admin

ಮಂಗಳೂರು: ಕಡಿದು ಬಿದ್ದ ವಿದ್ಯುತ್ ತಗುಲಿ ಇಬ್ಬರು ರಿಕ್ಷಾ ಚಾಲಕರು ಸಾವು..!

ಮಂಗಳೂರು: ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ರಿಕ್ಷಾ ಚಾಲಕರು ಮೃತಪಟ್ಟ ಘಟನೆ ಮಂಗಳೂರು ರೊಸಾರಿಯೋ ಬಳಿ ನಡೆದಿದೆ. ಮೃತಪಟ್ಟ ರಿಕ್ಷಾ ಚಾಲಕರನ್ನು ರಾಜು ಮತ್ತು ದೇವರಾಜು ಎಂದು ಗುರುತಿಸಲಾಗಿದೆ. ಒಬ್ಬರು ಪುತ್ತೂರು ಹಾಗೂ ಇನ್ನೊಬ್ಬರು ಸಕಲೇಶಪುರದವರು. ಇಬ್ಬರೂ ಪಾಂಡೇಶ್ವರದ ರೊಸಾರಿಯೋ ಚರ್ಚ್ ಹಿಂಬದಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದರು. ಬೆಳಗ್ಗೆ 4.30 ರ ಸುಮಾರಿಗೆ ಒಬ್ಬರು ರಿಕ್ಷಾ ಸ್ವಚ್ಚ ಗೊಳಿಸಲು ಹೊರಬಂದಿದ್ದು, ರಿಕ್ಷಾ ತೊಳೆಯುವ ವೇಳೆ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ…

Read More

ಮಂಗಳೂರು: ರಸ್ತೆ ಗುಂಡಿಗೆ ಬಿದ್ದ ಸವಾರ – ಗುಂಡಿಯಲ್ಲೇ ಸ್ಕೂಟರ್ ಇಟ್ಟು ಪ್ರತಿಭಟನೆ..!

ಮಂಗಳೂರು : ಹೆದ್ದಾರಿ ಕಾಮಗಾರಿಗಳ ಅವ್ಯವಸ್ಥೆಗೆ ವಾಹನ ಸವಾರರು ಹೈರಾಣಾಗಿ ಹೋಗಿದ್ದು, ಸುರತ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅರೆಬರೆ ಕಾಂಕ್ರೀಟ್ ಹಾಗೂ ಡಾಂಬರು ಹಾಕಿದ್ದು ಇದೀಗ ಭಾರಿ ಮಳೆಗೆ ಹೆದ್ದಾರಿ ಹೊಂಡಮಯವಾಗಿದೆ ಈ ಹೊಂಡಕ್ಕೆ ಸ್ಕೂಟರ್ ಸವಾರರೊಬ್ಬರು ಬಿದ್ದು ಗಾಯಗೊಂಡಿದ್ದಾರೆ. ಇದರಿಂದ ಬೇಸತ್ತ ಅವರು, ತಾವು ಬಿದ್ದ ಹೊಂಡದಲ್ಲೇ ತಮ್ಮ ಸ್ಕೂಟರ್ ನಿಲ್ಲಿಸಿ, ತಾವೂ ಅದರ ಪಕ್ಕದಲ್ಲೇ ನಿಂತು ಈ ದುರವಸ್ಥೆಯ ಬಗ್ಗೆ ಪ್ರತಿಭಟನೆ ನಡೆಸಿದರು. ಅಲ್ಲದೇ, ಹೆದ್ದಾರಿಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರಿಗೂ…

Read More

ಭಾರೀ ಮಳೆ : ನಾಳೆ ದ.ಕ. ಜಿಲ್ಲಾದ್ಯಂತ ಶಾಲೆಗಳಿಗೆ ರಜೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 27ರಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಿನಾಂಕ: 27-06-2024 ರಂದು ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ…

Read More

ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ʻಹಿಜಾಬ್‌,ಬುರ್ಖಾʼ ಧರಿಸುವುದು ನಿಷೇಧ : ಹೈಕೋರ್ಟ್‌ ಮಹತ್ವದ ತೀರ್ಪು

ಮುಂಬೈ: ಕಾಲೇಜು ಕ್ಯಾಂಪಸ್ ನಲ್ಲಿ ಹಿಜಾಬ್, ನಿಖಾಬ್, ಬುರ್ಖಾ, ಟೋಪಿ ಧರಿಸುವುದನ್ನು ನಿಷೇಧಿಸುವ ಎನ್.ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಜಾರಿಗೊಳಿಸಿದ ಡ್ರೆಸ್ ಕೋಡ್ ಅನ್ನು ಪ್ರಶ್ನಿಸಿ ಒಂಬತ್ತು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಎನ್.ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಲೆ, ವಿದ್ಯಾಲಯದ ಒಂಬತ್ತು ವಿದ್ಯಾರ್ಥಿಗಳು. ಕ್ಯಾಂಪಸ್ನಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಕಾಲೇಜು ಆಡಳಿತ ಮಂಡಳಿ ವಿಧಿಸಿರುವ ಡ್ರೆಸ್ ಕೋಡ್…

Read More

ಮಂಗಳೂರು: ರಸ್ತೆಯನ್ನು ಅಗೆದು ಹಾಕಿರುವ ವಿಚಾರದಲ್ಲಿ ವಕೀಲ ದಂಪತಿ ಮೇಲೆ ಹಲ್ಲೆ..!

ಮಂಗಳೂರು: ನಗರದ ಜೆಪ್ಪಿನಮೊಗರು ಎಂಬಲ್ಲಿ ರಸ್ತೆಯನ್ನು ಅಗೆದು ಹಾಕಿರುವ ವಿಚಾರದಲ್ಲಿ ಗಲಾಟೆ ನಡೆದು ವಕೀಲ ದಂಪತಿಗೆ ಹಲ್ಲೆ ನಡೆಸಿ, ಮಾನಭಂಗಕ್ಕೆ ಯತ್ನಿಸಿದ್ದಾರೆಂದು ಸ್ಥಳೀಯ ವ್ಯಕ್ತಿ ರಾಬರ್ಟ್ ವೆಲೆರಿಯನ್ ಮೆಂಡೋನ್ಸಾ ಅವರ ಮೇಲೆ ದೂರು ದಾಖಲಾಗಿದೆ.  ನ್ಯಾಯವಾದಿ ಜಯಪ್ರಕಾಶ್‌ ಅವರ ಮನೆಗೆ ಹೋಗುವ ದಾರಿಯ ವಿಚಾರದಲ್ಲಿ ಸ್ಥಳೀಯ ರಾಬರ್ಟ್ ವೆಲೆರಿಯನ್ ಮೆಂಡೋನ್ಸಾ ಅವರ ನಡುವೆ ತಕಾರಾರು ಎದ್ದಿತ್ತು. ಈ ಬಗ್ಗೆ ಎರಡೂ ಕಡೆಯವರ ನಡುವೆ ಈ ಹಿಂದೆಯೇ ಜಗಳ ನಡೆದಿತ್ತು. ಈ ನಡುವೆ ಜಾಗದ ಮಾಲಕ ರಾಬರ್ಟ್ ವೆಲೆರಿಯನ್…

Read More

ಗಮನಿಸಿ : ಜ್ವರ, ಬಿಪಿ, ಗ್ಯಾಸ್ಟ್ರಿಕ್‌ ಮಾತ್ರೆಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ!

ನವದೆಹಲಿ: ಬ್ಯಾಕ್ಟೀರಿಯಾದ ಸೋಂಕಿನ ಚಿಕಿತ್ಸೆಗಾಗಿ ವ್ಯಾಪಕವಾಗಿ ಬಳಸಲಾಗುವ ಪ್ಯಾರಸಿಟಮಾಲ್, ಪ್ಯಾಂಟೊಪ್ರಜೋಲ್ ಮತ್ತು ಕೆಲವು ಪ್ರತಿಜೀವಕಗಳು ಸೇರಿದಂತೆ ಸುಮಾರು 50 ಔಷಧಿಗಳ ಮಾದರಿಗಳು ಪ್ರಮಾಣಿತ ಗುಣಮಟ್ಟದ್ದಾಗಿಲ್ಲ ಎಂದು ಭಾರತದ ಅತ್ಯುನ್ನತ ಔಷಧ ನಿಯಂತ್ರಣ ಸಂಸ್ಥೆ ಪತ್ತೆ ಮಾಡಿದೆ. ಮೇ ತಿಂಗಳಲ್ಲಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಸಿಒ) ಹೊರಡಿಸಿದ ಎಚ್ಚರಿಕೆಯ ಪ್ರಕಾರ, ಈ ಕಳಪೆ ಗುಣಮಟ್ಟದ ಔಷಧಿಗಳಲ್ಲಿ 22 ಅನ್ನು ಹಿಮಾಚಲ ಪ್ರದೇಶದಲ್ಲಿ ತಯಾರಿಸಲಾಗುತ್ತದೆ ಎನ್ನಲಾಗಿದೆ. ಹಿಮಾಚಲ ಪ್ರದೇಶವಲ್ಲದೆ, ಗುಜರಾತ್ನ ಜೈಪುರ, ಹೈದರಾಬಾದ್, ವಾಘೋಡಿಯಾ ಮತ್ತು ವಡೋದರಾ,…

Read More

ಮಂಗಳೂರು: ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತ್ಯು..!

ಮಂಗಳೂರು: ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಇಬ್ಬರು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರ ಎಂಬಲ್ಲಿ ನಡೆದಿದೆ. ಮೃತರನ್ನು ಯಾಸಿರ್(45),ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಎಂದು ಗುರುತಿಸಲಾಗಿದೆ. ಜೋರಾಗಿ ಸುರಿದ ಮಳೆಗೆ ಮನೆಯ ಗೋಡೆ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ. ಮನೆಯ ಅವಶೇಷಗಳ ಅಡಿಯಿಂದ ಮೂವರ ಮೃತದೇಹಗಳನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಬಾಲಕಿಯೊಬ್ಬಳ ಮೃತದೇಹಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು…

Read More

ಬಂಟ್ವಾಳ: ಮೂರು ಧಾರ್ಮಿಕ ಕೇಂದ್ರ ಹಾಗೂ ಶಿಶುಮಂದಿರಕ್ಕೆ ನುಗ್ಗಿದ ಕಳ್ಳರು..!

ಬಂಟ್ವಾಳದ ಎರಡು ಗ್ರಾಮಗಳಲ್ಲಿರುವ ಮೂರು ಧಾರ್ಮಿಕ ಕೇಂದ್ರ ಹಾಗೂ ಶಿಶುಮಂದಿರವೊಂದಕ್ಕೆ ನುಗ್ಗಿರುವ ಕಳ್ಳರು ನಗದು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ನರಿಕೊಂಬು ಗ್ರಾಮದಲ್ಲಿರುವ ಪೊಯಿತಾಜೆ ಏರಮಲೆ ಶ್ರೀ ಕೋದಂಡ ರಾಮ ಭಜನಾ ಮಂದಿರದ ಮುಂಬಾಗಿಲು ಮುರಿದ ಒಳನುಗ್ಗಿರುವ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ 3000 ಸಾವಿರ ನಗದು ಕಳವುಗೈದಿದ್ದಾರೆ. ಹಾಗೆಯೇ ಒಳಗಿದ್ದ ಗೊದ್ರೇಜ್ ಬಾಗಿಲು ಮುರಿದು ಅದರೊಳಗಡೆ ಜಾಲಾಡಿ ಅಗತ್ಯ ಪತ್ರಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿದ್ದಾರೆ. ನರಿಕೊಂಬು ಗ್ರಾಮದ ಅಂತರ ಎಂಬಲ್ಲಿ ಸಾಲ್ಯಾನ್ ಕುಟುಂಬದ ತರವಾಡು ದೈವಸ್ಥಾನವಿದೆ. ಈ…

Read More

ಹಾಲಿನ ಬೆಲೆ ಏರಿಕೆ ಮಾಡಿಲ್ಲ, ಹೆಚ್ಚುವರಿ ಹಾಲಿಗೆ 2 ರೂ. ನಿಗದಿ ಮಾಡಲಾಗಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ನಂದಿನಿ ಹಾಲಿನ ಪ್ಯಾಕೇಟ್‌ ಗಳಲ್ಲಿ ಹಾಲಿನ ಪ್ರಮಾಣವನ್ನು 50 ಎಂ.ಎಲ್‌ ಹೆಚ್ಚಳ ಮಾಡಿ, ಹೆಚ್ಚುವರಿ ಹಾಲಿಗೆ 2 ರೂ. ದರ ನಿಗದಿಪಡಿಸಿ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆಯೇ ವಿನಃ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆಯೊಂದನ್ನು ಹೊರಡಿಸಿರುವ ಅವರು, ಅರ್ಧ ಲೀಟರ್‌ ಹಾಲಿನ ಪ್ಯಾಕೇಟ್‌ ನಲ್ಲಿ ಮುಂದೆ 550 ಎಂಎಲ್‌ ಹಾಲು ಹಾಗೂ ಲೀಟರ್‌ ಪ್ಯಾಕೇಟ್‌ ನಲ್ಲಿ 1,050 ಎಂಎಲ್‌ ಹಾಲು ಸಿಗಲಿದೆ ಎಂದರು. ಹಾಲು…

Read More

ಪ್ರಮಾಣವಚನ ಸ್ವೀಕಾರದ ವೇಳೆ ‘ಜೈ ಪ್ಯಾಲೆಸ್ತೀನ್’ ಎಂದು ‘ಸಂಸದ ಅಸಾದುದ್ದೀನ್ ಓವೈಸಿ’ ಘೋಷಣೆ

ನವದೆಹಲಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಂಗಳವಾರ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದಾಗ್ಯೂ, ಅವರು ಪ್ಯಾಲೆಸ್ಟೈನ್ ಪರ ಘೋಷಣೆಗಳನ್ನು ಕೂಗಿದಾಗ ವಿವಾದವನ್ನು ಉಲ್ಲೇಖಿಸಿದರು. ಆದರೆ, ಬಿಜೆಪಿಯ ಶೋಭಾ ಕರಂದ್ಲಾಜೆ ಅವರ ಆಕ್ಷೇಪದ ನಂತರ, ಅಧ್ಯಕ್ಷ ರಾಧಾಮೋಹನ್ ಸಿಂಗ್ ಅದನ್ನು ದಾಖಲೆಯಿಂದ ತೆಗೆದುಹಾಕುವಂತೆ ಸೂಚನೆ ನೀಡಿದರು. ಮಂಗಳವಾರ ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಓವೈಸಿ, ಪ್ಯಾಲೆಸ್ಟೈನ್ ಬೆಂಬಲಿಸಿ ಜೈ ಪ್ಯಾಲೆಸ್ಟೈನ್ ಘೋಷಣೆ ಕೂಗಿದರು. ಹೈದರಾಬಾದ್ ಸಂಸದ ಓವೈಸಿ ಜೈ ಪ್ಯಾಲೆಸ್ಟೈನ್ ಘೋಷಣೆ ಕೂಗಿದ ನಂತರ ಸಂಸತ್ತಿನಲ್ಲಿ ಮತ್ತು…

Read More