 ಲಕ್ಷ ರೂ. ಚಿನ್ನವನ್ನು ಕ್ರೈಂ ಬ್ರಾಂಚ್‌ ವಶಕ್ಕೆ ಪಡೆದಿದೆ. ಕೋ-ಆಪರೇಟಿವ್‌ ಸೊಸೈಟಿಯ ಸೆಕ್ರೆಟರಿ, ಸಿಪಿಎಂ ಲೋಕಲ್‌ ಕಮಿಟಿ ಸದಸ್ಯ ರತೀಶನ್‌ ಲಪಟಾಯಿಸಿ ಕೇರಳ ಬ್ಯಾಂಕ್‌ನಲ್ಲಿ ಚಿನ್ನ ಅಡವಿರಿಸಿದ್ದ. ಆರೋಪಿ ರತೀಶನ್‌ ಹಾಗೂ ಸೂತ್ರಧಾರ ಕಣ್ಣೂರು ನಿವಾಸಿ ಜಬ್ಟಾರ್‌ ತಲೆಮರೆಸಿಕೊಂಡಿದ್ದಾನೆ.ಈ ಪ್ರಕರಣಕ್ಕೆ ಸಂಬಂಧಿಸಿ ಪಳ್ಳಿಕೆರೆ ಪಂಚಾಯತ್‌ ಸದಸ್ಯ ಬೇಕಲ ಹದ್ದಾದ್‌ ನಗರದ ಕೆ.ಅಹಮ್ಮದ್‌ ಬಶೀರ್‌, ಪರಕ್ಲಾಯಿ ಏಳನೇ…

Read More

‘ ಶ್ರೀ ಸಿದ್ದರಾಮಯ್ಯ ಅವರೇ…’ ಎಚ್.ಡಿ. ಕುಮಾರಸ್ವಾಮಿ ಹೀಗೆ ಹೇಳಿದ್ದೇಕೆ?

ಸಿಎಂ ಸಿದ್ದರಾಮಯ್ಯ & ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಡುವೆ ಪದೇ, ಪದೇ ರಾಜಕೀಯ ತಿಕ್ಕಾಟ ನಡೆಯುತ್ತಿದೆ. ಅದರಲ್ಲೂ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಇಬ್ಬರೂ ಫೈಟಿಂಗ್ ಜೋರು ಮಾಡಿದ್ದಾರೆ. ಈ ಸಮಯದಲ್ಲೇ ಎಚ್‌ಡಿಕೆ ಇದೀಗ ಸುದೀರ್ಘವಾಗಿರುವ ಟ್ವೀಟ್ ಒಂದನ್ನ ಮಾಡಿ, ಸಿಎಂ ಸಿದ್ದರಾಮಯ್ಯ ಅವರಿಗೆ ಹೊಸ ಸವಾಲು ಎಸೆದಿದ್ದಾರೆ. ‘ನಾನೂ ವಕೀಲಿಕೆ ಮಾಡುತ್ತಿದ್ದೆ ಎಂದು’ ಈ ಬಗ್ಗೆ ಟ್ವೀಟ್ ಮಾಡಿರುವ ಎಚ್.ಡಿ. ಕುಮಾರಸ್ವಾಮಿ ಅವರು, ‘ಶ್ರೀ @siddaramaiah ನವರೇ.. ನಾನು ವಕೀಲನಾಗಿದ್ದೆ, ಹಿಂದೆ ನಾನೂ ವಕೀಲಿಕೆ ಮಾಡುತ್ತಿದ್ದೆ…

Read More

ಜೂನ್‌ 1ರಿಂದ ʻಹೊಸ ಸಾರಿಗೆ ನಿಯಮʼಗಳು ಜಾರಿ : ಅಪ್ರಾಪ್ತರಿಗೆ ವಾಹನ ಕೊಟ್ರೆ 25,000 ರೂ.ದಂಡ, ನೋಂದಣಿ ರದ್ದು..!

ಬೆಂಗಳೂರು : ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಭಾರತದಲ್ಲಿ ಡ್ರೈವಿಂಗ್‌ ಲೈಸೆನ್ಸ್ ಪಡೆಯಲು ಹೊಸ ನಿಯಮಾವಳಿಗಳನ್ನು ಪ್ರಕಟಿಸಿದೆ. ಜೂನ್‌ 1ರಿಂದ ಸರ್ಕಾರಿ ಆರ್‌ಟಿಒಗಳ ಬದಲಿಗೆ ಖಾಸಗಿ ಡ್ರೈವಿಂಗ್‌ ತರಬೇತಿ ಕೇಂದ್ರಗಳಲ್ಲಿ ಡ್ರೈವಿಂಗ್‌ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಅಪ್ರಾಪ್ತರಿಗೆ ವಾಹನ ಕೊಟ್ರೆ 25,000 ರೂ.ದಂಡ, ನೋಂದಣಿ ರದ್ದಾಗಲಿದೆ. ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಗಳು ಜೂನ್ 1 ರಿಂದ ಹೊಸ ನಿಯಮಗಳನ್ನು ಹೊರಡಿಸಲಿವೆ. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದ್ದಕ್ಕಾಗಿ ಪೋಷಕರು ಎಷ್ಟು ಚಲನ್ ಪಾವತಿಸಬೇಕು ಮತ್ತು ಎಷ್ಟು ವರ್ಷ ಶಿಕ್ಷೆ…

Read More

ಉಡುಪಿ: ನಡುರಸ್ತೆಯಲ್ಲಿ ಗ್ಯಾಂಗ್ ವಾರ್; ಹೊಡೆದಾಟದ ವಿಡಿಯೋ ವೈರಲ್

ಉಡುಪಿ: ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ಘಟನೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಾಪು ಮೂಲದ ಎರಡು ತಂಡಗಳ ಯುವಕರು ಉಡುಪಿ – ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳಲ್ಲಿ ಬಂದು‌ ಜಗಳ ಮಾಡಿಕೊಂಡು ಕಾರಿನಲ್ಲಿಯೇ ಹೊಡೆದಾಟ ಮಾಡಿಕೊಂಡಿದ್ದಾರೆ. ಮೇ 18ರಂದು ಉಡುಪಿ ಕುಂಜಿಬೆಟ್ಟುವಿನಲ್ಲಿ ನಡೆದಿರುವ ಈ ಘಟನೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಗೆ ಜೂನ್ 1 ರ ವರೆಗೆ‌ ನ್ಯಾಯಂಗ ಬಂಧನ ವಿಧಿಸಿದ್ದಾರೆ….

Read More

“ಪತ್ತನಾಜೆ” ತುಳುನಾಡಿನ ಉತ್ಸವ, ಜಾತ್ರೆ, ನೇಮ, ಯಕ್ಷಗಾನಕ್ಕೆ ಸಾಂಪ್ರದಾಯಿಕ ತೆರೆ

ಮಂಗಳೂರು: ತುಳುವರು ಮೂಲತಃ ಕೃಷಿಕರು. ಆದ್ದರಿಂದ ತುಳುನಾಡಿನಲ್ಲಿ ಎಲ್ಲಾ ಆಚರಣೆ, ಆರಾಧನೆಗಳಲ್ಲಿ ಕೃಷಿ ಬದುಕು ಒಂದಿಲ್ಲೊಂದು ರೀತಿ ತಳುಕಿ ಹಾಕಿಕೊಂಡಿರುತ್ತದೆ. ಇದಕ್ಕೆ “ಪತ್ತನಾಜೆ”ಯೂ ಹೊರತಲ್ಲ. ಪತ್ತನಾಜೆ ಎಂದರೆ ಪ್ರಸ್ತುತ ಸಾಲಿನ ಜಾತ್ರೆ, ಅಂಕ, ಆಯನ, ನೇಮ, ಯಕ್ಷಗಾನಕ್ಕೆ ಸಾಂಪ್ರದಾಯಿಕ ತೆರೆಬೀಳುವ ದಿನವೆಂದೇ ನಂಬಿಕೆ ತುಳುವರಲ್ಲಿದೆ. ಇಂದಿಗೂ ಅದೇ ನಿಯಮ ಚಾಲ್ತಿಯಲ್ಲಿದೆ. ವೃಷಭ ಸಂಕ್ರಮಣ ಬಳಿಕದ ಹತ್ತನೇ ದಿನವನ್ನೇ ಪತ್ತನಾಜೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ಪತ್ತನಾಜೆ ಪ್ರತೀವರ್ಷ ಮೇ 24 ಅಥವಾ 25ರಂದು ಬರುತ್ತದೆ‌. ಇಂದಿನ ದಿನವೇ “ಪತ್ತನಾಜೆ”. ಕೃಷಿಕರಾದ…

Read More