ನಿಫಾ ಸೋಂಕಿತನಿಗೆ ಆರೈಕೆ ಮಾಡುತ್ತಿದ್ದ ಕಡಬ ಮೂಲದ ನರ್ಸ್ ಯುವಕ-8 ತಿಂಗಳಿನಿಂದ ಕೋಮಾದಲ್ಲಿ
ಕಡಬ: ಕೇರಳದಲ್ಲಿ ನಿಫಾ ಸೋಂಕಿತನಿಗೆ ಆರೈಕೆ ಮಾಡುತ್ತಿದ್ದ ಕಡಬ ಮೂಲದ ನರ್ಸ್ ಯುವಕನಿಗೆ ನಿಫಾ ಸೋಂಕು ತಗುಲಿ 8 ತಿಂಗಳಿನಿಂದ ಕೋಮಾದಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ದಾಳ ಸಮೀಪದ ತುಂಬ್ಯ ನಿವಾಸಿ ಟಿಟ್ಟೋ ತೋಮಸ್(24) ಕೋಮಾದಲ್ಲಿರುವ ಯುವಕ. ಬಿಎಸ್‌ಸಿ ನರ್ಸಿಂಗ್ ಪದವೀಧರನಾಗಿರುವ ಟಿಟ್ಟೋ ತೋಮಸ್ ಅವರು, ಕೇರಳದ ಕ್ಯಾಲಿಕಟ್‌ನಲ್ಲಿರುವ ಇಕ್ರಾ ಇಂಟರ್ ನ್ಯಾಷನಲ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. 2023ರ ಸೆಪ್ಟೆಂಬರ್‌ನಲ್ಲಿ ಟಿಟ್ಟೋ ತೋಮಸ್ ನಿಫಾ ವೈರಸ್ ಬಾಧಿತನಿಗೆ…

