ಪುತ್ತೂರು : ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ, ಕೊಲೆ ಯತ್ನ : ಆರೋಪಿಯ ಬಂಧನ
ಪುತ್ತೂರು : ಗಲಾಟೆ ವಿಷಯವಾಗಿ ಕರೆ ಬಂದ ಹಿನ್ನಲೆ ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತನನ್ನು ಪೊಲೀಸರು ಬಂಧಿಸಿದ್ದಾರೆ. ಬನ್ನೂರು ಗ್ರಾಮದ ಕಂಜೂರು ನಿವಾಸಿ ತೇಜಸ್ ಬಂಧಿತ. ಜು.26 ರಂದು ಜಿಲ್ಲಾ ಕಂಟ್ರೋಲ್ ರೂಮ್ ನಿಂದ ಇವೆಂಟ್ ಬಂದಿದ್ದು, ಇವೆಂಟ್‌ನಲ್ಲಿ ಬಂದಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಘಟನಾ ಸ್ದಳವನ್ನು ಖಚಿತ ಪಡಿಸಿಕೊಂಡು ಘಟನಾ ಸ್ದಳವಾದ ಪುತ್ತೂರು ಬನ್ನೂರು ಗ್ರಾಮದ ಕಂಜೂರು ಎಂಬಲ್ಲಿ ತೇಜಸ್…

