admin

ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ವಾಜಪೇಯಿ ಸಮಾಧಿಗೆ ʻಮೋದಿʼ ನಮನ

ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಇಂದು ಬೆಳಗ್ಗೆ ದೆಹಲಿಯಲ್ಲಿರುವ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸಮಾಧಿಗೆ ನಮನ ಸಲ್ಲಿಸಿದ್ದಾರೆ. 293ಸ್ಥಾನ ಗೆದ್ದಿರುವ ಬಿಜೆಪಿ ನೇತೃತ್ವದ ಎನ್‌ ಡಿಎ ಕೂಟದ ಕೇಂದ್ರ ಸರ್ಕಾರ ಇಂದಿನಿಂದ ಅಸ್ವಿತ್ವಕ್ಕೆ ಬರಲಿದೆ. ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಮಂತ್ರಿ ಮಂಡಲದ ಸದಸ್ಯರು ಇಂದು ಸಂಜೆ 7.15 ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನರೇಂದ್ರ ಮೋದಿ ಅವರು ಸತತ…

Read More

ಯುವತಿಯೊಂದಿಗೆ ಬಸ್ ನಲ್ಲಿ ಅಸಭ್ಯ ವರ್ತನೆ; ಯುವಕನಿಗೆ ಧರ್ಮದೇಟು ನೀಡಿದ ಸಾರ್ವಜನಿಕರು

ಮಂಗಳೂರು: ಖಾಸಗಿ ಬಸ್ ನಲ್ಲಿ ಯುವಕನೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಕಾಮುಕನನ್ನು ಹಿಡಿದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನ ಬಲ್ಲಾಳ್ ಬಾಗ್ ಎಂಬಲ್ಲಿ ನಡೆದಿದೆ. ಯುವತಿ ನಾಗನೂರಿನಿಂದ ಬಸ್ ಹತ್ತಿ ಸ್ಟೇಟ್ ಬ್ಯಾಂಕ್ ಬಳಿ ಇಳಿದು ಬಳಿಕ ಮರೋಳಿ ಎಂಬ ಹೆಸರಿನ ಬಸ್ ನಲ್ಲಿ ಬಜಪೆ ಕಡೆ ತೆರಳುತ್ತಿದ್ದಳು. ಯುವತಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಯುವಕ, ಯುವತಿ ಕುಳಿತಿದ್ದ ಹಿಂಬದಿಯ ಸೀಟಿನಲ್ಲಿ ಕುಳಿತುಕೊಂಡಿದ್ದ. ಅಲ್ಲದೇ ಯುವತಿಯ ಸೊಂಟಕ್ಕೆ ಕೈ ಹಾಕಿ ಕಿರುಕುಳ ನೀಡುತ್ತಿದ್ದ. ಯುವತಿ ಈ…

Read More

ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮಾಲ್ಡೀವ್ಸ್ ಅಧ್ಯಕ್ಷರಿಗೆ ಆಹ್ವಾನ

ನರೇಂದ್ರ ಮೋದಿ ಅವರು ಜೂನ್ 9ರಂದು 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆ ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೂ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರನ್ನು ಆಹ್ವಾನಿಸಲಾಗಿದೆ. ಭಾರತ ಸರ್ಕಾರದ ಮಂತ್ರಿಗಳ ಪರಿಷತ್ ನೀಡಿದ ಆಹ್ವಾನವನ್ನು ಸ್ವೀಕರಿಸಲಾಗಿದೆ ಎಂದು ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತದ ಹೈಯರ್ ಕಮಿಷನರ್ ಮುನು ಮಹಾವರ್ ಅವರು ಮಾಲ್ಡೀವ್ಸ್ ಅಧ್ಯಕ್ಷರನ್ನು ಖುದ್ದಾಗಿ ಭೇಟಿ ಮಾಡಿ ಸಮಾರಂಭದ…

Read More

ಲೋಕಸಭಾ ಚುನಾವಣೆಯಲ್ಲಿ ‘NDA’ ಗೆದ್ದಿದ್ದಕ್ಕೆ ‘ಬೆರಳು ಕತ್ತರಿಸಿ’ ದೇವರಿಗೆ ಅರ್ಪಿಸಿದ ವ್ಯಕ್ತಿ 

ನವದೆಹಲಿ: ಬಿಜೆಪಿ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಅಂತ ಅನೇಕರು ಆಶಿಸಿದ್ದರು. ಕೆಲವರು ಇದಕ್ಕಾಗಿ ಹರಕೆ ಮಾಡಿಕೊಂಡಿದ್ದಾರೆ. ಹೀಗೆ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಗೆದ್ದರೇ ಬೆರಳು ಕರ್ತರಿಸಿ ಅರ್ಪಿಸೋದಾಗಿ ದೇವರಿಗೆ ಹರಕೆಯನ್ನು ವ್ಯಕ್ತಿಯೊಬ್ಬ ಕಟ್ಟಿಕೊಂಡಿದ್ದನು. ಅದರಂತೆ ತನ್ನ ಬೆರಳು ಕತ್ತರಿಸಿ ದೇವರಿಗೆ ಅರ್ಪಿಸಿದ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ. ಹೌದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಬಹುಮತ ಪಡೆದ ನಂತರ ಛತ್ತೀಸ್ಗಢದ ಬಲರಾಂಪುರದಲ್ಲಿ 30 ವರ್ಷದ ವ್ಯಕ್ತಿಯೊಬ್ಬರು ತಮ್ಮ…

Read More

ಶಾಸಕ ಹರೀಶ್‌ ಪೂಂಜಾ ಬಂಧನ ಬೇಡ ಎಂದ ಹೈಕೋರ್ಟ್‌

ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ಮತ್ತು ಪೊಲೀಸರನ್ನು ನಿಂದಿಸಿದ ಆರೋಪ ಎದುರಿಸುತ್ತಿರುವ ಬೆಳ್ತಂಗಡಿ ಶಾಸಕಹರೀಶ್‌ ಪೂಂಜಾ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಸರಕಾರದ ಹೆಚ್ಚುವರಿ ಅಭಿಯೋಜಕರು ಹೈಕೋರ್ಟ್‌ಗೆ ತಿಳಿಸಿದ್ದಾರೆ. 2 ಎಫ್‌ಐಆರ್‌ ಪ್ರಶ್ನಿಸಿ ಪೂಂಜಾ ಹೈಕೋರ್ಟ್‌ ಮೊರೆ ಹೋಗಿದ್ದು, ಈ ಅರ್ಜಿ ವಿಚಾರಣೆಯು ನ್ಯಾ.ಕೃಷ್ಣ ದೀಕ್ಷಿತ್‌ ಅವರ ಪೀಠದಲ್ಲಿ ನಿನ್ನೆ ನಡೆದಿತ್ತು. ತಮ್ಮ ಕಕ್ಷಿದಾರರಿಗೆ ಪೊಲೀಸರು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಪೂಂಜಾ ಪರ ವಕೀಲರು ಹೇಳಿದಾಗ,ಅರ್ಜಿದಾರರನ್ನು ಬಂಧಿಸದಂತೆ ಕೋರ್ಟ್‌ ಸೂಚಿಸಿದೆ.

Read More

ಮಂಗಳೂರು : ಅಂಗಡಿ ಬೋರ್ಡ್‌ಗಳಲ್ಲಿ ಕನ್ನಡ ಕಡ್ಡಾಯ- ಮನಪಾ ಆಯುಕ್ತರ ಸೂಚನೆ

ಮಂಗಳೂರು : ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರಗಳ ಉದ್ದಿಮೆಗಳು, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು, ಹೊಟೇಲ್‌ಗಳು ತಮ್ಮ ನಾಮಫಲಕಗಳ ಮೇಲ್ಬಾಗದಲ್ಲಿ ಕನ್ನಡ ಭಾಷೆಯನ್ನು ಶೇ.60ರಷ್ಟು ಪ್ರದರ್ಶಿಸುವುದು ಕಡ್ಡಾಯವಾಗಿದೆ. ಹಾಗಾಗಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಉದ್ದಿಮೆದಾರರು ಉದ್ದಿಮೆ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಅಗ್ರಸ್ಥಾನದಲ್ಲಿ ಶೇ.60ರಷ್ಟು ಪ್ರದರ್ಶಿಸುವ ನಿಬಂಧನೆಯನ್ನು ವಿಧಿಸಿ ಉದ್ದಿಮೆ ಪರವಾನಿಗೆಯನ್ನು ನೀಡಲಾಗುತ್ತಿದೆ. ಉದ್ದಿಮೆ ಪರವಾನಿಗೆ ನವೀಕರಣ ಅಥವಾ ಹೊಸದಾಗಿ ಮಂಜೂರಾತಿ ವೇಳೆ ಈ ಬಗ್ಗೆ ಪರಿಶೀಲಿಸಲಾಗುತ್ತಿದೆ. ಕೆಲವು…

Read More

ಮುಂದಿನ 10 ವರ್ಷಗಳಲ್ಲಿ ಬೃಹತ್ ಅಭಿವೃದ್ಧಿ: ಬಡತನ ಮುಕ್ತ, ಮಹಿಳಾ ಶಕ್ತಿ ಚಾಲಿತ ಭಾರತವನ್ನು ನಿರ್ಮಿಸುತ್ತೇವೆ- ಮೋದಿ

ನವದೆಹಲಿ: ಮುಂದಿನ ಹತ್ತು ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದಾಗಿ ನರೇಂದ್ರ ಮೋದಿ ಹೇಳಿದ್ದಾರೆ. 25 ಕೋಟಿ ಬಡವರನ್ನು ಬಡತನದಿಂದ ಮುಕ್ತಗೊಳಿಸಲಾಗುವುದು ಎಂದು ಅವರು ಹೇಳಿದರು. ಮಹಿಳಾ ನೇತೃತ್ವದ ಅಭಿವೃದ್ಧಿ ನೀತಿಯನ್ನು ಜಾರಿಗೆ ತರಲಾಗುವುದು. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ತಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಪ್ರಧಾನಿಯಾಗಿ ಆಯ್ಕೆಯಾದ ನಂತರ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ನಡೆದ ಎನ್ಡಿಎ ಸಭೆಯಲ್ಲಿ ಮೋದಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಮತ್ತು ‘ಇಂಡಿಯಾ’ ಬ್ಲಾಕ್ ಮೇಲೆ ದಾಳಿ ಮಾಡಲು…

Read More

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌ : 1526 ʻಹೆಡ್‌ ಕಾನ್‌ ಸ್ಟೇಬಲ್ಸ್‌ʼ, ʻASIʼ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಉದ್ಯೋಗಾಕಾಂಕ್ಷಿಗಳಿಗೆ ಗಡಿ ಭದ್ರತಾ ಪಡೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಗಡಿ ಭದ್ರತಾ ಪಡೆಯಲ್ಲಿ 1526 ಹೆಡ್‌ ಕಾನ್‌ ಸ್ಟೇಬಲ್ಸ್‌, ASI ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರೀಯ ಪೊಲೀಸ್‌ ಪಡೆಗಳಲ್ಲಿ ಎಎಸ್‌ ಐ ಹಾಗೂ ಹೆಡ್‌ ಕಾನ್‌ ಸ್ಟೇಬಲ್ಸ್‌ ಹುದ್ದೆಗಳಿಗಾಗಿ ನೇಮಕಾತಿ ನಡೆಸಲಾಗುತ್ತಿದೆ. ಇವು ಸೈನೋಗ್ರಾಫರ್‌ ಹಾಗೂ ಗುಮಸ್ತಾ ಹುದ್ದೆಗಳಾಗಿದ್ದು, ಒಟ್ಟಾರೆಯಾಗಿ 1526 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಜೂ.9ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಅರ್ಜಿ ಸಲ್ಲಿಕೆಗೆ ಅಂದಿನಿಂದಲೇ ಅವಕಾಶ ಇರಲಿದೆ. ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು….

Read More

ಕನ್ನಡ ಹೊಚ್ಚ ಹೊಸ ಧಾರವಾಹಿ “ಅವನಿ” ಅತೀ ಶೀಘ್ರದಲ್ಲೇ ಬಿಡುಗಡೆ

ಎಸ್ ಆರ್ ಎಸ್ ಮೀಡಿಯಾ ಹೌಸ್ ಪ್ರಸ್ತುತ ಪಡಿಸುವ ‘ ಅವನಿ ‘ ಎಂಬ ಕನ್ನಡ ಹೊಚ್ಚ ಹೊಸ ಧಾರವಾಹಿಯು ಕರ್ನಾಟಕದಾದ್ಯಂತ ನಿಮ್ಮ ನೆಚ್ಚಿನ ಕೇಬಲ್ ಟಿವಿ ಚಾನೆಲ್ ಮೂಲಕ ಅತೀ ಶೀಘ್ರದಲ್ಲೇ ತಲುಪಲಿದೆ. ಕರಾವಳಿ ಮೂಲದ ಪ್ರಸಿದ್ಧ ಟಿವಿ ಚಾನೆಲ್ ಈ ಧಾರವಾಹಿಯ ಪ್ರಸಾರದ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಇದಕ್ಕೆ ಮುನ್ನ ಧಾರವಾಹಿಯ ಹಾಗೂ ಮುಹೂರ್ತ ಸಮಾರಂಭವು ಗಣ್ಯರ ಸಮ್ಮುಖದಲ್ಲಿ ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಡೆಯಿತು. ಟ್ರೈಲರ್ ಚಿತ್ರೀಕರಣ ಮೂಡಬಿದ್ರಿ ಸಂಪಿಗೆ ಹಾಗೂ…

Read More

ಮಂಗಳೂರು: ವಕೀಲರ ಸಂಘದ ಕಾರ್ಯಕಾರಿಣಿ ಸಮಿತಿಗೆ ಕುಶಾಲಪ್ಪ ಕುಲಾಲ್ ಆಯ್ಕೆ

ಪ್ರತಿಷ್ಠಿತ ಮಂಗಳೂರು ವಕೀಲರ ಸಂಘದ ಕಾರ್ಯಕಾರಿಣಿ ಸಮಿತಿಗೆ ಬಹುಮತದಿಂದ ಆಯ್ಕೆಗೊಂಡ,ದ. ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಕೋಶಾಧಿಕಾರಿ ಶ್ರೀ ಕುಶಾಲಪ್ಪ ಕುಲಾಲ್ ರವರನ್ನು ಮಾತೃ ಸಂಘದ ಅಧ್ಯಕ್ಷರು ಮಯೂರ್ ಉಳ್ಳಾಲ್ , ಪ್ರಧಾನ ಕಾರ್ಯದರ್ಶಿ ಸದಾಶಿವ ಕುಲಾಲ್ ಹಾಗೂ ಜೊತೆ ಕಾರ್ಯದರ್ಶಿಯಾದ ಪ್ರದೀಪ್ ಅತ್ತಾವರ ಮತ್ತು ಮುಡಿಪು ಕುಲಾಲ ಸಂಘದ ಅಧ್ಯಕ್ಷರಾದ ಪುಂಡರಿಕಾಕ್ಷ ಅಭಿನಂದಿಸಿದರು.

Read More