admin

5 ಲಕ್ಷ ಮತಗಳಿಂದ ಅಮಿತ್ ಶಾ ಭರ್ಜರಿ ಗೆಲುವು

ಲೋಕಸಭೆ ಚುನಾವಣೆಯ ಮತಎಣಿಕೆ ಕಾರ್ಯವು ಭರದಿಂದ ಸಾಗುತ್ತಿದ್ದು, ಒಟ್ಟು 543 ಕ್ಷೇತ್ರಗಳ ಪೈಕಿ ಎನ್‌ಡಿಎ ಮೈತ್ರಿಕೂಟವು 294 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅತ್ತ, ಇಂಡಿಯಾ ಒಕ್ಕೂಟವೂ ತೀವ್ರ ಪೈಪೋಟಿ ನೀಡುತ್ತಿದ್ದು, 230 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದರ ಮಧ್ಯೆಯೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಿಜೆಪಿಗೆ ಮೊದಲ ಗೆಲುವು ತಂದುಕೊಟ್ಟಿದ್ದಾರೆ. ಅಮಿತ್‌ ಶಾ ಗುಜರಾತ್‌ನ ಗಾಂಧಿನಗರ ಲೋಕಸಭೆ ಕ್ಷೇತ್ರದಲ್ಲಿ 5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

Read More

ಕರ್ನಾಟಕದಲ್ಲಿ ‘ಬಿಜೆಪಿ ಮೊದಲ ಖಾತೆ’ ಓಪನ್: ತುಮಕೂರಲ್ಲಿ ‘ವಿ.ಸೋಮಣ್ಣ’ ಭರ್ಜರಿ ಗೆಲುವು

ತುಮಕೂರು: ರಾಜ್ಯದಲ್ಲಿ ಬಿಜೆಪಿ ಮೊದಲ ಖಾತೆಯನ್ನು ತೆರೆದಿದೆ. ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಭರ್ಜರಿ ಗೆಲುವು ಸಾಧಿಸುವ ಮೂಲಕ, ಮೊದಲ ಖಾತೆಯನ್ನು ಕರ್ನಾಟಕದಲ್ಲಿ ಬಿಜೆಪಿ ತೆರೆದಂತೆ ಆಗಿದೆ. ತುಮಕೂರು ಲೋಕಸಭಾ ಕ್ಷೇತ್ರದ 15ನೇ ಸುತ್ತಿನಲ್ಲಿ ಮತಏಣಿಕೆ ಕಾರ್ಯದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ 94482 ಮತಗಳ ಅಂತರದಿಂದ ಮುನ್ನಡೆಯನ್ನು ಸಾಧಿಸಿದ್ದರು. ಇತ್ತೀಚಿನ ಮಾಹಿತಿಯಂತೆ ಅವರು ಭಾರೀ ಮತಗಳಿಂದ ಗೆಲುವು ಸಾಧಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ವಿರುದ್ಧ…

Read More

ಬಿಜೆಪಿ- ಕೋಟ ಶ್ರೀನಿವಾಸ ಪೂಜಾರಿ 326330 ಲಕ್ಷ ಮತಗಳಿಂದ ಮುನ್ನಡೆ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಜೆಪಿ- ಕೋಟ ಶ್ರೀನಿವಾಸ ಪೂಜಾರಿ 326330 ಲಕ್ಷ ಮತಗಳಿಂದ ಮುನ್ನಡೆ ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ ಮತ 202680 ಲಕ್ಷ ಮತಗಳ ಮುಂದೆ ಸಾಗಿದ್ದಾರೆ ಬಿಜೆಪಿಗೆ 123650 ಮತಗಳ ಮುನ್ನಡೆ Nota – 5108

Read More

ವಾರಣಾಸಿಯಲ್ಲಿ ಮೋದಿಗೆ ಒಂದು ಲಕ್ಷ ಮತಗಳ ಮುನ್ನಡೆ

ಲಕ್ನೋ: ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಅವರು ಕಾಂಗ್ರೆಸ್‌ ಅಭ್ಯರ್ಥಿ ಅಜಯ್ ರೈ ಅವರನ್ನು ಹಿಂದಿಕ್ಕಿ ಸುಮಾರು ಒಂದು ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದಾರೆ.

Read More

BREAKING : ಲೋಕಸಭೆ ಚುನಾವಣೆ ಫಲಿತಾಂಶ : ದೇಶಾದ್ಯಂತ ʻNDAʼ 271, ʻಇಂಡಿಯಾʼ 183 ಕ್ಷೇತ್ರಗಳಲ್ಲಿ ಮುನ್ನಡೆ

ಬೆಂಗಳೂರು : ದೇಶಾದ್ಯಂತ ಸುಧೀರ್ಘ ಏಳು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಇಂದು ಬೆಳಗ್ಗೆ 8 ಗಂಟೆಯಿಂದ 543 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು, 8,360 ಅಭ್ಯರ್ಥಿಗಳ ಹಣೆ ಬರಹ ನಿರ್ಧಾರವಾಗಲಿದೆ. ದೇಶಾದ್ಯಂತ ಎನ್‌ ಡಿಎ ಮೈತ್ರಿಕೂಟದ ಅಭ್ಯರ್ಥಿಗಳು 271 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ರೆ, ಇಂಡಿಯಾ ಮೈತ್ರಿ ಮೈತ್ರಿಕೂಟದ ಅಭ್ಯರ್ಥಿಗಳು 183 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. 52 ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಕರ್ನಾಟಕದ 15 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ…

Read More

ದಕ್ಷಿಣ ಕನ್ನಡ: ಮೊದಲ ಸುತ್ತಿನಲ್ಲಿ ಬ್ರಿಜೇಶ್‌ ಚೌಟಗೆ ಮುನ್ನಡೆ

ಮಂಗಳೂರಿನ ಎನ್ ಐಟಿಕೆ ಮತ ಎಣಿಕಾ ಕೇಂದ್ರದಲ್ಲಿ ಅಂಚೆ ಮತ ಎಣಿಕೆ ಆರಂಭಗೊಂಡಿದೆ. 8537 ಅಂಚೆ ಮತಗಳ ಎಣಿಕೆಗೆ ಒಂದು ಕೊಠಡಿಯಲ್ಲಿ 20 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತಗಳನ್ನು ಮತ ಎಣಿಕಾ ಸಿಬ್ಬಂದಿ ಎಣಿಕೆ ಮಾಡ್ತಿದ್ದಾರೆ. ಇನ್ನು ದಕ್ಷಿಣ ಕನ್ನಡ 1ನೇ ಸುತ್ತು ಆರಂಭಗೊಂಡಿದ್ದು ಬಿಜೆಪಿ ಬ್ರಿಜೇಶ್ ಚೌಟ ಮುನ್ನಡೆ 188 ಮತಗಳ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ ಪದ್ಮರಾಜ್ ಆರ್ ಪೂಜಾರಿ: 96 ಗಳಿಸಿದ್ದಾರೆ. ದ.ಕ ಜಿಲ್ಲಾಧಿಕಾರಿ ಮುಳೈ ಮುಗಿನಲ್ ಸಮ್ಮುಖದಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ.

Read More